ಜಗಳೂರು ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಮಾಜಿ ಪಪಂ ಅಧ್ಯಕ್ಷರಾದ ಆರ್ ತಿಪ್ಪೇಸ್ವಾಮಿ ಮೃತಪಟ್ಟಿದ್ದಾರೆ. ಶ್ರೀಯುತರು ಕಳೆದ ದಿನಗಳ ಹಿಂದೆ ಚಿತ್ರದುರ್ಗದ ಬಳಿ ಆಪಘಾತವಾಗಿ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವನ್ನಪಿರುತ್ತಾರೆ ‌ಎಂದು ತಿಳಿದು ಬಂದಿದೆ.

ಸುದ್ದಿ ಜಗಳೂರು

ಪಪಂ ಮಾಜಿ ಅಧ್ಯಕ್ಷರಾದ ಆರ್ ತಿಪ್ಪೇಸ್ವಾಮಿ (ಎಂ ಎಲ್ ಎ ) ನಿನ್ನೆ ರಾತ್ರಿ 11:00ಗೆ ಮೃತರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ

ಜಗಳೂರು ಪಟ್ಟಣ ಪಂಚಾಯಿತಿಯ 5 ನೇ ವಾರ್ಡಿನ ಸದಸ್ಯ ಆರ್ ತಿಪ್ಪೇಸ್ವಾಮಿ (ಎಂ.ಎಲ್ ಎ) ಇವರು ಬಿಜೆಪಿ ಪಕ್ಷದಲ್ಲಿ ಸತತ ಮೂರು ಬಾರಿ ಪಟ್ಟಣ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿ ಪಪಂ ಅದ್ಯಕ್ಷರಾಗಿ ಆಯ್ಕೆಯಾಗಿದ್ದರು ಇವರು ಜಗಳೂರು ಕ್ಷೇತ್ರದಲ್ಲಿ ಸದಾ ಎಂ.ಎಲ್ ಎ. ಎಂಬ ಪದವಿ ಗಳಿಸಿ ಜನಾನುರಾಗಿ ಅವರ ಅವಧಿಯಲ್ಲಿ ಅತ್ಯತ್ತಮ ಸೇವೆ ಸಲ್ಲಿಸಿ ಸಾಮಾಜಿಕ ಕ್ಷೇತ್ರದಲ್ಲಿ ಸದಾ ಅಸನ್ಮುಖಿಯಾಗಿದ್ದರು .ಅದರೆ ಕಳೆದ ದಿನಗಳ ಹಿಂದೆ ಖಾಸಗಿ ಕೆಲಸ ನಿಮಿತ್ತ ಚಿತ್ರದುರ್ಗಕ್ಕೆ ತೆರಳುವ ಸಂದರ್ಭದಲ್ಲಿ ಕಾರು ಆಪಘಾತದಲ್ಲಿ ಬಲವಾದ ಪೆಟ್ಟು ಬಿದ್ದು ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ನಂತರ ಅತ್ತಿರದ ಆಸ್ಪತ್ರೆ ನಿನ್ನೆ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ

ಶ್ರೀಯುತರಿಗೆ ಇಬ್ಬರು ಗಂಡು ಮಕ್ಕಳು ಒಂದು ಹೆಣ್ಣು ಮಗಳು ಒಟ್ಟು ಮೂರು‌ಜನ ಮಕ್ಕಳು ಸೇರಿದಂತೆ ಪತ್ನಿ ಹಾಗೂ ಆಪಾರ ಬಂಧು ಬಳಗದವರನ್ನು ಬಿಟ್ಟು ಆಗಲಿದ್ದು ಕುಟುಂಬದಲ್ಲಿ ದುಖದ ಗೋಳಿನ ಕಡಲು ಮುಗಿಲು ಮಟ್ಟುವಂತಿದೆ .ಜಗಳೂರು ಪಟ್ಟಣದ ರುದ್ರಭೂಮಿಯಲ್ಲಿ ಇಂದು ಮದ್ಯಾಹ್ನ ಸುಮಾರು 4 ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ ಇವರ ಸಾವಿನ ಸುದ್ದಿ ಕೇಳಿ ಹಲವು ಗಣ್ಯರಾದ ಹಾಲಿ ಶಾಸಕ .ಬಿ ದೇವೇಂದ್ರಪ್ಪ ಮಾಜಿ ಶಾಸಕರಾದ ಎಸ್ ವಿ ರಾಮಚಂದ್ರಪ್ಪ .ಹೆಚ್ ಪಿ ರಾಜೇಶ್ .ಸೇರಿದಂತೆ ಪಪಂ ಅಧ್ಯಕ್ಷರು ಮತ್ತು ಸದಸ್ಯರು ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ .

Leave a Reply

Your email address will not be published. Required fields are marked *

You missed

error: Content is protected !!