ಮಲ್ಪೆ ಮೋಳಕಾಲ್ಮರು ರಸ್ತೆ ಅಭಿವೃದ್ದಿ 69 ಅಡಿ ಅಗಲಿಕರಣ ಮಾಡುವಂತೆ ತಾಲ್ಲೂಕು ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ಶಾಸಕರಿಗೆ ಮನವಿ ಸಲ್ಲಿಸಿ ವಿನಂತಿಸಿಕೊಂಡರು

ಜಗಳೂರು ಪಟ್ಟಣದಲ್ಲಿ ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ಭಾನುವಾರ ಶಾಸಕರ ನಿವಾಸಕ್ಕೆ ತೆರಳಿ‌ ಆಗಲಿಕರಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಿ ಕೆಲವೊತ್ತು ಚರ್ಚೆ ನಡೆಸಿದರು. ಪಟ್ಟಣದ ಮುಖ್ಯ ರಸ್ತೆ ಆಗಲಿಕರಣ ಸಂಬಂಧಿಸಿದಂತೆ 69 ಅಡಿ ಮಾರ್ಕಿಂಗ್ ಮಾಡಿದ್ದು ಕೇವಲ 50 ಅಡಿ ಆಗಲಿಕರಣ ಮುಂದಿನ ಭವಿಷ್ಯಕ್ಕೆ ರಸ್ತೆ ಸಾಕಾಗುವುದಿಲ್ಲ ಸರ್ಕಾರ ನೀಯಮನುಸಾರ 69 ಅಡಿ ಹೊಡೆಯುವಂತೆ ತಾಲ್ಲೂಕು ವಿವಿಧ ಪ್ರಗತಿಪರ ಸಂಘಟನೆ ಮುಖಂಡರುಗಳು ಮನವಿ ಸಲ್ಲಿಸಿದರು.
ಈ ವೇಳೆ ವಕೀಲರಾದ ಆರ್ ಒಬಳೇಶ್‌ ಮಾತನಾಡಿ ಪಟ್ಟಣದ ಚಳ್ಳಕೆರೆ ರಸ್ತೆಯಿಂದ ಅಂಬೇಡ್ಕರ್ ವೃತ್ತದವರೆಗೂ ರಸ್ತೆ ಆಗಲಿಕರಣ ಅಭಿವೃದ್ದಿ ಮಾಡುವ ಬೆಳವಣಿಗೆ ಪ್ರಗತಿದಾಯಕವಾಗಿದೆ ಕಳೆದ ಸುಮಾರು ವರ್ಷಗಳಿಂದ ಅಭಿವೃದ್ದಿ ಮರಿಚಿಕೆಯಾಗಿತ್ತು ಇದೀಗ ತಾವು ಮಾಡು ಅಭಿವೃದ್ದಿ ಕೆಲಸಕ್ಕೆ ನಮ್ಮ ಸಹಕಾರ ಸದಾಯಿದೆ ಆದರೆ ಜಗಳೂರು ಪ್ರದೇಶ ಅಭಿವೃದ್ದಿಯಾಗಬೇಕಾದರೆ ಪಟ್ಟಣದ ಮುಖ್ಯರಸ್ತೆ ಆಗಲಿಕರಣ ಅನಿವಾರ್ಯವಾಗಿದ್ದು ಕೇವಲ 50 ಅಡಿ ಆಗಲಿಕರಣ ಸಾಕಾಗುವುದಿಲ್ಲ 69 ಅಡಿ ರಸ್ತೆ ಅಭಿವೃದ್ದಿ ಮಾಡುವಂತೆ ಶಾಸಕರಿಗೆ ಮನವಿ ಪತ್ರ ನೀಡಿ ವಿನಂತಿಸಿಕೊಂಡರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಬಿ ದೇವೇಂದ್ರಪ್ಪ ಈಗಾಗಲೇ ಕೊರ್ಟ್ 69 ಅಡಿ ರಸ್ತೆ ಆಗಲಿಕರಣ ಮಾಡಲು ಆದೇಶ ನಿಡಿದೆ ಆದರೆ ರಸ್ತೆ ಬದಿಯಲ್ಲಿರುವ ಅಂಗಡಿ ಮುಗ್ಗಟುಗಳ ಕೆಲ ಮನೆಗಳ ಮಾಲಿಕರ ಜಾಗದ ಹಕ್ಕುಪತ್ರಗಳು ಮೂಲ ದಾಖಲೆಗಳಿದ್ದರೆ ಪರಿಹಾರ ವಿತರಿಸಿ ಹೊಡೆಯುವಂತೆ ಸೂಚನೆ ನೀಡಿದೆ ಒಂದು ವೇಳೆ ಜಾಗ ಸರ್ಕಾರಿ ಸ್ವಾಮ್ಯದಾಗಿದ್ದರೆ ಅಭ್ಯಂತರವಿಲ್ಲದೆ ಹೊಡೆಯಿರಿ ಎಂದು ಆದೇಶಿಸಿದೆ ಇದರನ್ವಯ ಈಗಾಗಲೇ ದಾಖಲಾತಿ ಇರುವಂತ ಜಾಗದ ಮಾಲಿಕರು ಕೋರ್ಟ್ ಮೊರೆ ಹೋದ ಹಿನ್ನಲೆಯಲ್ಲಿ ಯತಾಸ್ಥಿತಿ ಕಾಪಾಡುವಂತೆ‌ ಆದೇಶದ ಮೇರೆಗೆ ನಾವು ಇದೀಗ ಸರ್ಕಾರದ ಅನುದಾನ 20 ಕೋಟಿ ಹಣ ಬಂದಿದ್ದು ವಾಪಸ್ಸು ಆಗದಂತೆ ನಾವು ನಮ್ಮಗೆ ಸೇರಿದ ರಸ್ತೆಯನ್ನ ಆಗೆದು ಆಗಲಿಕರಣಕ್ಕಾಗಿ ಮುಂದಾಗಿದ್ದೆವೆ. ಸಿಸಿ ರಸ್ತೆ ಸೇರಿದಂತೆ ಉತ್ತಮ ಡ್ರೈನಜ್ ಚರಂಡಿ ಮಾಡಲು ಕಾಲಾವಕಾಶ ಬೇಕಾಗಿರುವುದರಿಂದ ರಸ್ತೆ ಮಂದಗತಿಯಲ್ಲಿ ಸಾಗುತ್ತಿದೆ ಆಗಲಿಕರಣ ಶತ ಸಿದ್ದ ಆದರೆ ವರ್ತಕರು ನಮ್ಮೊಂದಿಗೆ ಸಭೆ ನಡೆಸಿ 50 ಅಡಿ ಆಗಲಿಕರಣ ಮಾಡಲು ತಿರ್ಮಾನ ತೆಗೆದುಕೊಂಡಿದ್ದೆವೆ. ಇನ್ನುಳಿದಂತೆ ಮುಂದಿನ ದಿನಗಳಲ್ಲಿ ಉಳಿದ 19 ಅಡಿ ದಾಖಲೆಗಳನ್ನು ಪರಿಶೀಲನೆ ನಡೆಸಿ ಮಾರ್ಕಿಂಗ್ ನೀಯಮದಂತೆ ರಸ್ತೆ ಹೊಡೆದು ಅಭಿವೃದ್ದಿಪಡಿಸುವ‌ ಚಿಂತನೆಯಿದೆ.

ಸದ್ಯಕ್ಕೆ ಇದೀಗ ಕಾಮಗಾರಿ ಪ್ರಗತಿಯಲ್ಲಿದ್ದು ಸಿಸಿ ರಸ್ತೆ ಮಾಡಲು ಮದ್ಯದಲ್ಲಿದ್ದ ಡಿವೈಡರ್ ಹಾಗೂ ಪುಟ್ ಪಾತ್ ತೆರವುಗೋಳಿಸಿ ರಸ್ತೆ ಆಗಲಿಕರಣಕ್ಕೆ ಮುಂದಾಗಿದ್ದು 50 ಅಡಿ ಹೊಡೆಯಲು ವರ್ತಕರು ಅವರೆ ಅಂಗಡಿ ಮುಗ್ಗಟುಗಳ ತೆರವುಗೋಳಿಸಿ ಸಹಕರಿಸುವರು ಎಂದು ಸ್ವಷ್ಟನೆ‌ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ತಮಲೇಹಳ್ಳಿ‌ ಡಿ ಅರ್. ಹನುಮಂತಪ್ಪ ಪ್ರಾಂಶುಪಾಲರಾದ ನಾಗಲಿಂಗಪ್ಪ .ಶಿಕ್ಷಕರಾದ ನಿಂಗನಹಳ್ಳಿ ಲೋಕೇಶ್ .ಮಹಿಳಾ ರೈತ ಸಂಘಟಕರಾದ ದೋಣಿಹಳ್ಳಿ ಚೌಡಮ್ಮ.ಇಂದ್ರಮ್ಮ .ಮುಖಂಡರಾದ ಚಿಕ್ಕಮ್ಮನಹಟ್ಟಿ ಹನುಮಂತಪ್ಪ. ವಕೀರಾದ ಓಬಣ್ಣ. .ದಸಂಸ ಮಲೆ ಮಾಚಿಕೆರೆ ಸತೀಶ್.ಪ್ರಗತಿಪರ ಸಂಘಟನೆ ಪದಾಧಿಕಾರಿಗಳಾದ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ. ಧನ್ಯಕುಮಾರ್. ಬಸವರಾಜ ಸಿದ್ದಮ್ಮನಹಳ್ಳಿ. ಎಸ್ ಎಪ್ ಐ ಮುಖಂಡ ಅನಂತರಾಜ್. ಕರವೇ ತೀಪ್ಪೇಶಿ. ಕರವೇ ಲಿಂಗರಾಜ್.ನಾಗರಾಜ್.. ಸೇರಿದಂತೆ ಮುಂತಾದವರು ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!