ಒಳಮೀಸಲಾತಿ ಜಾತಿಗಣತಿಗೆ ಸಮೀಕ್ಷೆಗೆ ಪ್ರತಿ ಮನೆ ಕುಟುಂಬಸ್ಥರು ಸಾರ್ವಜನಿಕರು ಸಹಕರಿಸಿ ಮಾಹಿತಿ ನೀಡುವಂತೆ :ಶಾಸಕ ಬಿ ದೇವೇಂದ್ರಪ್ಪ ಸಲಹೇ ನೀಡಿದರು
ಜಗಳೂರು ,ಮೇ.5 :ಒಳಮೀಸಲಾತಿ ಜಾತಿ ಗಣತಿಯಲ್ಲಿ ಉಪಜಾತಿಗಳ ಮಾಹಿತಿಯನ್ನು ಗಣತಿದಾರರು ಸ್ಪಷ್ಟವಾಗಿ ನಮೂದಿಸಲು ಕುಟುಂಬದ ಸದಸ್ಯರುಗಳು ತಮ್ಮ ತಮ್ಮ ಮನೆಗಳ ಬಳಿ ಸಮೀಕ್ಷೆಗೆ ಬಂದಾಗ ಸಹಕರಿಸುವಂತೆ ತಿಳಿಸಿದರು
ಸೋಮವಾರ ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಸಮಾಜಕಲ್ಯಾಣ ಇಲಾಖೆ ಸಹಯೋಗದಲ್ಲಿ ಸರ್ಕಾರದ ಒಳಮೀಸಲಾತಿ ಜಾತಿಗಣತಿ ಪ್ರಕ್ರಿಯೆಗೆ ವಿಧ್ಯಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಎಲ್ಲಾ ವರ್ಗಗಳ ಅಭಿವೃದ್ದಿಗೆ ಆಡಳಿತ ಕಾಂಗ್ರೆಸ್ ಸರ್ಕಾರ ಶ್ರಮಿಸುತ್ತಿದ್ದು.ಒಳಮೀಸಲಾತಿ ಜಾರಿಗಾಗಿ ಜಾತಿವಾರು ನಿಗದಿತ ಅಂಕಿಅಂಶಗಳ ದಾಖಲೆಗಳ ಮಾಹಿತಿಗೆ ಆನ್ ಲೈನ್ ಆ್ಯಪ್ ಮೂಲಕ ಕೈಗೊಂಡಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ಗಣತಿದಾರರು ಎಸ್ ಸಿ ಪಟ್ಟಿಯಲ್ಲಿರುವ ಉಪಜಾತಿಗಳನ್ನು ಕಡ್ಡಾಯವಾಗಿ ಸ್ಪಷ್ಟವಾಗಿ ನಮೂದಿಸಬೇಕು.ಗಣತಿದಾರರು ಮನೆಬಾಗಿಲಿಗೆ ಆಗಮಿಸಿದಾಗ ಆಯಾ ಕುಟುಂಬಗಳ ಸದಸ್ಯರುಗಳು ಮಾದಿಗ,ಛಲವಾದಿ,ಬೋವಿ,ಲಂಬಾಣಿ ಈ ರೀತಿಯಲ್ಲಿ ನಿರ್ದಿಷ್ಟ ಮಾಹಿತಿ ಒದಗಿಸಬೇಕು.ಇದರಿಂದ ನಿಮ್ಮ ನಿಮ್ಮ ಹಕ್ಕು ಪಡೆದು ನಿಮಗೆ ಅನುಕೂಲವಾಗಲಿದೆ ಎಂದು ಕಿವಿಮಾತು ಹೇಳಿದರು.
ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ ಮಾತನಾಡಿ,ಮೇ.5 ರಿಂದ 15 ರವರೆಗೆ ರಾಜ್ಯವ್ಯಾಪಿ ಆರಂಭವಾಗಿರುವ ಒಳಮೀಸಲಾತಿ ಜಾತಿ ಗಣತಿಗೆ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಪ.ಜಾತಿ ಸಮುದಾಯದವರು ನಿಖರವಾಗಿ ಮಾಹಿತಿ ನೀಡಬೇಕು.ಆಧಾರಕಾರ್ಡ್,ರೇಷನ್ ಕಾರ್ಡ್ ಸೇರಿದಂತೆ ಅಗತ್ಯದಾಖಲೆಗಳನ್ನು ಗಣತಿದಾರರಿಗೆ ಸಲ್ಲಿಸಬೇಕು.ಇದರಿಂದ ಗ್ಯಾರಂಟಿ ಯೋಜನೆಗೆ ತೊಂದರೆಯಿಲ್ಲ.ಸಾಮಾಜಿಕ ಅಸಮಾನತೆ,ತಾರತಮ್ಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು.ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾ.ಪಂ ಇಓ ಕೆಂಚಪ್ಪ,ಸಿಡಿಪಿಓ ಬೀರೇಂದ್ರಕುಮಾರ್,ಗ್ರಾ.ಪಂ ಸದಸ್ಯರಾದ ಮಂಜಮ್ಮ,ಯಲ್ಲಮ್ಮ,ದೇವರಾಜ್,ಬಿ.ಟಿ.ಬಸವರಾಜ್,ಮುಖಂಡಾರದ ಬಿ.ಮಹೇಶ್ವರಪ್ಪ,ಪಲ್ಲಾಗಟ್ಟೆ ಶೇಖರಪ್ಪ,ಆಪ್ತ ಸಹಾಯಕ ಮಧುಸೂಧನ್,ಪೂಜಾರ್ ಸಿದ್ದೇಶ್,ಉದ್ದಬೋರನಹಳ್ಳಿ ಕೊಟ್ರೇಶ್,ಪೂಜಾರ ಭೀಮಪ್ಪ,ಬಿ.ಎಂ.ಮಂಜುನಾಥ್,ಕಡೇಮನಿ ಕೊಟ್ರೇಶ್,ಕಾಂಗ್ರೆಸ್ ಮಹಿಳಾ ಘಟಕದ ಕೊರಟಕೆರೆ ಶಿಲ್ಪಾ,ಪಿಡಿಓ ರಾಘವೇಂದ್ರ ಸೇರಿದಂತೆ ಮತ್ತಿತರರು ಇದ್ದರು.

