ಪತ್ರಕರ್ತ ಜಗದೀಶ್ ಮೇಲೆ ಮಾರಣಾಂತಿಕ ಹಲ್ಲೆ ,ಆರೋಪಿಗಳನ್ನು ಬಂಧಿಸಿ ಶಿಕ್ಷಿಸುವಂತೆ ತಾಲ್ಲೂಕು ಪತ್ರಕರ್ತರ ಸಂಘದಿಂದ ಪೋಲೀಸರಿಗೆ ಮನವಿ
ಜಗಳೂರು: ಸಂಯುಕ್ತ ಕರ್ನಾಟಕ ಪತ್ರಿಕೆಯ ತಾಲೂಕು ವರದಿಗಾರ, ಕಾ.ನಿ.ಪ.ಸಂಘದ ಖಜಾಂಚಿಯಾದ ಕೆ.ಎಂ.ಜಗದೀಶ್ ಮೇಲೆ ಭಾನುವಾರ ರಾತ್ರಿ ಇಬ್ಬರು ದುಷ್ಕರ್ಮಿಗಳು ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದು, ಜಗದೀಶ್ ಎಡ ಭುಜದ ಮೂಳೆಯಲ್ಲಿ ಬಿರುಕು ಮತ್ತು ಅಂಗೈಗೆ ಬಲವಾದ ಪೆಟ್ಟು ಬಿದ್ದಿದ್ದು ಈ ಸಂಬಂಧ ಜಗಳೂರು ಪೋಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದು ತನಿಖೆ ಕೈಗೊಂಡಿದ್ದಾರೆ.
ಘಟನೆವಿವರ:
ಭಾನುವಾರ ರಾತ್ರಿ ಊಟ ಮುಗಿಸಿಕೊಂಡು ವಾಯುವಿಹಾರಕ್ಕೆ ಬಿದರಕೆರೆ ರಸ್ತೆಯ ನಂದಿನಿ ಪಾರ್ಲರ್ ಸಮೀಪದ ಸೇತುವೆ ಸಮೀಪ ಸಂಬಂಧಿಕರ ಜೊತೆ ಮೊಬೈಲ್‍ನಲ್ಲಿ ಮಾತನಾಡಿಕೊಂಡು ನಡೆದು ಹೋಗುತ್ತಿದ್ದಾಗ ಕತ್ತಲಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಜಗದೀಶ್ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ತಲೆಗೆ ಹೊಡೆದು ಕೊಲ್ಲುಲು ದೊಣ್ಣೆಗಳಿಂದ ಬೀಸಿದಾಗ ಎಡ ಗೈ ಅಡ್ಡಕೊಟ್ಟ ಪರಿಣಾಮ ತಲೆಗೆ ಬೀಳುವ ಪೆಟ್ಟು ಕೈಗೆ ಬಿದ್ದಿದ್ದು ಭುಜದ ಚರ್ಮ ಕಿತ್ತು ಹೋಗಿ ರಕ್ತ ಸುರಿಯುತ್ತಿತ್ತು. ಆಗ ಎಚ್ಚೆತ್ತ ಜಗದೀಶ್ ತಪ್ಪಿಸಿಕೊಳ್ಳಲು ಕೈಲಿದ್ದ ಮೊಬೈಲ್ ಎಸೆದು, ಚಪ್ಪಲಿಗಳನ್ನು ಬಿಟ್ಟು ಮುಖ್ಯ ರಸ್ತೆಗೆ ಓಡಿ ಹೋಗಿದ್ದಾರೆ. ಅಷ್ಟರಲ್ಲಾಗಲೇ ದುರುಳರು ಕತ್ತಲಲ್ಲಿ ಪರಾರಿಯಾಗಿ ಓಡಿಹೋಗಿದ್ದಾರೆ. ದಾರಿಯಲ್ಲಿ ಬಂದ ದ್ವಿಚಕ್ರವಾಹನ ಸವಾರರನ್ನು ತಡೆದು ತಕ್ಷಣ ಪೊಲೀಸ್ ಠಾಣೆಗೆ ಹೋಗಿ ರಾತ್ರಿ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಸಾರ್ವಜನಿಕ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆಗೆ ಕಾರಣ ತಿಳಿದು ಬಂದಿಲ್ಲ. ಘಟೆನೆ ಸಂಬಂಧ ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ದಾಖಲಾಗಿದೆ. ಸಭ್‍ಇನ್‍ಸ್ಪೆಕ್ಟರ್ ಹೆಚ್.ಗಾದಿಲಿಂಗಪ್ಪ ಮಂಗಳವಾರ ಸ್ಥಳಕ್ಕೆ ಆಗಮಿಸಿ ಪರೀಶೀಲಿಸಿದರು.
ಆರೋಪಿ ಪತ್ತೆಗೆ ಮನವಿ:
ಜಗಳೂರು ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ಚಿದಾನಂದ ನೇತೃತ್ವದಲ್ಲಿ ಅನೇಕ ಪತ್ರಕರ್ತರು ಸೇರಿ ಪೊಲೀಸ್ ಸಭ್ ಇಸ್ಪೆಕ್ಟರ್ ಹೆಚ್.ಗಾದಿಲಿಂಗಪ್ಪ ಅವರಿಗೆ ಮನವಿ ಸಲ್ಲಿಸಿ ಪತ್ರಕರ್ತ ಕೆ.ಎಂ.ಜಗದೀಶ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.
ಸಭ್‍ಇನ್‍ಸ್ಪೆಕ್ಟರ್ ಹೆಚ್.ಗಾದಿಲಿಂಗಪ್ಪ ಮನವಿ ಸ್ವೀಕರಿಸಿ ಕೆ.ಎಂ.ಜಗದೀಶ್ ಅವರ ಮೇಲೆ ಹಲ್ಲೆ ಮಾಡಿದವರ ಅನಮೇದೇಯ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಶೀಘ್ರವಾಗಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು.
ಭಾನುವಾರ ರಾತ್ರಿ ಊಟ ಮುಗಿಸಿಕೊಂಡು ವಾಯುವಿಹಾರಕ್ಕೆ ಬಿದರಕೆರೆ ರಸ್ತೆಯ ನಂದಿನಿ ಪಾರ್ಲರ್ ಸಮೀಪದ ಸೇತುವೆ ಸಮೀಪ ಸಂಬಂಧಿಕರ ಜೊತೆ ಮೊಬೈಲ್‍ನಲ್ಲಿ ಮಾತನಾಡಿಕೊಂಡು ನಡೆದು ಹೋಗುತ್ತಿದ್ದಾಗ ಕತ್ತಲಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಹಿಂಬದಿಯಿಂದ ಬಂದು ಶುಚು ಮಾಡುವ ಸಂದರ್ಭದಲ್ಲಿ ನನ್ನ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ತಲೆಗೆ ಹೊಡೆದು ಕೊಲ್ಲುಲು ದೊಣ್ಣೆಗಳಿಂದ ಬೀಸಿದಾಗ ಎಡ ಗೈ ಅಡ್ಡಕೊಟ್ಟಿದ್ದರಿಂದ ಬದುಕಿದ್ದೇನೆ. ಆರೋಪಿಗಳನ್ನು ಶೀಘ್ರ ಪತ್ತೆ ಮಾಡಿ ಶಿಕ್ಷಿಸುವಂತೆ ಪತ್ರಕರ್ತ ಕೆ.ಎಂ.ಜಗದೀಶ್ ಪೋಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಉಪಾಧ್ಯಕ್ಷ ಡಿ.ಶ್ರೀನಿವಾಸ್, ಹಿರಿಯ ಪತ್ರಕರ್ತ ಎಂ.ಸಿ.ಬಸವರಾಜು, ಸಂಘದ ತಾಲ್ಲೂಕು ಪ್ರಧಾನಕಾರ್ಯದರ್ಶಿ ಲೋಕೇಶ್ ಎಂ.ಐಹೊಳೆ, ಉಪಾಧ್ಯಕ್ಷರಾದ ಸಯಿದ್ ವಾಸಿಂ, ಪದಾಧಿಕಾರಿಗಳಾದ ಧನ್ಯಕುಮಾರ್, ಹೆಚ್.ಬಾಬು ಮರೇನಹಳ್ಳಿ, ಸೋಮನಗೌಡ, ಎ.ಏಂ.ಮಂಜಯ್ಯ, ಮಾಧಿಹಳ್ಳಿ ಮಂಜಪ್ಪ ಇತರರು ಇದ್ದರು.
