ಬಡ ವರ್ಗದವರಿಗೆ ಅಂತ್ಯಸಂಸ್ಕಾರಕ್ಕೆ ಮುಕ್ತಿವಾಹನ ಅನುಕೂಲವಾಗಲಿದೆ:ಶಾಸಕ.ಬಿ.ದೇವೇಂದ್ರಪ್ಪ

ಜಗಳೂರು ಸುದ್ದಿ,
ಜಗಳೂರು,ಮೇ.24:ಬಡವರ್ಗದವರ ಅಂತ್ಯಸಂಸ್ಕಾರಕ್ಕೆ ಮುಕ್ತಿವಾಹನ ಅನುಕೂಲವಾಗಲಿದೆ ಎಂದು ಶಾಸಕ ಬಿ. ದೇವೆಂದ್ರಪ್ಪ ಹೇಳಿದರು.

ಶನಿವಾರ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಜೈಭಾರತ್ ಟ್ರಸ್ಟ್ ವತಿಯಿಂದ ಮುಕ್ತಿವಾಹನ ಲೋಕಾರ್ಪಣೆಗೆ ಚಾಲನೆ ನೀಡಿ ನಂತರ ಮಾತನಾಡಿದರು.

ತಾಲೂಕಿನಲ್ಲಿ ಆಸ್ತಿ,ಹಣಗಳಿಕೆ ಶ್ರೀಮಂತಿಕೆ ಜನಸಂಖ್ಯೆ ಅಧಿಕವಾಗಿದೆ.ಆದರೆ ಸಮಾಜಮುಖಿ ಕೆಲಸ,ಬಡವರಿಗೆ ಸಹಾಯಸ್ತ ಚಾಚುವ ಹೃದಯ ಶ್ರೀಮಂತಿಕೆಯ ಜನಸಂಖ್ಯೆ ವಿರಳವಾಗಿದೆ.ಪ್ರತಿಯೊಬ್ಬ ವ್ಯಕ್ತಿಗೂ ಹುಟ್ಟು,ಸಾವು ಖಚಿತವಾಗಿದೆ.ಈ ಮಧ್ಯೆ ಶ್ರೀಮಂತಿಕೆ ಶಾಶ್ವತವಲ್ಲ ಶ್ರೀಮಂತಿಕೆ ಅಂತ್ಯ ಕಟ್ಟಿಟ್ಟ ಬುತ್ತಿಯಾಗಿದೆ.ಸಮಾಜದಲ್ಲಿ ಮತ್ತೊಬ್ಬರ ಕಂಬನಿಗೆ ಮಿಡಿಯುವ ಹೃದಯ,ದಾನ ಧರ್ಮ ಗುಣ ಮೈಗೂಡಿಸಿಕೊಳ್ಳಬೇಕು ಎಂದು ಮಾರ್ಮಿಕವಾಗಿ ನುಡಿದರು.

ಜೈಭಾರತ್ ಟ್ರಸ್ಟ್ ನ ಬರ್ಕತ್ ಅಲಿ ಅವರ ಕನಸಿನ ಕೂಸಿನಂತೆ ಸಾರ್ವಜನಿಕ ಆಸ್ಪತ್ರೆಯೊಂದಿಗೆ ಕೈಜೋಡಿಸಿ ತುರ್ತುಪರಿಸ್ಥಿತಿಯಲ್ಲಿರುವವರಿಗೆ ಉಚಿತ ಅಂಬ್ಯುಲೆನ್ಸ್,ರೋಗಿಗಳಿಗೆ ಉಚಿತ ಗಂಜಿಕೇಂದ್ರ,ಇದೀಗ ಶವಗಳನ್ನು ಗ್ರಾಮೀಣ ಭಾಗಗಳಿಗೆ ರವಾನಿಸಲು ಹಾಗೂ ಪಟ್ಟಣದಲ್ಲಿ ಶವಸಂಸ್ಕಾರಕ್ಕೆ ತೆರಳಲು ಮುಕ್ತಿವಾಹನ ಕಲ್ಪಿಸುವ ಮೂಲಕ ಬಡವರ್ಗದವರಿಗೆ ಸಹಾಯಸ್ತಚಾಚುತ್ತಿರುವುದು ಶ್ಲಾಘನೀಯ ಎಂದರು.

ಪ್ರತಿವರ್ಷ ಅನಾಥಶ್ರಮಕ್ಕೆ ವೈಯಕ್ತಿಕ ವಾಗಿ ₹50 ಸಾವಿರ ದೇಣಿಗೆ ನೀಡುತ್ತಿದ್ದೇನೆ.ಇದರ ಜೊತೆಗೆ ಭಿಕ್ಷಾ ಪಾತ್ರೆಯನ್ಜು ಹಿಡಿದು ಬೀದಿಗೆ ಇಳಿಯುತ್ತೇನೆ.ಉದಾತ್ತ ಗುಣವುಳ್ಳ ಶ್ರೀಮಂತರು ನನ್ನೊಂದಿಗೆ ಕೈಜೋಡಿಸಿ ಎಂದು ಕರೆನೀಡಿದರು.

ಜಿ.ಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ ಮಾತನಾಡಿ,
ಆಸ್ಪತ್ರೆಯ ರೋಗಿಗಳಿಗೆ ಅನುಕೂಲವಾಗುವಂತೆ ಜೈಭಾರತ್ ಟ್ರಸ್ಟ್ ಸೇವೆಗೈಯುತ್ತಿದೆ.ಇನ್ನೂ ಹೆಚ್ಚಿನದಾಗಿ ಸಮಾಜಮುಖಿ ಕೆಲಸಗಳನ್ನು ಮಾಡಲಿ ಇವರ ಕೆಲಸಕ್ಕೆ ಶಾಸಕರು ಸಂಪೂರ್ಣ ವಾಗಿ ಸಹಕಾರ ನೀಡಿದ್ದಾರೆ.ತಾಲೂಕಿನಲ್ಲಿ ಕಳೆದ ವರ್ಷ ಅತಿವೃಷ್ಟಿ ಹಾಗೂ 57 ಕೆರೆ ತುಂಬಿಸುವ ಯೋಜನೆಯಡಿ ಕೆರೆಗಳು ಭರ್ತಿಯಾಗಿದ್ದವು.ಯಾವುದೇ ಜಲಮೂಲ,ಕಾರ್ಖಾನೆಗಳಿಲ್ಲದ ಬರದನಾಡಿನ ಹಣೆಪಟ್ಟಿ ಕಳಚಿ ಹಸಿರುನಾಡಾಗುವ ಕಾಲ ಸನ್ನಿಹಿತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರು ಮುಕ್ತಿವಾಹನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶುಭಕೋರಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಷಣ್ಮುಖಪ್ಪ,ಜೈಭಾರತ್ ಟ್ರಸ್ಟ್ ನ ಬರ್ಕತ್ ಅಲಿ,ಪ.ಪಂ ಸದಸ್ಯರಾದ ಮಂಜುನಾಥ್,ಲುಕ್ಮಾನ್ ಖಾನ್,ಪಿಂಜಾರಸಮಾಜದ ತಾಲೂಕು ಅಧ್ಯಕ್ಷ ಬಂಗ್ಲೆ ಫರ್ ವೀಜ್ ಖಾನ್,ಮುಖಂಡರಾದ ಓಮಣ್ಣ, ಬಿ.ಮಹೇಶ್ವರಪ್ಪ,ಗೌಸ್ ಅಹ್ಮದ್,ಪಲ್ಲಾಗಟ್ಟೆ ಶೇಖರಪ್ಪ,ಪ್ರಕಾಶರೆಡ್ಡಿ,ಅನ್ವರ್ ಅಲಿ,ಸೇರಿದಂತೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!