ದಾವಣಗೆರೆ ಎಸ್ ಎಸ್ ಲೇಔಟ್ ನಿವಾಸಿ ಬಿ.ಎಸ್. ಪ್ರಭಾಕರ್ ನಿಧನ
ದಾವಣಗೆರೆ : ನಗರದ ಎಸ್ ಎಸ್ ಲೇ ಔಟ್ ನಿವಾಸಿ, ಮೂಲತಃ ಗಾಂಧಿನಗರದ ವಾಸಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಬೈರಜ್ಜರ ಬಿ. ಶಾಮಪ್ಪ ನಿವೃತ್ತ ಶಿಕ್ಷಕರು ಇವರ ಹಿರಿಯ ಪುತ್ರರಾದ ನಿವೃತ್ತ ಬ್ಯಾಂಕ್ ಅಧಿಕಾರಿ ಬಿ.ಎಸ್. ಪ್ರಭಾಕರ ಇವರು ವಯೋಸಹಜ ಅನಾರೋಗ್ಯದಿಂದ ದಿನಾಂಕ 30 6 2025 ರಂದು ಬೆಳಗಿನ ಜಾವ 7:30ರ ಸಮಯಕ್ಕೆ ನಿಧನರಾಗಿದ್ದಾರೆ.
ಮೃತ ಪ್ರಭಾಕರ ಇವರು ಚಿತ್ರದುರ್ಗ ಹೊಯ್ಸಳ ಪತ್ರಿಕೆ ಸಂಪಾದಕರಾದ ಸಿ.ಎನ್.ಕುಮಾರ್ ಇವರ ತಾಯಿಯ ತಮ್ಮನವನರಾಗಿರುತ್ತಾರೆ.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಸೋಮವಾರ ಮಧ್ಯಾಹ್ನ ಸುಮಾರು ನಾಲ್ಕು ಗಂಟೆಗೆ ಗಾಂಧಿನಗರದ ಸಾರ್ವಜನಿಕ ರುದ್ರ ಭೂಮಿಯಲ್ಲಿ ನೆರವೇರಿಸಲಾಯಿ ಎಂದು ಮೃತರ ಸಹೋದರ ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ ಬಿಎಸ್ ಪುರುಷೋತ್ತಮ್ ಇವರು ತಿಳಿಸಿರುತ್ತಾರೆ.
