ಜಗಳೂರು
ತಾಲ್ಲೂಕಿನ ಬಿಳಿಚೋಡು ಗ್ರಾಮದ ಕರ್ನಾಟಕ ಪಬ್ಲಿಕ್ ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ಸಂಸತ್ ಚುನಾವಣೆ ಜರುಗಿತು.
KPS ಬಿಳಿಚೋಡು ಪ್ರೌಢಶಾಲೆಯಲ್ಲಿ E.L.C ಕ್ಲಬ್ ವತಿಯಿಂದ ಶಾಲಾ ಸಂಸತ್ ಚುನಾವಣೆ – 2025-26 ಇಂದು ನಡೆಸಲಾಯಿತು… ಮುಖ್ಯ ಶಿಕ್ಷಕರು ELC ನೋಡಲ್ ಶಿಕ್ಷಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ಮಕ್ಕಳಿಂದ ಯಶಸ್ವಿ ಯಾಗಿ ಚುನಾವಣೆ ಕಾರ್ಯವೈಕರಿಗಳನ್ನ ನಡೆಸಿಕೊಟ್ಟರು .ಚುನಾವಣೆ ಫಲಿತಾಂಶವು ಬರುವ ಸೋಮವಾರ ಹೊರಬಿಳಲಿದೆ.
ಕರ್ನಾಟಕ ಪಬ್ಲಿಕ್ ಪ್ರೌಢಶಾಲೆ ಬಿಳಿಚೋಡು ಇಲ್ಲಿ ದಿನಾಂಕ 28/06/2025 ರಂದು ELC ಕ್ಲಬ್ ವತಿಯಿಂದ ನಡೆದ ಶಾಲಾ ಸಂಸತ್ ಚುನಾವಣೆ -2025-26ಯಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಬಸವರಾಜ್ ಹೆಚ್ ಇವರು ಮಕ್ಕಳಿಗೆ ಪುಷ್ಪ ನೀಡುವುದರ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿ ಪ್ರೋತ್ಸಹಿಸಿದರು. ಶ್ರೀ ಶಿವಮೂರ್ತಿ ಕೆ ಮತ್ತು ಶ್ರೀ ಪರಶುರಾಮಪ್ಪ ಇವರು ELC ನೋಡಲ್ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು ಶಾಲೆಯ ಶಿಕ್ಷಕರಾದ ಶ್ರೀಮತಿ ರತ್ನಮಾಲ ಬಿ.ಟಿ, ಶ್ರೀ ನಟರಾಜ್ ಎನ್, ಶ್ರೀಮತಿ ಜ್ಯೋತಿ ಸಿ, ಶ್ರೀ ಹುಲಗಪ್ಪ ಹೆಚ್, ಶ್ರೀ ರಂಗನಾಥ್ ಆರ್, ಶ್ರೀ ರವಿಕುಮಾರ್ ಎಂ ಎನ್, ಹಾಗೂ ಎಲ್ಲಾ ಮಕ್ಕಳು ಭಾಗವಹಿಸಿ ಶಾಲಾ ಚುನಾವಣೆಯನ್ನು ಯಶಸ್ವಿಗೊಳಿಸಿದರು.
