filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 128;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;

ಅಭಿವೃದ್ದಿಗೆ ಸಹಕಾರ ಕೊಡಿ ಅಭಿವೃದ್ದಿ ವಿಚಾರದಲ್ಲಿ ಕೀಳು ಮಟ್ಟದ ರಾಜಕೀಯ ಬೇಡ ಎಂದು‌ ಹಾಲಿ ಶಾಸಕ ಬಿ ದೇವೇಂದ್ರಪ್ಪರವರು ಮಾಜಿ ಶಾಸಕ ಹೆಚ್ ಪಿ ಆರ್. ಗೆ ಟಾಂಗ್ ನೀಡಿದ್ದಾರೆ.


ಸುದ್ದಿ ಜಗಳೂರು


ಜಗಳೂರು ಪಟ್ಟಣದ ಅಶ್ವತ್ ಬಡಾವಣೆಯಲ್ಲಿ ಸೋಮವಾರ 16 ಕೋಟಿ ರೂಗಳಲ್ಲಿ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮತ್ತು‌ ಪಟ್ಟಣ ಪಂಚಾಯಿತಿ ವತಿಯಿಂದ ಕೇಂದ್ರ ಪುರಸ್ಕೃತ ಅಮೃತ್ ಯೋಜನೆಡಿಯಲ್ಲಿ 10 ಲಕ್ಷ ಲೀಟರ್ ಜಲಸಂಗ್ರಹಣ ಟ್ಯಾಂಕ್ ನಿರ್ಮಾಣ ಹಾಗೂ ಅಶ್ವಿನಿ ಬಡಾವಣೆಯಲ್ಲಿ 5 ಲಕ್ಷ ಲೀಟರ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಮತ್ತು ಹಳೆ ತಾಲ್ಲೂಕು ಕಛೇರಿ ಆವರಣದಲ್ಲಿ 5 ಕೋಟಿ ರೂಗಳಲ್ಲಿ ವಿವಿಧ ಕಛೇರಿಗಳ ಸಂಕೀರ್ಣ ಕಟ್ಟಡ ಕಾಮಗಾರಿ ಭೂಮಿ ಪೂಜೆ ನೇರವೇರಿಸಿ ವೇದಿಕೆ ಕಾರ್ಯಕ್ರಮದಲ್ಲಿ ತಿರುಗೇಟು ನೀಡಿದ್ದಾರೆ.
ನಾನು ಶಾಸಕನಾಗಿ ಎರಡು ವರ್ಷಗಳಲ್ಲಿ ಸಾಕುಷ್ಟು ಅಬಿವೃದ್ದಿ ಕೆಲಸಗಳಿಗೆ ಶ್ರಮಿಸುತಾ ಬಂದಿರುವೆ. ಇದೀಗ ಪಟ್ಟಣದ ಮುಖ್ಯ ರಸ್ತೆ ಆಗಲಿಕರಣ ಕಾಮಗಾರಿಯನ್ನ ಕೈಗೆತ್ತಿಕೊಂಡು ಕಾಮಗಾರಿ ಪ್ರಗತಿಯಲ್ಲಿದೆ .ಆದರೆ ಮೊನ್ನೆ ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ನಮ್ಮ ಮೇಲೆ ಆಪಾದನೆ ಮಾಡಿ ಪತ್ರಿಕಾ ಹೇಳಿಕೆ ಸರಿಯಲ್ಲ ಈಗಾಗಲೇ ನಗರದ ಮುಖ್ಯ ರಸ್ತೆ ಅಭಿವೃದ್ದಿಗೆ ವರ್ತಕರ ಬಳಿ ಸಭೆ ನಡೆಸಿ 50 ಅಡಿ ಅಗಲಿಕರಣ ಮಾಡಲು ತಿರ್ಮಾನಿಸಿದಂತೆ ರಸ್ತೆ ಆಗಲಿಕರಣ 20 ಕೋಟಿ ರೂಗಳಲ್ಲಿ ಚುರುಕಿನಿಂದ ಸಾಗಿದೆ .ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಬೆರೆಸುವುದಕ್ಕಿಂತ ಅಭಿವೃದ್ದಿಗೆ ಸಹಕಾರ ನೀಡಿ ಎಂದು ತಿರುಗೇಟು ನೀಡಿದ್ದಾರೆ.


ನಾನು ನಗರದ ಮುಖ್ಯರಸ್ತೆಯನ್ನ ಬೆಂಗಳೂರು ಚಿಕ್ಕಪೇಟೆಗೆ ಒಲಿಸುವುದಿಲ್ಲ ಆಗಲಿಕರಣ ಶತಾಸಿದ್ದ ಕಳೆದ ನಿಮ್ಮ ಅವಧಿಯಲ್ಲಿ ರಸ್ತೆ ಆಗಲಿಕರಣ ಕಾಮಗಾರಿ ಏಕೆ ಕೈಗೆತ್ತಿಕೊಂಡು ಅಭಿವೃದ್ದಿಪಡಿಸಲಿಲ್ಲ ಎಂದು ಪ್ರಶ್ನೇಸಿದರು ಮಾಜಿ ಶಾಸಕ ಎಸ್ ವಿ ರಾಮಚಂದ್ರಣ್ಣ ಮೂರು ಬಾರಿ ಶಾಸಕರು ಹೆಚ್ ಪಿ ರಾಜೇಶ್ ಒಂದು ಬಾರಿ ಶಾಸಕರು ಇಂತ ಮುಖ್ಯರಸ್ತೆ ಅಭಿವೃದ್ದಿಗೆ ಮನಸ್ಸು ಮಾಡಲಿಲ್ಲ ಎಂದು ಪ್ರಶ್ನೆಸಿದರು? ನಾನು ಯಾವ ಟೀಕೆಗಳಿಗೆ ಜಗ್ಗುವುದಿಲ್ಲ ಬಗ್ಗುವುದಿಲ್ಲ ನೇರವಾಗಿ ಚರ್ಚೆಗೆ ಬನ್ನಿ ಎಂದು ಸವಾಲೇಸೆದಿದ್ದಾರೆ.

ಜಿಲ್ಲಾ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜನ್ ಮಾತನಾಡಿದರು ಕೇಂದ್ರ ಸರ್ಕಾರದ ಅಮೃತ್ ಯೋಜನೆಡಿ ಜಗಳೂರು ಪಟ್ಟಣಕ್ಕೆ ಶಾಂತಿ ಸಾಗರದಿಂದ ಮಾಳಪ್ಪಹಟ್ಟಿ ಮೂಲಕ 45 ಕಿಲೊ ಮಿ.ರೈಸಿಂಗ್ ಮೈನ್ ನಿಂದ ಗುಡ್ಡದ ರಂಗವ್ವನಹಳ್ಳಿ ಮೂಲಕ ಜಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡಲು ಇದೀಗ 10 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ .5ಲಕ್ಷ ರೂಗಳಲ್ಲಿ ಟ್ಯಾಂಕ್ ನಿರ್ಮಾಣದಿಂದ ಕುಡಿಯುವ ನೀರಿನ ಸಮಸ್ಯೆಗೆ‌ ಪರಿಹಾರ ನೀಡಲು ಉತ್ತಮ ಯೋಜನೆ ಎಂದರು. ಮತ್ತು ಹಳೆ ತಾಲ್ಲೂಕು ಕಛೇರಿ ಆವರಣದಲ್ಲಿ ವಿವಿಧ ಕಛೇರಿಗಳ ಸಂಕೀರ್ಣ ಕಟ್ಟಡ ಸ್ಥಾಪನೆಯಿಂದ ಒಂದೇ ಕಡೆ ಕಛೇರಿಗಳ ನಾಗರೀಕರ ಸೇವೆಗೆ ಅತ್ಯಂತ ಸಹಕಾರಿಯಾಗಲಿದೆ. ಕಾಮಗಾರಿ ನಿರ್ಮಿಸುವ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಿರ್ಮಿಸುವಂತೆ ಸಲಹೇ ನೀಡಿದರು .

ಮಾಜಿ ಶಾಸಕ ಟಿ ಗುರುಸಿದ್ದನಗೌಡ್ರು ಮಾತನಾಡಿ ಜಗಳೂರು ಕ್ಷೇತ್ರಕ್ಕೆ ತನ್ನದೆಯಾದ ಇತಿಹಾಸ ಪರಂಪರೆಯಿದೆ .ಜಗಳೂರುಜ್ಜನ ಪಾಪಿದೇವರ ಗುಡಿಯಿಂದ ಜಗಳೂರು ಎಂಬ ನಾಣ್ನುಡಿಯಿದೆ ಅಂದು ಜಗಳೂರು ಕೆರೆಯನ್ನ ಮತ್ತಿ ತಿಮ್ಮಣ್ಣ ನಾಯಕ ಅಭಿವೃದ್ದಿಪಡಿಸಿದ್ದಾರೆ .ಇಂತ ಇತಿಹಾಸವಿರುವ ತಾಲ್ಲೂಕು ಕೇಂದ್ರ ಜಗತ್ತಿನ ಭೂಪಟದಲ್ಲಿ ಎಷ್ಯಾಖಂಡದಲ್ಲಿಯೆ ಕೊಂಡುಕುರಿ ಅವಸಾನದಿಂದ ಜಗಳೂರಿನ ಹಿರಿಮೆ ಗರಿಮೆ ಹೆಚ್ಚಿದೆ ಎಂದರು

ಈ ಸಂದರ್ಭದಲ್ಲಿ ಪಪಂ ಅದ್ಯಕ್ಷ ನವೀನ್ ಕುಮಾರ್.ಕಾಂಗ್ರೇಸ್ ಬ್ಲಾಕ್ ಅದ್ಯಕ್ಷರಾದ ಷಂಷೀರ್ ಆಹಮದ್ .ಮುಖಂಡರಾದ ಕೆ.ಪಿ.ಪಾಲಯ್ಯ.ಕಲ್ಲೇಶ್ ರಾಜ್ ಪಟೇಲ್.ಪಪಂ ಸದಸ್ಯರಾದ ಲುಖ್ಮಾನ್ ಖಾನ್. ಆದರ್ಶರೆಡ್ಡಿ.ಶಿಕೀಲ್ ಆಹಮದ್. ಪಾಪಲಿಂಗಪ್ಪ ಮಹಮದ್ ಆಲಿ.ರಮೇಶರೆಡ್ಡಿ. ಕಾಯಿ ರೇವಣ್ಣ .ನಾಮನಿರ್ದೇಶನ ಸದಸ್ಯರಾದ ಕುರಿಜೆಯಣ್ಣ. ಶಾಂತಪ್ಪ.ಲೋಕಪಯೋಗಿ ಇಲಾಖೆ ಎಇಇ ನಾಗರಾಜ್. ಪುರುಷೋತ್ತಮರೆಡ್ಡಿ. ನೀರು ಸರಬರಾಜು ಒಳ ಚರಂಡಿ ಮಂಡಳಿ ಕಾರ್ಯಪಾಲಕ ಅಬಿಯಂತರರಾದ ಅನಿಲ್ ಕುಮಾರ್ ಆರ್‌. ಸಹಾಯಕ ಕಾರ್ಯಪಾಲಕ ಅಬಿಯಂತರರಾದ ಎಂ.ಬಿ ರವಿ .ಸಹಾಯಕ ಇಂಜಿನೀಯರ್ ಗುರುದತ್ತ.ಗುತ್ತಿಗೆದಾರರಾದ ಸುದೀರ್ ಸೇರಿದಂತೆ ಕಾಮಗಾರಿ ಭೂಮಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. .

Leave a Reply

Your email address will not be published. Required fields are marked *

You missed

error: Content is protected !!