ದಾವಣಗೆರೆ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ತ್ರಿವೇಣಿ ಎಚ್ ಎಂ.ರವರಿಗೆ ಕರ್ನಾಟಕ ಕಲಾ ಭೂಷಣ ಪ್ರಶಸ್ತಿ ಪ್ರದಾನ
ರಾಜ್ಯ ಯುವ ಬರಹಗಾರರ ಒಕ್ಕೂಟ ಹಾಗೂ ಅನುಪಮ ಟ್ರಸ್ಟ್( ರಿ)ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಚಾಮರಾಜ ನಗರದ ವಾಲ್ಮೀಕಿ ಭವನದಲ್ಲಿ ಏರ್ಪಡಿಸಲಾಗಿದ್ದ ವಿಚಾರ ಸಂರ್ಕೀಣ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಿವಿಧ ಗಣನೀಯ ಸಾಧಕರನ್ನ ಸನ್ಮಾನಿಸಿ ಗೌರವಿಸುವ ದಿವ್ಯ ಸಮಾರಂಭದಲ್ಲಿ ದಾವಣಗೆರೆ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ತ್ರಿವೇಣಿ ಇವರಿಗೆ ರಾಜ್ಯಮಟ್ಟದ ಕರ್ನಾಟಕ ಕಲಾ ಭೂಷ ಪ್ರಶಸ್ತಿ ಪ್ರದಾನ ಮಾಡಲಾಗಿದೆ
.ಶ್ರೀಯುತರು ತನ್ನ ಕರ್ತವ್ಯ ಜೊತೆಗೆ ಕೊವಿಡ್ ವೇಳೆ ಅನೇಕ ಸಂತ್ರಸ್ಥರಿಗೆ ಸಹಾಯ ಅಸ್ತ ಚಾಚಿ ಆತ್ಮಸ್ಥೈರ್ಯದಿಂದ ಸೇವೆ ನೀಡಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ತ್ರೀವೇಣಿ ಎಚ್ ಎಂ. ಇವರಿಗೆ ರಾಜ್ಯಮಟ್ಟದ ಕರ್ನಾಟಕ ಕಲಾ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಅನುಪಮ ಟ್ರಸ್ಟ್ ನ ಸಂಸ್ಥಾಪಕ ಅದ್ಯಕ್ಷೆ ಡಾ. ಪ್ರೇಮಾ ರವರು ತಿಳಿಸಿದ್ದಾರೆ..
ಕಾರ್ಯಕ್ರಮದಲ್ಲಿ ನಾಡಿನ ಗಣ್ಯರು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರು ಹಾಜುರಿದ್ದು ಕಾರ್ಯಕ್ರಮವನ್ನ ಅತ್ಯಂತ ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ ಎಂದು ಸ್ಮರಿಸಿಕೊಂಡಿದ್ದಾರೆ.

