ಚಿತ್ರದುರ್ಗ ಜಿಲ್ಲೆ
ಮೊಳಕಾಲ್ಮೂರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂದಿರಾ ಕ್ಯಾಂಟೀನ್ ಆಸರೆ ಮೊಳಕಾಲ್ಮೂರು: ಪಟ್ಟಣಕ್ಕೆ ಆಗಮಿಸುವ ಗ್ರಾಮೀಣ ಪ್ರದೇಶದ ರೈತರು. ಹಾಗೂ ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟೀನ್ ಆಸರೆಯಾಗಲಿ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ತಿಳಿಸಿದರು.
ಅವರು ಮೊಳಕಾಲ್ಮೂರು ಪಟ್ಟಣದಲ್ಲಿ ಪೌರಾಡಳಿತ ನಿರ್ದೇಶನಾಲಯ. ಜಿಲ್ಲಾ ಆಡಳಿತ. ತಾಲೂಕು ಆಡಳಿತ. ಹಾಗೂ ಪಟ್ಟಣ ಪಂಚಾಯಿತಿ ಮೊಳಕಾಲ್ಮೂರು ಇವರ ಸಹಯೋಗದಲ್ಲಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನನ್ನು ಉದ್ಘಾಟಿಸಿ ಮಾತನಾಡಿದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾಗಾಂಧಿಯವರು ಅಮೆರಿಕದಿಂದ ಕೆಂಪು ಜೋಳ ತಂದು ಬಡ ಜನರಿಗೆ ನೀಡಿ ಹಸಿವನ್ನು ನೀಗಿಸಿದ್ದರು. ಅಂತಹ ಆದರ್ಶ ವ್ಯಕ್ತಿಗಳ ಹೆಸರನ್ನು ಕ್ಯಾಂಟೀನಿ ಗೆ ಇಟ್ಟಿರುವುದು ಶ್ಲಾಘನೀಯ
. ಮೊಳಕಾಲ್ಮೂರು ಕ್ಷೇತ್ರದಲ್ಲಿ ನನ್ನ ವಿರುದ್ಧ ಯಾರಾದರೂ ಸ್ಪರ್ಧಿಸಿ ಗೆದ್ದಿದ್ದರೆ ಅದು ಕೇವಲ ಆಕಸ್ಮಿಕ ಮತ್ತು ಪುಣ್ಯದಿಂದ ಎಂದು ಇಂಗ್ಲೀಷ್ ಗಾದೆಯನ್ನು ನೆನಪಿಸಿಕೊಂಡರು. ಕ್ಷೇತ್ರದ ಜನರು ನನ್ನ ಮೇಲೆ ಬೇಸರಿಸಿಕೊಂಡು ನನ್ನನ್ನು ಸೋಲಿಸುವುದಕ್ಕಾಗಿಯೇ ಶಾಸಕರಾಗಲು ಯೋಗ್ಯರಲ್ಲದ ವ್ಯಕ್ತಿಗೆ ಮತ ನೀಡಿ ಗೆಲ್ಲಿಸಿದರು. ಮುಂದೆ ಅಂತಹ ತಪ್ಪುಗಳಾಗದಂತೆ ನಡೆದುಕೊಳ್ಳುತ್ತೇನೆ. ನನ್ನ ಆಡಳಿತ ಅವಧಿಯಲ್ಲಿ ಎಂದೂ ಕೂಡ ಮಧ್ಯವರ್ತಿಗಳ ಆವಳಿ. ಭ್ರಷ್ಟಾಚಾರ ಇರುವುದಿಲ್ಲ. ಪಾರದರ್ಶಕ ಆಡಳಿತಕ್ಕೆ ನಾನು ಹೆಚ್ಚಿನ ಮಹತ್ವ ಕೊಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಶಾಸಕ ಎನ್ ವೈ ಗೋಪಾಲಕೃಷ್ಣ
ಪ.ಪಂ. ಮಾಜಿ ಅಧ್ಯಕ್ಷ. ಜಿ ಪ್ರಕಾಶ್ ಮಾತನಾಡಿ ಪಟ್ಟಣದಲ್ಲಿರುವ ಖರಾಬ ಜಮೀನನ್ನು ಬಿ.ಜೆ.ಪಿ ಪಕ್ಷದ ಕೆಲ ಪ್ರಭಾವಿಗಳು ಆಕ್ರಮಿಸಿಕೊಂಡಿದ್ದರು. ಅದನ್ನು ತಹಸೀಲ್ದಾರ್ ಅವರ ಗಮನಕ್ಕೆ ತಂದು ಸರ್ಕಾರಕ್ಕೆ ಮರಳಿಸಿ ಕೊಡುವ ಕೆಲಸ ಮಾಡಿದೆ.
ಅಂತಹ ಜಾಗದಲ್ಲಿ ಶಾಸಕರು ತಾಲೂಕು ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಬಿಟ್ಟರೆ. ಇದರಲ್ಲಿ ಸ್ವಾರ್ಥವಿಲ್ಲ ಎಂದರು
.
ಸರ್ಕಾರದ ಪಂಚ ಗ್ಯಾರಂಟಿಗಳಿಗೆ ಇಂದಿರಾ ಕ್ಯಾಂಟೀನ್ ಆರನೇ ಗ್ಯಾರಂಟಿಯಾಗಿದ್ದು ಹಸಿದವರಿಗೆ ಅನ್ನ ನೀಡುವ ಉತ್ತಮ ಕೆಲಸ ನಡೆಯುತ್ತಿದೆ ಇದರಿಂದ ಗ್ರಾಮೀಣ ಪ್ರದೇಶದ ಜನರ ಹಸಿವು ನೀಗಿಸುತ್ತದೆ ಎಂದರು.
ಶಾಸಕ ಎನ್. ವೈ. ಗೋಪಾಲಕೃಷ್ಣರು ಯಾವುದೇ ವ್ಯಕ್ತಿಗಳಿಗಾದರೂ ಲೆಟರ್ ಹೆಡ್ ಆಮಿಷ ನೀಡದೆ ನೇರವಾಗಿ ಕೆಲಸ ಮಾಡುತ್ತಿದ್ದಾರೆ ಆದರೆ ಈ ಹಿಂದೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಶ್ರೀರಾಮುಲು ಸುಮಾರು 10 ಜನ ಪಿ.ಎ.ಗಳನ್ನು ಇಟ್ಟುಕೊಂಡು ಕ್ಷೇತ್ರದ ಸಾಮಾನ್ಯ ಜನಗಳನ್ನು ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದರು..
ಮಾಜಿ ಜಿ. ಪಂ. ಸದಸ್ಯ ವಿ.ಮಾರ ನಾಯಕ. ಸುಬಾನ್ ಸಾಬ್. ಮಾತನಾಡಿದರು. ಮುಖಂಡರಾದ ಗುರುರಾಜ.ಖಾದರ್. ಒಬೇದುಲ್ಲಾ.ಪ.ಪಂ.ಅಧ್ಯಕ್ಷೆ ಲೀಲಾವತಿ ಸಿದ್ದಣ್ಣ. ಮುಖ್ಯ ಅಧಿಕಾರಿ ಲಿಂಗರಾಜ್. ಆರೋಗ್ಯ ನಿರೀಕ್ಷಕ ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.
