ಜನಸಂಖ್ಯಾ ಸ್ಫೋಟದಿಂದ ದೇಶದ ಆರ್ಥಿಕ ಅಭಿವೃದ್ದಿಗೆ ಹಿನ್ನಡೆಯಾಗಲಿದೆ ಸಾಕ್ಷರತೆ ಪ್ರಮಾಣ ಹೆಚ್ಚಾದಾಗ ಜನಾಸಂಖ್ಯೆ ಸ್ಪೋಟಕ್ಕೆ ಕಡಿವಾಣ ಹಾಕಲು ಅತ್ಯಂತ ಸಹಕಾರಿಯಾಗಲಿದೆ ಎಂದು ಶಾಸಕ ಬಿ ದೇವೇಂದ್ರಪ್ಪ ಅಭಿಪ್ರಾಯಪಟ್ಟರು.

ಜಗಳೂರು ಸುದ್ದಿ

ಜಗಳೂರು ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ‌ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲ್ಲೂಕು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನ ಏರ್ಪಡಿಸಲಾಗಿದ್ದ ಸಮಾರಂಭವನ್ನ ಶಾಸಕ ಬಿ ದೇವೇಂದ್ರಪ್ಪ ಉದ್ಗಾಟಿಸಿ ಮಾತನಾಡಿದರು ..

ಸಮಾಜದಲ್ಲಿ ಮೌಡ್ಯ ಕಂದಚಾರಗಳು ತೋಲಗಿ ಸ್ವಾಸ್ಥ್ಯ ಸುಶಿಕ್ಷಿತ ಸಮಾಜ ನಿರ್ಮಾಣವಾಗಲು ಸಾಕ್ಷರತ ಪ್ರಮಾಣ ಹೆಚ್ಚಾದಾಗ ದೇಶದಲ್ಲಿ ಆರೋಗ್ಯವಂತ ಸದೃಡ ಸಮಾಜವಾಗಲು ಸಾದ್ಯವಾಗಲಿದೆ.
ಜನರು ಸೋಮಾರಿತನವನ್ನ ಕೈಬಿಟ್ಟು ದುಡಿಮೆಯ ಹಾದಿಯನ್ನು ಹಿಡಿದು ಆರ್ಥಿಕ ಅಬಿವೃದ್ದಿಯಾಗಲು ಪ್ರತಿಯೊಬ್ಬ ನಾಗರೀಕರನು ಕೂಡ ಅವರ ಅವರ ಜವಾಬ್ದರಿ ಅರಿತು ಕಾರ್ಯನ್ಮಖರಾಗಿ ಕಾಯಕ ಮಾಡಲು ಶ್ರಮಿಸುವಂತೆ ತಿಳಿಸಿದರು‌.

ಈಗಾಗಲೇ ದೇಶದಲ್ಲಿ ಒಟ್ಟು 146 ಕೋಟಿಗು ಅಧಿಕ ಜನಾಸಂಖ್ಯೆಯಿಂದ ಅನೇಕ ಸಮಸ್ಯೆಗಳು ಸೃಷ್ಢಿಯಾಗಲಿವೆ .ಸಮಾಜದಲ್ಲಿ ಬಾಲ್ಯ ವಿವಾಹಗಳು ಬಾಲ್ಯ ಗರ್ಭಿಣಿಯಾಗುವುದು ಆಪಾರದವಾಗುವ ಮುನ್ನ ಸಮಾಜದಲ್ಲಿ ಜಾಗೃತಿ ಅಗತ್ಯ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುವಂತ ಸಂಬಂಧಿಸಿದ ಆಶಾ ಕಾರ್ಯಕರ್ತೆಯರು ಅಂಗನವಾಡಿ ಇಲಾಖೆ ಸಿಬ್ಬಂದಿಗಳು ಜಾಗೃತಿ ಮೂಡಿಸಲು ಮುಂದಾಗುವಂತೆ ಕರೆ ನೀಡಿರು.

ದಾವಣಗೆರೆ. ಡಿ .ಎಚ್. ಓ ಷಣ್ಮಖಪ್ಪ ಮಾತನಾಡಿದರು ಜನಸಂಖ್ಯೆ ಸ್ಪೋಟದಿಂದ ಸಮಾಜದಲ್ಲಿ ಅನೇಕ ಸಮಸ್ಯೆಗಳು ಮತ್ತು ಸವಾಲುಗಳ ಅತಂಕವಿದೆ. ಪ್ರಾಕೃತಿಕ ಸಮತೋಲನಕ್ಕೆ ಜನಸಂಖ್ಯೆ ನಿಯಂತ್ರಣ ಅಗತ್ಯ
ಪ್ರಪಂಚದಲ್ಲಿ ಭಾರತ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಮೊದಲನೆ ಸ್ಥಾನ ಬರುವ ದಿನಗಳು ದೂರವಿಲ್ಲ. ಜನಸಂಖ್ಯೆ ಸ್ಪೋಟದಿಂದ ಅನೇಕ ರೀತಿಯ ಸಮಸ್ಯೆಗಳು ಉದ್ಭವಗೊಳ್ಳುವ ಮುನ್ನ ಜನಸಂಖ್ಯೆ ಹೆಚ್ಚಳ ತಡೆಗಟ್ಟುವುದು ಅವಶ್ಯಕ ಎಂದರು

ಮಕ್ಕಳ ರಕ್ಷಣ ಅಧಿಕಾರಿ ಕವಿತಾ ಮಾತನಾಡಿ ಬಾಲ್ಯವಿಹಾವ ಪದ್ದತಿ ತೊಲಗಬೇಕು
ಇಂತ ಅನಿಷ್ಠ ಪದ್ದತಿಗಳನ್ನು ತೋಲಗಿಸುವುದು ಪ್ರತಿಯೊಬ್ಬ ನಾಗರೀಕನ ಹಕ್ಕು ಎಂದರು
ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇಂತ ಅನಿಷ್ಠ ಪದ್ದತಿಯನ್ನ ತೊಲಗಿಸಲು ಶ್ರಮಿಸುತ್ತಿದ್ದು ಜಗಳೂರು ತಾಲ್ಲೂಕು ಬಾಲ್ಯವಿವಾಹ ಮುಕ್ತ ತಾಲ್ಲೂಕು ಕೇಂದ್ರವನ್ನಾಗಿಸಲು ಶ್ರಮಿಸಿ ಎಂದು‌ ಕರೆ ನೀಡಿದರು .

ಪಿ .ಎಸ್. ಐ ಆಶಾ ಮಾತನಾಡಿದರು ಆಧುನಿಕತೆಯಲ್ಲಿ ತಾಂತ್ರಿಕತೆ ಹೆಚ್ಚಾದಂತೆಲ್ಲ ಆಪಾರಧಗಳು ಹೆಚ್ಚಾಗುತ್ತಾ ಬರುತ್ತವೆ.ಸಮಾಜದಲ್ಲಿ ಮಹಿಳೆ ಮತ್ತು
ಮಕ್ಕಳ ಮೇಲಿನ ದೌರ್ಜನ್ಯಗಳು ನಡೆದಾಗ ಅತ್ತಿರದ ಪೊಲೀಸ್ ಇಲಾಖೆಯಲ್ಲಿ ದೂರು ದಾಖಲಿಸಿಕೊಂಡು ನ್ಯಾಯ ಪಡೆದುಕೊಳ್ಳಲು ಹಿಂಜರಿಕೆ ಬೇಡ

.ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಮಕ್ಕಳ ತಜ್ಘರಾದ ಡಾ ಜಯಕುಮಾರ್. ಅರೋಗ್ಯ ಇಲಾಖೆ ಸುರೇಶ್ ಬಾಬು ಸೇರಿದಂತೆ ಇನ್ನಿತರೆ ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಡಾ.ರೇಣುಕಾನಂದ p.w.u. ರುದ್ರಸ್ವಾಮಿ.ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತ ಅಧಿಕಾರಿ ಷಣ್ಮಖಪ್ಪ. ಟಿ ಎಚ್ ಓ ವಿಶ್ವನಾಥ .ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ.ಬಿ.ಮಹೇಶ್ವರಪ್ಪ. ಸಿ.ಡಿ.ಪಿ.ಓ .ಬೀರೇಮದ್ರಕುಮಾರ್.ಸರ್ಕಾರಿ ನೌಕರರ ಸಂಘದ ಮಾಜಿ ಅದ್ಯಕ್ಷರಾದ ನಾಗರಾಜ. ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಉಮೇಶ್ ಸೇರಿದಂತೆ ಮುಂತಾದವರು ಹಾಜುರಿದ್ದರು.

.

Leave a Reply

Your email address will not be published. Required fields are marked *

You missed

error: Content is protected !!