ಸಸ್ಯ ಸಂಪತ್ತು ನಾಶವಾದರೆ ಮಾನವನಿಗೆ ಆಪತ್ತು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ನೀರಾವರಿ ಹೋರಾಟಗಾರ ತೋರಣಗಟ್ಟೆ ತಿಪ್ಪೇಸ್ವಾಮಿ ಅಬಿಪ್ರಾಯಟ್ಟರು
ಜಗಳೂರು ತಾಲೂಕಿನ ತಮಲೇಹಳ್ಳಿ ಗ್ರಾಮದ ಪಿ .ಎಂ. ಶ್ರೀ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಜರುಗಿತು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಜಗಳೂರಿನ ಅಪ್ಪರ ಭದ್ರಾ ನೀರಾವರಿ ಹೋರಾಟಗಾರರಾದ ತೋರಣಗಟ್ಟೆ ತಿಪ್ಪೇಸ್ವಾಮಿ ಭಾಗವಹಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತಮಾಡಿದರು .ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಸಸ್ಯ ಸಂಪತ್ತು ಮನುಷ್ಯನ ಒಂದು ಅವಿಭಾಜ್ಯ ಅಂಗ ಆದರೆ ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯನ ಅತಿಯಾದ ದುರಾಲೋಚನೆಯಿಂದ ಮರ ಗಿಡಗಳನ್ನು ಕಡಿದು ಅರಣ್ಯ ಸಂಪತ್ತನ್ನು ನಾಶದ ಅಂಚಿನ ಅಳಿವು ಉಳಿವಿನ ಪ್ರಶ್ನೆಯಾಗಿದೆ . ನಾವು ಅತಿಯಾದ ರಾಸಾಯನಿಕ ಗೊಬ್ಬರಗಳನ್ನು ಭೂಮಿಗೆ ಬಳಸುವುದರಿಂದ ಭೂತಾಯಿ ಒಡಲಿಗೆ ವಿಷ ಹಾಕಿ ನಮ್ಮ ಪರಿಸರ ಮತ್ತು ನಮ್ಮ ಆರೋಗ್ಯದ ಮೇಲೆ ದುಷ್ಪಾರಿಮ ಬಿರುವಂತಾಗಿದೆ .ಕಳವಳ ವ್ಯಕ್ತಪಡಿಸಿದರು.
ಮುಖ್ಯ ಶಿಕ್ಷಕರಾದ ಸುಭಾನ್ ಮಾತನಾಡಿ ಮಧ್ಯ ಕರ್ನಾಟಕದ ಬಯಲು ಸೀಮೆ ಎಂದು ಕರೆಸಿಕೊಳ್ಳುವ ಪ್ರದೇಶ ಮನುಷ್ಯನ ಸ್ವಾರ್ತಲಾಲಸೆಯಿಂದ ಕಾಡು ಕ್ಷೀಣಿಸಿ ಮುಂದು ಒಂದು ದಿನ ಮರುಭೂಮಿ ಎಂದು ಕಳಿಸಿಕೊಳ್ಳುವ ಕಾಲ ಬರುವಂತಾಗಬಹುದು. ಹಾಗಾಗಿ ನಾವೆಲ್ಲರೂ ಗಿಡ ಮರಗಳನ್ನು ನೆಟ್ಟು ಮರವಾಗಿಸಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸೋಣ ನಾಡನ್ನು ಹಸಿರುನಾಡನ್ನಾಗಿಸಲು ಮುಂದಾಗುವಂತೆ ಕರೆ ನೀಡಿದರು .
ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಉಪಾನ್ಯಾಸಕಿ ವಿಜಯ ಮೇಡಂ ಮಾತನಾಡಿ ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ದೇವತೆಗಳ ಹೆಸರಿನಲ್ಲಿ ಮರಗಳನ್ನು ಪೂಜಿಸಿ ಸಂರಕ್ಷಣೆ ಮಾಡಿರುವುದನ್ನು ನಾವು ನೋಡಿದ್ದೇವೆ. ಉದಾಹರಣೆ ಅಡವಿ ಚೌಡಮ್ಮ ಕಾವಲು ಚೌಡಮ್ಮ ಬನ್ನಿ ಮಾವಿನ ಕಾಯಿ ಬನ್ನಿ ಮರ ಆಲದ ಮರ ಬೇವಿನ ಮರಗಳನ್ನು ಪೂಜಿಸುತ್ತಾ ಬಂದಿರುವುದನ್ನು ಕಾಣುತ್ತೇವೆ. ಈ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕುವ ಹಕ್ಕನ್ನು ಪಡೆದಿವೆ. ಸಕಲ ಜೀವರಾಶಿ ಬದುಕಿ ಉಳಿಯಬೇಕಾದರೆ ಸಸ್ಯ ಸಂಕುಲ ಅತ್ಯವಶ್ಯಕ. ಹಾಗಾಗಿ ನಾವು ಸಸಿಗಳನ್ನು ನೆಟ್ಟು ಅವಗಳನ್ನು ಪೋಷಿಸಿ ಸಂರಕ್ಷಣೆ ಮಾಡಿ ಮರವಾಗಿಸಿ ನಮ್ಮ ನಮ್ಮ ಪರಿಸರವನ್ನು ಉಳಿಸೋಣ ಎಂದು ಅಬಿಪ್ರಾಯಪಟ್ಟರು
.ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅಕ್ಕ ತಂಗಿಯರು ತಮ್ಮ ಸಹೋದರರಿಗೆ ತಮ್ಮನ್ನು ರಕ್ಷಿಸಲಿ ಎಂದು ರಕ್ಷಾಬಂಧನವನ್ನು ಕಟ್ಟುವ ರೀತಿಯಲ್ಲಿ ನಾವು ಸಸ್ಯಗಳನ್ನು ನೆಟ್ಟು, ಅವುಗಳು ಹಾಳಾಗದಂತೆ ಅವುಗಳ ರಕ್ಷಿಸಿ ನೀರುನ್ನು ಹಾಕಿ ಸಂರಕ್ಷಿಸಿದರೆ ಅವುಗಳು ಅಗತ್ಯವಾಗಿ ಬೇಕಾದ ಹಣ್ಣು, ಕಾಯಿ, ನೆರಳು, ಮತ್ತು ಆಮ್ಲಜನಕವನ್ನು ನೀಡುವುದಲ್ಲದೆ ಸಕಲ ಜೀವರಾಶಿಗಳು ಬದುಕುಳಿಯಲು ಸಹಕರಿಸುತ್ತವೆ. ಅವು ನಮ್ಮನ್ನು ರಕ್ಷಿಸುತ್ತವೆ ಎಂಬುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು.
ಸಹ ಶಿಕ್ಷಕರಾದ ಎಚ್ ಜಿ ಲೋಕೇಶ್ ರವರು ನಿರೂಪಣೆ ಮಾಡಿದರು, ಆಂಗ್ಲ ಶಿಕ್ಷಕಿಯಾದ ರಂಜಿತಾ ಮೇಡಂ ರವರು ವಂದನಾರ್ಪಣೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೆ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಹಾಜುರಿದ್ದರು..
ಇದೆ ಸಂದರ್ಭದಲ್ಲಿ ನೀರಾವರಿ ಹೋರಾಟಗಾರ ತಿಪ್ಪೇಸ್ವಾಮಿಯವರಿಗೆ ಸನ್ಮಾನಿಸಿ ಗೌರವಿಸಲಾಯಿತು.
