ಜಗಳೂರು ತಾಲ್ಲೂಕಿನ ಅಣಬೂರು ಗ್ರಾಮದಲ್ಲಿರುವ ಮಾರುತಿ ಗ್ರಾಮಾಂತರ ಪ್ರೌಡಶಾಲೆಯಲ್ಲಿ ಶಿಕ್ಷಕರಿಲ್ಲದ ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?

ಜಗಳೂರು ತಾಲ್ಲೂಕಿನ ಅಣಬೂರು ಗ್ರಾಮದ ಶ್ರೀ ಮಾರುತಿ ಗ್ರಾಮಾಂತರ ಪ್ರೌಡಶಾಲೆಯಲ್ಲಿ ಶಿಕ್ಷಕರಿಲ್ಲದೆ ಮಕ್ಕಳಿಗೆ ಪಾಠ ಪ್ರವಚನಗಳಿಲ್ಲದಂತಾಗಿದೆ ಕೇವಲ ಎರಡು‌ ಜನ ಶಿಕ್ಷಕರಿದ್ದು ವಿವಿಧ ವಿಷಯವಾರು ಶಿಕ್ಷಕರಿಲ್ಲದಂತಾಗಿದೆ ಎಂದು ವಿದ್ಯಾರ್ಥಿಗಳು ಜಗಳೂರು ಪಟ್ಟಣದಲ್ಲಿರುವ ಶಾಲಾ ಸಂಸ್ಥಾಪಕರಾದ ಮನೋಹರರೆಡ್ಡಿ ಎಂಬುವರ ನಿವಾಸದ ಬಳಿಗೆ ತೆರಳಿ ಗುರುವಾರ ಸುಮಾರು 50. _60 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕೆಲವೊತ್ತು ಪ್ರತಿಭಟನೆ ನೆಡೆಸಿದ್ದಾರೆ.

ಈ ಹಿಂದೆ ಶಿಕ್ಷಕರ ಕೊರತೆಯಿದೆ ಸರಿಪಡಿಸಿ ಎಂದು ಶಾಲಾ ಆಡಳಿತ ಮಂಡಳಿ ಎಸ್ ಡಿ ಎಂ ಸಿ. ಅದ್ಯಕ್ಷರು ಹಾಗೂ ವಿದ್ಯಾರ್ಥಿಗಳು ಸಂಬಂಧಿಸಿದ ಕ್ಷೇತ್ರದ ಶಾಸಕರಾದ ಬಿ.ದೇವೇಂದ್ರಪ್ಪರವರಿಗೂ ಕ್ಷೇತ್ರಶಿಕ್ಷಣಾಧಿಕಾರಿ ಹಾಲಮೂರ್ತಿರವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿ ಸಮಸ್ಯೆ ತಿಳಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ .

ಈ ವೇಳೆ ಪೋಷಕ ವೆಂಕಟೇಶ್ ಮಾತನಾಡಿ ಇಲ್ಲಿನ ಆಡಳಿತ ಮಂಡಳಿ ಶಾಲಾ ಸಂಸ್ಥಾಪಕರ ಸ್ವಹಿತಾಸಕ್ತಿಯಿಂದ ಅವರ ಸಂಬಂಧಿಕರಿಗೆ ಶಾಲಾ ಜವಾಬ್ದರಿ ನೀಡಿದ್ದರಿಂದ ಅವರ ಕಿರಿ ಕಿರಿಗೆ ಶಿಕ್ಷಕರು ರಾಜಿನಾಮಿ ಕೊಟ್ಟು ಬೇರೆಡೆಗೆ ಹೋಗುತ್ತಿದ್ದಾರೆ ಆದರೆ ಇವರಿಬ್ಬರ ನಡುವೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆಯಾಗಿ ವಿದ್ಯಾರ್ಥಿಗಳ ಬಾಳಲ್ಲಿ ಆಟವಾಡುತ್ತಿದ್ದಾರೆ . ಈ ಶಾಲೆಯಲ್ಲಿ ಈ ಹಿಂದೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಶಾಲೆ ಇದೀಗ ಅಧೋಗತಿಯಾಗಿದೆ. ಒಟ್ಟಾರೆ ಸರ್ಕಾರದ ನೀಯಮಕ್ಕಿಂತ ಶಾಲಾ ಸಂಸ್ಥಾಪಕರ ಉಡಾಪೆ ಉತ್ತರ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಶಾಲಾ ಸುದಾರಣೆ ಸಮಿತಿ ಅದ್ಯಕ್ಷರಾದ ಕೆ ಚಂದ್ರಪ್ಪ ಗೌರವದ್ಯಕ್ಷರಾದ ಶರಣಪ್ಪ‌.ಕಾರ್ಯಧರ್ಶಿ. ವೆಂಕಟೇಶ್ .ರಂಗಸ್ವಾಮಿ ಎಸ್ ಮುಖಂಡ ಮಹಾಲಿಂಗಪ್ಪ .ಪೋಷಕರಾದ ಲಕ್ಷ್ಮೀ. ಗುಡ್ಡಪ್ಪ .ನಾಗರಾಜ ..ಎಸ್ ಡಿ ಎಂ ಸಿ ಅದ್ಯಕ್ಷ ಸಂತೋಷ .ಬಂಗಾರಪ್ಪ ವೀರೇಶ್ ಕೆ ಬಾಲರಾಜ್ ಯಾದವ್ .ನಾಗೇಂದ್ರಪ್ಪ. ಗುಡ್ಡಪ್ಪ ಖಜಾಂಚಿ .ಸ್ವಾಮಿಂದ್ರಣ್ಣ. ಸಣ್ಣಕಾಟಪ್ಪ ಬಾಲಪ್ಪ .ಇಂದ್ರಮ್ಮ.ಚೌಡಕ್ಕ‌.ಪೂಜಾರ್ ಸಿದ್ದಪ್ಪ. ವಿದ್ಯಾರ್ಥಿಗಳು ಸೇರಿದಂತೆ ಹಾಜುರಿದ್ದರು

Leave a Reply

Your email address will not be published. Required fields are marked *

You missed

error: Content is protected !!