ಸುದ್ದಿ ಜಗಳೂರು
ಜಗಳೂರು
ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರ ಕಾರಿಗೆ ಕಾರೊಂದು ಡಿಕ್ಕಿ
ಜಗಳೂರು
ಕಿಷ್ಕಿಂದೆಯಂತ ರಸ್ತೆ ವಾಹನ ಸವಾರರು ಹೈರಾಣ ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರ ಕಾರಿಗೆ ಕಾರೊಂದು ಡಿಕ್ಕಿ
ಜಗಳೂರು ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದು ವಾಹನ ಸಂಚಾರ ಮಾಡಬೇಕಾದ ಅನಿವಾರ್ಯವಾಗಿದೆ.
ಶನಿವಾರ ಬೆಳಿಗ್ಗೆ ಸುಮಾರು 12 ಗಂಟೆ ಸಮಯದಲ್ಲಿ ಪಟ್ಟಣದ ಕಲ್ಲೇಶ್ವರ ಲಾಡ್ಜ್ ಮುಂಬಾಗದಲ್ಲಿ ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರ ಕಾರಿಗೆ ಅನಾಮದೇಯ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನ ನಂಬರ್ ಪ್ಲಟ್ ಮುಂಬಾಗದ ಬಂಪರ್ ಸಮೇತ ಡ್ಯಾಮೇಜ್ ಆಗಿದೆ .ಸದ್ಯ ಕಾರಿನಲ್ಲಿ ಯಾರು ಇರಲಿಲ್ಲ ರಸ್ತೆ ಬದಿಯಲ್ಲಿ ನಿಂತಿರುವ ಕಾರಿಗೆ ರಭಸವಾಗಿ ಬಂದ ಕಾರು ಡಿಕ್ಕಿ ಹೊಡೆಯಲಾಗಿದೆ . ಅಲ್ಲಿಯೇ ಇದ್ದ ಮಾಜಿ ಶಾಸಕರ ಕಾರ್ಯಕರ್ತ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ ಅನಾಮಧೇಯ ಕಾರಿನ ಡ್ರೈವರ್ ನ ಮೇಲೆ ದಬಾಯಿಸಲು ಮುಂದಾಗಿದ್ದ ಕಾರ್ಯಕರ್ತರನ್ನ ಮಾಜಿ ಶಾಸಕರು ತಡೆದು ಸಮಾಧಾನಪಡಿಸಿದರು.
ಟ್ರಾಪಿಕ್ ಜಾಮ್ ಆದ ಸಂದರ್ಭ ಕಂಡು ಬಂದಿತು
. ಸ್ಥಳಕ್ಕೆ ಪೊಲೀಸ್ ಸಿಬ್ಬಂಧಿ ಆಗಮಿಸಿ ಡಿಕ್ಕಿ ಹೊಡೆದ ಕಾರಿನ ಮಾಲಿಕನ ಮೇಲೆ ಪ್ರಕರಣ ದಾಖಲಿಸಿಕೊಂಡರು.
ತಕ್ಷಣ ಮಾಜಿ ಶಾಸಕ ಹೆಚ್ ಪಿ ರಾಜೇಶ್ ಸಂಬಂಧಿಸಿದ ಲೋಕಪಯೋಗಿ ಇಲಾಖೆ ಅಧಿಕಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗರಾಜ್ ರವರಿಗೆ ತರಾಟೆ ತೆಗೆದುಕೊಂಡು ಗರಂ ಆಗಿದ್ದಾರೆ.
ರಸ್ತೆ ಆಗಲಿಕರಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಕಾಮಗಾರಿ ಚುರುಕುಗೋಳಿಸಿ ಗುತ್ತಿಗೆದಾರರು ಆಗಲಿಕರಣದ ವೇಳೆ ಮುಂಜಾಗ್ರತೆ ರಸ್ತೆ ವ್ಯವಸ್ಥೆ ಮಾಡಿಕೊಳ್ಳಬೇಕು ಗುತ್ತಿಗೆದಾರರ ರಸ್ತೆ ಆಗೆದು ಪರಾರಿಯಾಗಿದ್ದಾನೆ ಆಗುವ ಆಪಾಘಾತಗಳಿಗೆ ಯಾರು ಹೊಣೆ ಎಂದು ಪ್ರಶ್ನೇಸಿದರು.
ರಸ್ತೆ ಆಗಲಿಕರಣ ನೀಯಮದಂತೆ ಮಲ್ಪೆ ಮೊಳಕಾಲ್ಮರು ರಸ್ತೆ 69 ಅಡಿ ಆಗಲಿಕರಣ ಮಾಡಬೇಕು ರಸ್ತೆ ಬದಿಯಲ್ಲಿ ಮೊದಲು ಆಗಲಿಕರಣ ಮಾಡದೇ ಕೇವಲ ನಡು ರಸ್ತೆಯನ್ನ ಕಿತ್ತು ಕಾಮಗಾರಿ ಚುರುಕಾಗಿ ಮಾಡದೇ ಜನರ ಜೀವದ ಮೇಲೆ ಚೆಲ್ಲಾಟವಾಡುತ್ತಿದ್ದಿರಿ ವಾಹನ ಸವಾರರು ಕಿಷ್ಕೆಂದೆಯಂತ ರಸ್ತೆಯಲ್ಲಿ ಒಡಾಡುವುದೆ ದುಸ್ತರವಾಗಿ ಆಪಾಘಾತಕ್ಕೆ ಎಡೆಮಾಡಿಕೊಟ್ಟಂತಾಗಿದೆ ಎಂದು ತರಾಟೆ ತೆಗೆದುಕೊಂಡ ಪ್ರಸಂಗ ಜರುಗಿತು.

