ವಿಷಯ:-ವ್ಯಾಸಗೊಂಡನಹಳ್ಳಿ ಎಂ.ರಾಜಪ್ಪರವರ ಕುರಿತು ನನ್ನದೊಂದು ಕವನ

ಶೀರ್ಷಿಕೆ: ಶುಕ್ರದೆಸೆ ನ್ಯೂಸ್ ಮೀಡಿಯಾ

ವ್ಯಾಸಗೊಂಡನಹಳ್ಳಿಯಲ್ಲಿ ಹುಟ್ಟಿದ ಕನ್ನಡದ ಕುವರ
ದಿಟ್ಟ ಹೆಜ್ಜೆಯನ್ನಿಟ್ಟು ಬಂದ ಜಗಳೂರಿನ ಮಹಾ ಶೂರ
ಇರೋವುದನ್ನೇ ಸುದ್ದಿ ತಿಳಿಸುವ ಶುಕ್ರದೆಸೆಯ ಸಾಹುಕಾರ
ಕನ್ನಡಪರ ಸಂಘಟನೆಗಳಲ್ಲಿ ಧುಮುಕುವ ಹೋರಾಟಗಾರ

ಸದಾ ಹಸನ್ಮುಖಿಯಾಗಿಯೇ ದುಡಿಯುವ ಛಲಗಾರ
ಬಯಲು ಸಿರಿಯ ಸೊಬಗನ್ನು ವರ್ಣಿಸಿದ ಸಾಹಿತ್ಯಗಾರ
ಶುಕ್ರದೆಸೆ ವಾರ್ತಾ ಪತ್ರಿಕೆಯಲ್ಲಿ ತಿಳಿಸುವರು ಸುದ್ದಿಸಾರ
ಸಂಗೀತ ಗಾಯನದಲ್ಲೂ ಇವರು ಉತ್ತಮ ಹಾಡುಗಾರ

ಕಲೆ ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಇವರಿಗಿದೆ ಕಾಳಜಿ
ರಾಜಣ್ಣ ಎಂದೊಡನೆ ಅವರ ಮನಸು ಬಲು ಅಪರಂಜಿ
“ಬಯಲು ಸಿರಿ” ಕವನ ಸಂಕಲನದ ಮಹಾನ್ ಗುರೂಜಿ
ಸಮಾಜ ಸೇವೆಯಲ್ಲಿ ಇವರಿಗಿದೆ ಅಪಾರ ಮುತುವರ್ಜಿ

ಅನ್ಯಾಯ ಅಕ್ರಮಗಳನ್ನು ಖಂಡಿಸಲು ನಿಂತ ವೀರಾಗ್ನಿ
ಪತ್ರಕರ್ತರಾಗಿ ಖಂಡ್ಗದಂತೆ ಹಿಡಿದು ನಿಂತರು ಲೇಖನಿ
ಅನ್ಯಾಯ ಅಕ್ರಮಗಳ ವಿರುದ್ಧವಾಗಿ ಎತ್ತಿದರು ದ್ವನಿ
ಭ್ರಷ್ಟಾಚಾರ ತೊಲಗಿಸಲು ಪಣತೊಟ್ಟು ಹಿಡಿದರು ಲೇಖನಿ

“ಶುಕ್ರದೆಸೆ” ವಾರ್ತಾ ಪ್ರಸಾರದ ದಿಟ್ಟ ಹೆಜ್ಜೆಯ ಸಾಹಸ
ಮಲಗಿ ಮೈಮರೆತು ನಿಂತವರನ್ನು ಬಡಿದೆಬ್ಬಿಸುವ ಕೆಲಸ
ಶುರುವಾಗಿರುವುದು ರಾಜಣ್ಣರ ಬದುಕಿನಲ್ಲಿ ಶುಕ್ರದೆಸೆ
ಸರ್ವ ಕ್ಷೇತ್ರದಲ್ಲೂ ಸಾಧಸಲಿ ಎಂಬುದೇ ನನ್ನ ಮನದಾಸೆ.

✍🏻ಹನುಮಂತಪ್ಪ.ಎನ್.ಎ, ದೊಡ್ಡಬೊಮ್ಮನಹಳ್ಳಿ.
ಮೊ: ೯೧೬೪೭ ೮೭೨೭೪

ಹನುಮಂತಪ್ಪನವರ ಅಭಿಮಾನದ ಕವಿತೆಗೆ ನಾನು ಚಿರ ಋಣಿ ನಿಮ್ಮಂತ ವ್ಯಕ್ತಿತ್ವದ ಸ್ನೇಹ ಸಂಬಂಧ ಪಡೆದ ನಾನೇ ದನ್ಯನೆಂದು ಭಾವಿಸುವೆ.ಇಂತಿ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ

ಇಂತಿ ಎಂ.ರಾಜ

Leave a Reply

Your email address will not be published. Required fields are marked *

You missed

error: Content is protected !!