ಶೀರ್ಷಿಕೆ:-“ಮೌಡ್ಯತೆಗಳು ಮನದಲ್ಲಿ ಗಟ್ಟಿಯಾಗಿ ಉಳಿದಿವೆ ಇನ್ನೂ “

ಭಾರತವು ಪ್ರಾಚೀನ ಕಾಲದಿಂದಲೂ ಸಂಸ್ಕೃತಿ ಆಚಾರ ವಿಚಾರಗಳಿಗೆ ಹೆಸರುವಾಸಿ ಆಗಿರುವುದು, ನಮ್ಮ ಪೂರ್ವಜರು ಪ್ರತಿಯೊಂದು ಆಚಾರಣೆಗೂ ತನ್ನದೆ ಅರ್ಥಸಹಿತ ಮಹತ್ವದ್ದಾಗಿ ಆಚರಿಸುತ್ತ ಬಂದಿದ್ದರು.
ಆದ್ರೆ ಕಾಲ ಕಾಲಾಂತರಗಳಿಂದ ಆಚರಣೆಗಳು ಮುಂದೆ ಅರ್ಥಹೀನವಾಗಿ ಅಜ್ಞಾನಿಗಳಿಂದ ಮುಂದೆ ಶೋಷಣೆಗೆ ಕಾರಣವಾದವು ಅಂತಹವುಗಳಲ್ಲಿ ಸಾಕಷ್ಟು ಇವೆ, ಆದರೆ ನನ್ನ ಸ್ವ ಅನುಭವದಲ್ಲಿ ಕಂಡಂತಹ ನೋವಿನ ಆಚರಣೆಯನ್ನು ಹೇಳಲು ಬಯಸುವೆ.

ಸ್ವಲ್ಪ ದಿನಗಳಿಂದೆ ಕಾರಣಾಂತರಗಳಿಂದ ಅಕಾಲಿಕ ಮರಣವನ್ನು ನಮ್ಮ ಅಣ್ಣನವರು ಹೊಂದಿದರು ಇಂತಹ ಸಂದರ್ಭದಲ್ಲಿ ನಮ್ಮ ಅಣ್ಣನ ಮಗುವು ಏನು ತಿಳಿಯದ ಮುಗ್ಧ ಮನಸ್ಸುಳ್ಳ ಮಗುವು ತಂದೆಯ ಮರಣವನ್ನು ಅರಿಯದ ಮಗುವು ಮಗುವಿಗೆ ಕರುಣೆಯಿಲ್ಲದೆ ಆಚರಣೆಗಳನ್ನು ಒತ್ತಡದ ಶೋಷಣೆಯನ್ನು ಸಾವಿನ ಸಂದರ್ಭದಲ್ಲೂ ಹೇರಿದರು.


ತಂದೆಯನ್ನು ಹೊತ್ತು ಹೋಗುವಾಗ ಮಗುವಿಗೆ ಕೆಲವೊಂದು ಕಂಬಳಿಯ ರೀತಿಯ ವಸ್ತುಗಳನ್ನು ಸುತ್ತಿ
ಯಾರಿಗೂ ಕಾಣದಂತೆ ಮುಖವನ್ನು ಮುಚ್ಚಿದರೂ ಹಾಗೆಯೇ ಎಗಲ ಮೇಲೆ ನೀರು ತುಂಬಿದ ಮಡಿಕೆಯನ್ನು ಇಟ್ಟು ಹಿಂದೆ ನೋಡಬಾರದೆಂದು ಹೇಳಿದರು , ಎರಡು ಮೈಲಿ ದೂರ ಬರಿಗಾಲಿನಲ್ಲಿ ಮಗುವು ನಡೆದು ಹೋಗುವಾಗ ತನ್ನ ತಂದೆಯ ಸಾವಿನ ನೋವನ್ನು ಅನುಭವಿಸದ ಮಗುವು ಬರಿಗಾಲಿನಲ್ಲಿ ಮುಳ್ಳು ಕಲ್ಲುಗಳ ತುಳಿಯುತ್ತ, ಬಾರವ ಹೊತ್ತು ಬಾಗಿದ ತಲೆಯು, ಸಾವಿನ ನೋವಿಗಿಂತ ಆಚರಣೆಯ ಒತ್ತಡದ ನೋವನ್ನು ಅನುಭವಿಸಿತ್ತು , ಅಷ್ಟೆ ಅಲ್ಲದೆ ಶವ ಸಂಸ್ಕಾರ ಮುಗಿದ ಮೇಲೆ ಈ ಮಡಕೆಯನ್ನು ಹೊತ್ತ ಮಗುವು ಯಾರ ಜೊತೆ ಮಾತನಾಡದೆ , ಯಾರಿಗೂ ಮುಖ ತೋರದೆ ಮೂರು ದಿನಗಳ ಕಾಲ ಮನೆಯಲ್ಲೇ ಇಡಲಾಯಿತು ಹಾಗೆಯೇ ವಿಧವೆಯಾದ ಮಗುವಿನ ತಾಯಿಯನ್ನು ಸಹ ಮೂರುದಿನಗಳ ಕಾಲ ಯಾರಿಗೂ ಮುಖ ತೋರದಂತೆ ಇರಬೇಕೆಂದು ಆಚರಣೆಯ ಕಟ್ಟುಗಳ ಕಟ್ಟಳೆಗಳನ್ನು ಹೇರಲಾಗಿತ್ತು, ಮುಂದೆ ಮೂರು ದಿನಗಳ ನಂತರ ಮಗುವಿನ ತಲೆಯ ಕೇಶವ ತೆಗೆದರು, ಇದು ಕೇವಲ ಆಚರಣೆಗಳಲ್ಲ ಅಸಹಾಯಕರ ಮತ್ತು, ಹೆಣ್ಣಿನ ಮೇಲೆ ಹೇರುವ ನಿಷ್ಕರುಣೆಯ ಅಮಾನವೀಯತೆಯ ಶೋಷಣೆ, ಸಾಂತ್ವನ ಹೇಳುವ ಹೊತ್ತಲ್ಲಿ ಸಂಕಟ ನೀಡುವ ಅರ್ಥಹೀನ ಆಚರಣೆಗಳು , ಈಗಿನ ಕಾಲದಲ್ಲೂ ಒತ್ತಡದ ಹಾಗೂ ಭಾವನೆಯನ್ನೆ ಅರಿಯದ ಶೋಷಣೆಯ ಆಚರಣೆಗಳು ತುಂಬಿರುವುದೊಂದು ಅಸಾಮಾನ್ಯವಾಗಿದೆ. ಇಂತಹ ಎಷ್ಟೋ ಆಚರಣೆಗಳು ಅಸಹಾಯಕರ ಮೇಲೆ ಬೇರೆ ಬೇರೆ ರೀತಿಯಲ್ಲಿ ಶೋಷಿಸಲ್ಪಡುತ್ತಿದೆ , ಇನ್ನೂ ದೇವರ ಹೆಸರಿನಲ್ಲಿ ಸಹ ಮೋಸಗೊಳಿಸುವಿಕೆ ದೇವರ ಮೇಲಿನ ನಂಬಿಕೆಗೆ ದಕ್ಕೆ ತರುವ ಅಂಶಗಳಾಗಿವೆ.

ಇದಕ್ಕೆಲ್ಲ ಮೂಲ ಕಾರಣ ಶಿಕ್ಷಣದ ಕೊರತೆ, ಇಂತಹ ಮೌಢ್ಯತೆಯ ಆಚರಣೆಗಳು ವಿರೋಧಿಸಿದ ಅಂಬೇಡ್ಕರ್,ಬಸವೇಶ್ವರರು , ಸಂತರನ್ನು ಖಂಡಿತ ನೆನೆಯಲೇ ಬೇಕಾಗುತ್ತದೆ .

✍️ ಅಂಜಿನಪ್ಪ ಬಿ ಎಸ್
(ಯುವ ಸಾಹಿತಿ)ಗೌಡಿಕಟ್ಟೆ,
ಜಗಳೂರು (ತಾ)

Leave a Reply

Your email address will not be published. Required fields are marked *

You missed

error: Content is protected !!