ಸುದ್ದಿ ಜಗಳೂರು
ತಹಶೀಲ್ದಾರ್ ಭರವಸೆ ಹುಸಿಯಾಗಿದೆ ಬರುವ ಇದೆ ದಿನಾಂಕ ಜೂನ್ 30 ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಆಹೋರಾತ್ರಿ ಧರಣೆ ನಡೆಸಲಾಗುವುದು ಹೋರಾಟ ಸಮಿತಿ ಮುಖಂಡ ಆರ್ ಒಬಳೇಶ್ ಕರೆ ನೀಡಿದ್ದಾರೆ
20 ಕೋಟಿ ರೂಗಳಲ್ಲಿ ನಿರ್ಮಿಸುತ್ತಿರುವ ಜಗಳೂರು ಪಟ್ಟಣದ ಮುಖ್ಯ ರಸ್ತೆ ಅಗಲಿಕರಣ ಮಲ್ಪೆ ಟು ಮೊಳಕಾಲ್ಮರು ರಾಜ್ಯ ಹೆದ್ದಾರಿ ಮಹಾಯೋಜನೆಡಿಯಲ್ಲಿ ಸಂಪೂರ್ಣ 69 ಅಡಿ ಅಗಲಿಕರಣ ಮಾಡಬೇಕು . ಆದರೆ ಕೇವಲ 40 ಅಡಿ 30 ಅಡಿ ಯಾವ ಪುರಷಾರ್ಥಕ್ಕೆ ಎಂದು ರಸ್ತೆ ಅಗಲಿಕರಣ ಹೋರಾಟ ಸಮಿತಿ ಅದ್ಯಕ್ಷ ಸಣ್ಣ ಒಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿ ಪ್ರಶ್ನೆಸಿದ್ದಾರೆ.
ರಸ್ತೆ ಅಗಲಿಕರಣ ನೀಯಮಗಳನ್ನು ಗಾಳಿಗೆ ತೂರಿ ಕೇವಲ 30 ಅಡಿ _40 ಅಡಿ ಅಗಲಿಕರಣಕ್ಕೆ ಮುಂದಾಗಿರುವ ಅವೈಜ್ಘಾನಿಕ ಕಾಮಗಾರಿ ವಿರುದ್ದ ನಾನಾ ಪ್ರಗತಿಪರ ಸಂಘಟನೆಗಳು ಮತ್ತು ರಸ್ತೆ ಅಗಲಿಕರಣ ಹೋರಾಟ ಸಮಿತಿ ಪದಾಧಿಕಾರಿಗಳು ಈ ಹಿಂದೆ ಪ್ರತಿಭಟನೆ ನಡೆಸಿ 69 ಅಡಿ ಅಗಲಿಕರಣ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು …
ಆ ದಿನ ಮನವಿ ಸ್ವೀಕರಿಸಿದ ತಹಶೀಲ್ದಾರ್ ಸೈಯದ್ ಕಲೀಂ ಉಲಾ ರವರು 15 ದಿನಗಳ ಕಾಲ ಗಡುವು ನೀಡಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ದಿನಾಂಕ 26_6_2025 ರಂದು ಗುರುವಾರ ಸಭೆ ಕರೆದು ಚರ್ಚಿಸಲಾಗುವುದು ಎಂದು ಭರವಸೆ ನೀಡಿದ್ದರು ಆದರೆ ಇದೀಗ ಜಿಲ್ಲಾಧಿಕಾರಿಗಳು ಆಗಮಿಸದೇ ಸಭೆ ಕರೆಯದೆ ಹೋರಾಟಗಾರರನ್ನ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ದ ಹೋರಾಟಗಾರರು ಘೋಷಣೆ ಕೂಗಿ ತಮ್ಮ ಅಸಮಾದಾನ ಹೊರಹಾಕಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವಂತೆ ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು
ರಸ್ತೆ ಅಭಿವೃದ್ದಿ ವಿಚಾರದಲ್ಲಿ ಕೆಲ ಕಾಣದ ಕೈಗಳ ಷಡ್ಯಂತ್ರದಿಂದ ಅಧಿಕಾರಿಗಳು ಮಿನಾಮೇಷ ಎಣಿಸುತ್ತಿರುವುದು ಸರಿಯಲ್ಲ .ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಿಸ್ಕೆಂದೆಯಂತ ರಸ್ತೆಯಲ್ಲಿ ಬಡವರ ಪ್ರಾಣ ಹೋಗಿವೆ ಶೀಘ್ರವೆ ರಸ್ತೆ ಅಭಿವೃದ್ದಿಪಡಿಸಿ .ಎಂದು ವಿವಿಧ ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ತಾಲ್ಲೂಕು ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಗುರವಾರ ಬೆಳಿಗ್ಗೆ 11 ರ ಸಮಯದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದಾರೆ.
- ಈ ದಿನ ಜಿಲ್ಲಾ ಉಸ್ತುವಾರಿ ಸಚಿವರ ಸಭೆ ಇರುವುದರಿಂದ ಜಿಲ್ಲಾಧಿಕಾರಿಗಳು ಆಗಮಿಸಿರುವುದಿಲ್ಲ ದಿನಾಂಕ ಜುಲೈ 3 ರಂದು ಸಭೆ ಕರೆದು ಅಗಲಿಕರಣಕ್ಕೆ ಒತ್ತು ನೀಡಲಾಗುವುದು ತಹಶೀಲ್ದಾರ್ ಸೈಯದ್ ಕಲೀಂ ಉಲಾ
ಈ ಸಂದರ್ಭದಲ್ಲಿ ರಸ್ತೆ ಅಗಲಿಕರಣ ಹೋರಾಟ ಸಮಿತಿ ಗೌರವಾದ್ಯಕ್ಷ ವಕೀಲರಾದ ಒಬಳೇಶ್ ಸಮಿತಿ ಅದ್ಯಕ್ಷ ಸಣ್ಣ ಒಬಯ್ಯ. ವಕೀಲರ ಸಂಘದ ತಾಲೂಕು ಅಧ್ಯಕ್ಷ ಮರೇನಹಳ್ಳಿ ಬಸವರಾಜ್,ಪ್ರಗತಿ ಪರ ಸಂಘಟನೆಗಳ ಮುಖಂಡರಾದ ರಾಜಪ್ಪ ವ್ಯಾಸಗೊಂಡನಹಳ್ಳಿ,ಸತೀಶ್ ಮಲೆಮಾಚಿಕೆರೆ,ಸತ್ಯಮೂರ್ತಿ,ಮಾದಿಹಳ್ಳಿ ಮಂಜಪ್ಪ,ಮಹಾಲಿಂಗಪ್ಪ ಎಚ್.ಎಂ ಹೊಳೆ,ಕುಮಾರ್ ಭರಮಸಮುದ್ರ,ಸುಜಾತಮ್ಮ,ಇಂದಿರಾ,ಚೌಡಮ್ಮ,ಸೂರಪ್ಪ,ರಾಜಪ್ಪ ಬುಳ್ಳೇನಹಳ್ಳಿ,ಪೂಜಾರ್ ಸಿದ್ದಪ್ಪ,ಸೂರಗೊಂಡನಹಳ್ಳಿ ಕುಬೇಂದ್ರಪ್ಪ ,ವಕೀಲ ಅಂಜಿನಪ್ಪ,ಮಹಾಬೂಬ್ ಅಲಿ,ಉಮೇಶ್,ಬೊಮ್ಮಕ್ಕ,ಬಸಣ್ಣ,ದೊಣೆಹಳ್ಳಿ ಚೌಡಮ್ಮ ,ಬಸಣ್ಣ,ಗೊಲ್ಲರಹಟ್ಟಿತಿಪ್ಪೇಸ್ವಾಮಿ,ನಾಗರಾಜ್,ಕರಿಬಸಪ್ಪ, ಹೋರಾಟದಲ್ಲಿ ನಾನಾ ಸಂಘಟನೆ ಪದಾಧಿಕಾರಿಗಳು ಬಾಗಿಯಾಗಿದ್ದರು

