ಕಾರ್ಮಿಕರ ಹಕ್ಕುಗಳ ಬಗ್ಗೆ ಮತ್ತು ವಿಶ್ವಕಾರ್ಮಿಕರ ದಿನಾಚರಣೆ ಬಗ್ಗೆ ಕಾಳಜಿ ವಹಿಸದ ಲೇಬರ್ ಇನ್ಸಪಕ್ಟರ್ ಗೆ ಕ್ರಮಕೈಗೊಳ್ಳುವೆ ಶಾಸಕ ಗರಂ
ಜಗಳೂರು.
ಕಾಯಕದಲ್ಲಿ ದೇವರನ್ನು ಕಾಣುವಂತ ಶ್ರಮದ ಕೆಲಸ ಕಾರ್ಮಿಕ ವರ್ಗದ ಕಾಯಕ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು
ಪಟ್ಟಣದ ಗುರುಭವನದಲ್ಲಿ ಗುರುವಾರ ಅಶೋಕ ಚಕ್ರ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನ ಉದ್ಘಾಟಿಸಿ ಅವರು ಮಾತಾನಾಡಿದವರು, ಬಸವಣ್ಣನ ದೃಷ್ಠಿಯಲ್ಲಿ ಕಾಯಕವೇ ಕೈಲಾಸ ಕಸಯಕದಲ್ಲಿ ದೇವರನ್ನ ಕಾಣುವಂತ ಕಾಯಕದ ತಮ್ಮ ಉಪಕರಣಗಳಲ್ಲಿ ದೇವರಿದ್ದಾನೆ . ಕಟ್ಟಡಗಳುನ್ನು ನಿರ್ಮಿಸುವಾಗ ಎತ್ತರದಲ್ಲಿದ್ದು ಕೆಲಸ ಮಾಡುವಾಗ ಜಾಗೃತಿ ವಹಿಸಬೇಕು, ನೀವೇ ಕುಟುಂಬಕ್ಕೆ ಆಧಾರ ಸ್ತಂಭವಾಗಿರುವುದರಿಂದ ದುಶ್ಚಟಗಳಿಂದ ದೂರವಿದ್ದು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ನಾನು ಅಧಿಕಾರದಲ್ಲಿ ಇರುವವರೆಗೂ ನಿಮ್ಮ ಸೇವೆಗೆ ಸದಾ ಸಿದ್ಧ. ನಮ್ಮ ಪಕ್ಷ ಬಡವರ ಪರವಾದ ಪಕ್ಷವಾಗಿದ್ದು ನಿಮ್ಮೆಲ್ಲ ಕಷ್ಟಗಳನ್ನು ಅರಿತು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪುವಂತೆ ನೋಡಿಕೊಳ್ಳುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಮಿಕ ಇಲಾಖೆ ಅಧಿಕಾರಿಗಳು ಇಂತ ಮಹತ್ವದ ಸಭೆಗೆ ಹಾಜುರಾಗಿ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಅಧಿಕಾರಿಗಳ ನಿರ್ಲಕ್ಷ್ಯತೆ ಇರುವುದು ಕಂಡು ಬಂದಿದ್ದು ನಾನು ನಿರ್ಧಾಕ್ಷಣ್ಯೆವಾಗಿ ಕ್ರಮಕೈಗೊಳ್ಳುವೆ ಎಂದರು
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಮುಖಂಡ ಕೆ.ಪಿ.ಪಾಲಯ್ಯ ಮಾತನಾಡಿ, ತಾಲೂಕಿನಲ್ಲಿ ಸುಮಾರು 10ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದರು ಸಹ
ಕಾರ್ಮಿಕರ ಕಾರ್ಡ್ ಕೇವಲ 300 ನೊಂದಾಣೆಯಾಗಿರುವುದೇ ಬೇಸರದ ಸಂಗತಿ. ಇದರ ಬಗ್ಗೆ ನಿಮ್ಮ ಕಾರ್ಮಿಕ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲ್ಯಕ್ಷತೆಧೊರಣೆಯಿದೆ. ಸಂಘದ ಅಧ್ಯಕ್ಷರು ಜವಾಬ್ದಾರಿ ವಹಿಸಿಕೊಂಡು ನೈಜ ಕಾರ್ಮಿಕರಿಗೆ ಕಾರ್ಮಿಕರ ಗುರುತಿನ ಚೀಟಿ ಕೊಡಿಸುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಕಾರ್ಡ್ ಇದ್ದವರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಎಲ್ಲರೂ ಒಗ್ಗಟ್ಟಾಗಿ ಸಂಘವನ್ನು ಬಲಿಷ್ಠ ಪಡಿಸಿಕೊಂಡು ಕೇವಲ ದಿನಾಚರಣೆಯಲ್ಲಿ ಸೇರದೆ ವರ್ಷದಲ್ಲಿ ಮೂರು ನಾಲ್ಕು ಬಾರಿ ಸಭೆ ಕರೆದುಕೊಂಡು ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿಕೊಂಡು ಸರ್ಕಾರದ ಗಮನ ಸೆಳೆಯಿರಿ ಈಗಿನ ಸಚಿವರಾದ ಸಂತೋಷ್ ಲಾಡ್ ನೋವುಗಳಿಗೆ ಸ್ಪಂದಿಸುವವರಾಗಿದ್ದಾರೆ ಎಂದು ಸಲಹೆ ನೀಡಿದರು.
ವಕೀಲ ಆರ್.ಓಬಳೇಶ್ ಕಾರ್ಯಕ್ರಮ ಉದ್ದೇಶಿ ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶೋಕಚಕ್ರ ಕಟ್ಟಡ ಕಾರ್ಮಿಕರ ಸಂಘದ ತಾಲೂಕಾಧ್ಯಕ್ಷ ಪಾಪಣ್ಣ ಹೆಚ್ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಾಗಿತ್ತು ಅನೇಕರು ರಕ್ತದಾನದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಎಸ್ .ಸುರೇಶ್ ಗೌಡ್ರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಷಂಶೀರ್ ಅಹಮದ್, ಪ.ಪಂ ಸದಸ್ಯ ಮಹಮದ್ ಅಲಿ, ಶ್ರೀ ಸಿಮೆಂಟ್ ಮುಖ್ಯಸ್ಥರಾದ ಬಸವರಾಜ್ ಬಾಗೇವಾಡಿ, ವೆಂಕಟರೆಡ್ಡಿ, ವಿನಯ್ ಕೃಷ್ಣಮೂರ್ತಿ, ಸಂತೋಷ .ಚಿಗಟೇರಿ ಜಿಲ್ಲಾ ಆಸ್ಪತ್ರೆ ವ್ಯವಸ್ಥಾಪಕ ದುರ್ಗೆಶ್ ಪೂಜಾರ್, ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ಕಟ್ಟಡ ಕಾರ್ಮಿಕರಾದ ಪ್ರಕಾಶ್, ಈರಣ್ಣ, ಚಂದ್ರಪ್ಪ, ತಿಪ್ಪೇಸ್ವಾಮಿ, ಅಮೀದ್, ಬಾಬಣ್ಣ, ನಿಂಗಪ್ಪ .ವ್ಯಾಸಗೊಂಡನಹಳ್ಳಿ ಹಾಲೇಶ್ ಸೇರಿದಂತೆ ಹಾಜುರಿದ್ದರು

