ಜಗಳೂರಿನ ಪ್ರಾದೇಶಿಕ ವಲಯ ಅರಣ್ಯಧಿಕಾರಿಯಾಗಿ ನಿತೀನ್ ಬಲ್ಲವರ ನೂತನವಾಗಿ ಅಧಿಕಾರ ಸ್ವೀಕಾರ
ಶ್ರೀಯುತ ನಿತೀನ್ ರವರು ಮಾಜಿ ಪಪಂ ಅದ್ಯಕ್ಷರಾದ ನಾಗೇಂದ್ರರೆಡ್ಡಿಯವರ ಸುಪುತ್ರರಾಗಿದ್ದು ಈ ಹಿಂದೆ ಇವರು ಕೊಪ್ಪಳ ಚಳ್ಳಕೆರೆ ವಲಯ ಸೇರಿದಂತೆ ವಿವಿದ ಜಿಲ್ಲಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಿ ಸರ್ಕಾರದ ನೀಯಮನುಸಾರವಾಗಿ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಇದೀಗ ಜಗಳೂರು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ನಂತರ ಈ ಹಿಂದೆ ಜಗಳೂರು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಯಾಗಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸಿ ಬೇರೆಡೆಗೆ ದಾವಣಗೆರೆ ಜಲಾನಯನ ಇಲಾಖೆಯಲ್ಲಿ ಆರ್ ಎಪ್ ಆಗಿ ಕರ್ತವ್ಯ ನಿರ್ವಹಿಸಲು ವರ್ಗಾವಣೆಗೊಂಡ ಶ್ರೀನಿವಾಸರ್ ರವರು ನೂತನ ವಲಯ ಅರಣ್ಯ ಅಧಿಕಾರಿ ನಿತೀನ್ ರವರಿಗೆ ಅಧಿಕಾರ ಅಸ್ತಂತರಿಸಿ ಶುಭಾ ಕೋರಿದರು
. ಈ ಸಂದರ್ಭದಲ್ಲಿ ರಾಜ್ಯ ಎಸ್ಸಿ ಎಸ್ಟಿ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷರಾದ ಹೆಚ್ ಆರ್.ಬಸವರಾಜ್.ಎಸ್ಸಿ ಎಸ್ಟಿ ಪತ್ರಕರ್ತರ ಕ್ಷೇಮಾಭವೃದ್ದಿ ಸಂಘದ ರಾಜ್ಯ ಉಪಾದ್ಯಕ್ಷರಾದ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ .ಎಸ್ಸಿ ಎಸ್ಟಿ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಪ್ರಧಾನಕಾರ್ಯಧರ್ಶಿ ಚಿಕ್ಕಮ್ಮನಹಟ್ಟಿ ಮಂಜುನಾಥ ಸೇರಿದಂತೆ ಪತ್ರಕರ್ತ ರಪೀಕ್ ಆಹಮದ್ ಹಾಜುರಿದ್ದರು
