filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46;

3 ಕೊಟಿ ರೂಗಳಲ್ಲಿ ಜಗಳೂರು ತಾಲ್ಲೂಕಿನ ಕಸವನಹಳ್ಳಿ ರಸ್ತೆ ಹಾಗೂ ಬಸವನಕೋಟೆ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಬಿ.ದೇವೇಂದ್ರಪ್ಪ

ಜಗಳೂರು ಸುದ್ದಿ:

ತಾಲ್ಲೂಕಿನ‌ ಕಸವನಹಳ್ಳಿ ರಸ್ತೆ ಅಭಿವೃದ್ದಿಪಡಿಸಲು 1 ಕೋಟಿ ವೆಚ್ಚದ ಡಾಂಬರ ರಸ್ತೆ ನಿರ್ಮಾಣ ಹಾಗೂ ಬಸವನಕೋಟೆ ಗ್ರಾಮದಲ್ಲಿ‌ ಸೊಮವಾರ 2 ಕೋಟಿ ರೂ ಡಾಂಬರ ರಸ್ತೆ ಸೇರಿದಂತೆ ಒಟ್ಟು 3 ಕೋಟಿ ರೂಗಳಲ್ಲಿ ಎರಡು ರಸ್ತೆಗಳ ಅಭಿವೃದ್ದಿ ಕಾಮಗಾರಿಗಳಿಗೆ ಸೋಮವಾರ ಕ್ಷೇತ್ರದ ಶಾಸಕ ಬಿ. ದೇವೇಂದ್ರಪ್ಪ ಶಂಕುಸ್ಥಾಪನೆ ನೇರವೇರಿಸಿದರು.

ತಾಲ್ಲೂಕಿನ ಬಸವನಕೋಟೆ ಗ್ರಾಮದಲ್ಲಿ ಹೊಸಕೆರೆ ಅರಸಿಕೆರೆ ರಸ್ತೆ ಆಭಿವೃದ್ದಿಗೆ 200 ಲಕ್ಷ ಕಸವನಹಳ್ಳಿ ರಸ್ತೆ ಅಭಿವೃದ್ದಿಪಡಿಸಲು 1 ಕೋಟಿ ಸೇರಿದಂತೆ ಒಟ್ಟು 3 ಕೋಟಿ ವೆಚ್ಚದ ರಸ್ತೆ‌ ಅಭಿವೃದ್ದಿಗೆ ಚಾಲನೆ ನೀಡಿ‌ ನಂತರ ಕ್ಷೇತ್ರದ ಶಾಸಕರು ಉದ್ದೇಶಿಸಿ ಮಾತನಾಡಿದರು ಶಾಸಕರ ಅನುದಾನದಡಿಯಲ್ಲಿ ಅನುದಾನ ಕಲ್ಪಿಸಿ ಈ ಬಾಗದ ಜನರ ಬಹುದಿನಗಳ ಬೇಡಿಕೆಗೆ ತಕ್ಕಂತೆ ಅನುದಾನ ಕಲ್ಪಿಸಿ ಅಭಿವೃದ್ದಿಗೆ ಒತ್ತು ನೀಡಲಾಗಿದೆ. ರಸ್ತೆ ಅಭಿವೃದ್ದಿಗೆ ಗುತ್ತಿಗೆದಾರರು ಉತ್ತಮ ಪರಿಕರಗಳನ್ನು ಬಳಸಿ
ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಹಾಗೂ,ಅಧಿಕಾರಿಗಳಿಗೆ ಗಮನಹರಿಸುವಂತೆ ತಿಳಿಸಿದರು.

ಪಿಡಬ್ಲೂಡಿ ಇಲಾಖೆ ಎಇಇ ನಾಗರಾಜ್ ಮಾತನಾಡಿ,ಲೋಕೋಪಯೋಗಿ ಇಲಾಖೆ ವತಿಯಿಂದ ಕಸವನಹಳ್ಳಿ ರಸ್ತೆ ಕಾಮಗಾರಿಯು ₹1ಕೋಟಿ ವೆಚ್ಚದಲ್ಲಿ 5.5ಮೀ ಅಗಲ,900 ಮೀಟರ್ ಅಳತೆಯಲ್ಲಿ ಹಾಗೂ ಬಸವನ ಕೋಟೆ ಗ್ರಾಮದ ಹೊರಹೊಲಯದಿಂದ 1.5 ಕಿಮೀ ದೂರದ ಗ್ಯಾಸ್ ಕಂಪನಿವರೆಗೆ ಮತ್ತು ಹೊಸಕೆರೆ ಮುಖ್ಯ ರಸ್ತೆಯ ಆಯ್ದ ಭಾಗಗಳಲ್ಲಿ ದುರಸ್ಥಿ,ಸೇರಿದಂತೆ ಒಟ್ಟು ₹2ಕೋಟಿ ವೆಚ್ಚದ ರಸ್ತೆ ಕಾಮಗಾರಿ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಷಂಷೀರ್ ಆಹಮದ್ .ಕಾಂಗ್ರೇಸ್ ಮುಖಂಡ ಬಿ ಮಹೇಶ್ವರಪ್ಪ ಲೋಕಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗರಾಜ ಎಎಇ. ಪುರುಷೋತ್ತಮ. ಬಸವನಕೋಟೆ ಗ್ರಾಪಂ ಅಧ್ಯಕ್ಷರಾದ ಮರಿಯಮ್ಮ.ಗ್ರಾಪಂ ಸದಸ್ಯರಾದ ಕೊಟ್ರೇಶ್.ದೇವರಾಜ್ ಗುತ್ತಿಗೆದಾರರಾದ ಹನುಮಂತನಾಯ್ಕ್ ಸೇರಿದಂತೆ ಮುಂತಾದವರು ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!