ದಿನಾಂಕ:19-07-2025 ರಂದು ಕರ್ನಾಟಕ ಸರ್ಕಾರ, ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಾವಣಗೆರೆ, ದಾವಣಗೆರೆ ಜಿಲ್ಲಾ ಬಾಲಭವನ ಸಮಿತಿ, ಜಗಳೂರು ತಾಲ್ಲೂಕು ಬಾಲಭವನ ಸಮಿತಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ದಾವಣಗೆರೆ ವತಿಯಿಂದ ಶರಣ ಶ್ರೀ ಹಿರಿಯ ಪ್ರಾಥಮಿಕ ಶಾಲೆ , ದೋಣೆಹಳ್ಳಿ , ಜಗಳೂರು ತಾಲ್ಲೂಕು ನಲ್ಲಿ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀ ಸುಮ, ಸಹ ಶಿಕ್ಷಕರು, ಇವರು ಸರ್ವರನ್ನು ಸ್ವಾಗತಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಆಶಾ ಮುಖ್ಯೋಪಾಧ್ಯಾಯರು, ಶರಣ ಶ್ರೀ ಹಿರಿಯ ಪ್ರಾಥಮಿಕ ಶಾಲೆ, ದೋಣೆಹಳ್ಳಿ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು.


ಶ್ರೀ ಎಂ. ಗುರುಸಿದ್ಧಾಸ್ವಾಮಿ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ದಾವಣಗೆರೆ ಇವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು

. ಶ್ರೀಮತಿ ಶಿಲ್ಪ ಎಸ್ ಬಿ ಕಾರ್ಯಕ್ರಮ ಸಂಯೋಜಕರು, ಜಿಲ್ಲಾ ಬಾಲಭವನ ಸಮಿತಿ ದಾವಣಗೆರೆ ಇವರು ಬಾಲ ಭವನದಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಸುಭಾಷ್ ಚಂದ್ರ ಪ್ರಾಚಾರ್ಯರು, ಶ್ರೀ ಶರಣ ಬಸವೇಶ್ವರ ಶಿಕ್ಷಕರ ತರಬೇತಿ ಕೇಂದ್ರ, ಇವರು ಉಪಸ್ಥಿತರಿದ್ದರು.

ನಂಬರ್ ಗೇಮ್, ಬಾಲ್ ವಿತ್ ಗ್ಲಾಸ್, ಅಡಿಷನ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವಾಗಿ ಪೆನ್ , ಪ್ರಶಸ್ತಿ ಪತ್ರ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಅಭಿನಂದನಾ ಪತ್ರ ವಿತರಿಸಲಾಯಿತು.

Leave a Reply

Your email address will not be published. Required fields are marked *

You missed

error: Content is protected !!