ಸುದ್ದಿ ಜಗಳೂರು

ತಡರಾತ್ರಿಯಲ್ಲಿ ತುಂಬಿದ ತೋಟಕ್ಕೆ ಕನ್ನ ಹಾಕಿದ ಖದೀಮರಿಂದ ಸುಮಾರು 07 ಲಕ್ಷದ ದಾಳಿಂಬೆ ಹಣ್ಣು ಕಳವು

ಜಗಳೂರು : ತಡರಾತ್ರಿ ದಾಳಿಂಬೆ ತೋಟಕ್ಕೆ ಕನ್ನ ಹಾಕಿದ ಖದೀಮರು ಸುಮಾರು 07 ಲಕ್ಷ ಮೌಲ್ಯದ ದಾಳಿಂಬೆ ಹಣ್ಣು ಕದ್ದೊಯ್ಯದ ಘಟನೆ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ನೆಡೆದಿದೆ

ಗ್ರಾಮದ ರೈತ ಎಸ್ , ರವಿಕುಮಾರ್ ಅವರು ಗ್ರಾಮದ ಸಮೀಪ ಇರುವ ಮೂರು ಎಕರೆ ಜಮೀನಿನಲ್ಲಿ ಲಕ್ಷಾಂತರ ಖರ್ಚು ಮಾಡಿ ದಾಳಿಂಬೆ ತೋಟ ಮಾಡಿದ್ದರು ನಾಲ್ಕು ವರ್ಷಗಳ ಶ್ರಮ ಹಾಕಿ ಬೆವರು ಸುರಿಸಿ ಬೆಳೆದ ಬೆಳೆ ಕೈಗೆ ಬಂದು ಇನ್ನೇನು ಕಟಾವು ಮಾಡಲು ಸಿದ್ದತೆ ಮಾಡುವಾಗಲೇ ಹೊಂಚುಹಾಕಿದ ಖದೀಮರಿಂದಲೇ ಈ ಕೃತ್ಯ ಮಾಡಲಾಗಿದ್ದು ಹಣ್ಣು ದೋಚಿ ಪರಾರಿಯಾಗಿದ್ದಾರೆ

ಎಂದಿನಂತೆ ಶುಕ್ರವಾರ ಬೆಳಿಗ್ಗೆ ತೋಟಕ್ಕೆ ಬಂದಾಗ ಹಣ್ಣು ತುಂಬಿದ ತೋಟವು ಬರೀ ಗಿಡದಿಂದ ಬಣ ಗುಟ್ಟಿರುವುದನ್ನು ಕಂಡು ದಂಗಾದ ರೈತ ರವಿಕುಮಾರ್ ತೋಟದಲ್ಲಿ ಹಣ್ಣು ಇಲ್ಲದನ್ನ ಕಂಡು ದಿಗ್ರಮೆ ಗೊಂಡಿದ್ದಾರೆ ನಂತರ ಹೊಲ ತುಂಭಾ ಸುತ್ತುಹಾಕಿದಾದ ಹಣ್ಣುಗಳು ಹುದಿರಿರುವುದು ಕಂಡು ಬಂದಿತು

ಸಾಲ ಸೂಲ‌ ಮಾಡಿ ದಾಳಿಂಬೆ ಬೆಳೆಹಾಕಿ ಕೈಗೆ ಸಿಕ್ಕ ಫಲ ಬಾಯಿಗೆ ಬರದಂತಾಗಿದ್ದು ರೈತನ ರೋದನೆ ಹೇಳತೀರದಾಗಿತ್ತು ಸದ್ಯದ ಮಾರುಕಟ್ಟೆಯಲ್ಲಿ ದಾಳಿಂಬೆ ಹಣ್ಣಿಗೆ ಡಿಮ್ಯಾಂಡ್ ಇದೆ ಒಂದು ಬಾಕ್ಸ್ ಕನಿಷ್ಠ ಐದು ಸಾವಿರ ಬೆಲೆ ಬಾಳುತ್ತದೆ ಇದನ್ನು ಕಂಡವರಿಂದಲೇ ಪೂರ್ವ ಯೋಜಿತವಾಗಿ ವಂಚು ಹಾಕಿ ಕದ್ದೊಯ್ಯಿದ್ದಾರೆ ಎಂದು ಶಂಕಿಸಲಾಗಿದೆ ಘಟನೆ ಕುರಿತು ಜಗಳೂರು ಪೋಲಿಸ್ ಠಾಣೆಗೆ ರೈತ ರವಿಕುಮಾರ್ ಕಳ್ಳರನ್ನು ಹಿಡಿದು ಮಾಲು ವಾಪಸ್ ಕೊಡಿಸುವಂತೆ ದೂರು ನೀಡಿದ್ದಾರೆ

Leave a Reply

Your email address will not be published. Required fields are marked *

You missed

error: Content is protected !!