ಸುದ್ದಿ ಜಗಳೂರು

ಮೊದಲನೇ ಶ್ರಾವಣ ಮಾಸದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಉರುಳು ಸೇವೆ ಸಲ್ಲಿಸಿದ ಕಾಂಗ್ರೇಸ್ ಶಾಸಕ ಬಿ ದೇವೇಂದ್ರಪ್ಪ ಅರಕೆ ತೀರಿಸಿದರು

ಕಲ್ಲೇಶ್ವರ ದೇವರಿಗೆ ಉರುಳು ಮಾಡಿದ ಕಾಂಗ್ರೇಸ್ ಶಾಸಕ ಬಿ.ದೇವೇಂದ್ರಪ್ಪ.

ಜಗಳೂರು ತಾಲ್ಲೂಕಿನ ಐತಿಹಾಸಿಕ ಶ್ರೀ ಕಲ್ಲೇದೇವರಪುರ ಗ್ರಾಮದ ಶ್ರೀ ಕಲ್ಲೇಶ್ವರ ದೇವಾಸ್ಥಾನಕ್ಕೆ ಶಾಸಕ ಬಿ‌.ದೇವೇಂದ್ರಪ್ಪರವರು ಭೇಟಿ ನೀಡಿ ಉರುಳು ಸೇವೇ ಸಲ್ಲಿಸಿ ವಿಶೇಷ ಪೂಜೆಯೊಂದಿಗೆ ಅಲ್ಲಿಯೇ ಪ್ರಸಾದ ಸವಿದರು ಶ್ರೀ ಕಲ್ಲೇಶ್ವರ ಸ್ವಾಮಿ ಅಶಿರ್ವಾದ ಪಡೆದು ನಾಡಿಗೆ ಉತ್ತಮ ಮಳೆ ಬೆಳೆ ಸಮೃದ್ದಿಯಾಗಲೇಂದು ಪ್ರಾರ್ಥಿಸಿಕೊಂಡರು .

ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು ಶಾಸಕರ ಪ್ರದೇಶ ಅಭಿವೃದ್ದಿ ಯೋಜನೆಡಿಯಲ್ಲಿ ದೇವಾಸ್ಥಾನದ ಆವರಣದಲ್ಲಿ ಸುಮಾರು 35 ಲಕ್ಷ ರೂಗಳಲ್ಲಿ ಕಾಂಕ್ರಿಟ್ ಬಳಕೆ ಮಾಡಿ ಸುಂದರ ಆವರಣವನ್ನಾಗಿ‌ ಮಾಡಲಾಗಿದೆ‌ ಇಂತ ಐತಿಹಾಸಿಕ ದೇವಾಲಯವನ್ನ ಉಳಿಸಿಕೊಂಡು ಹೋಗುವುದು ನಮ್ಮೆಲರ ಆದ್ಯಕರ್ತವ್ಯವಾಗಿದೆ. ಅಂದು 11_ 12 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ಶೈಲಿಯಲ್ಲಿ ನಿರ್ಮಿಸಿದ ದೇವಾಲಯವಾಗಿದ್ದು ಯಾವ‌ ಸುಭ್ರಮಣ್ಯೆ ದೇವಾಲಯಕ್ಕಿಂತ ಏನು ಕಡಿಮೆಯಿಲ್ಲ ಎಂದರು

ಈ ದೇವಾಲಯ ಒಂದು ಐತಿಹಾಸಿಕ . ಅಪರೂಪ ದೇವಾಲಯವಾಗಿದ್ದು ಭಕ್ತಾಧಿಗಳು ರಾಜ್ಯದ ಹೊರ ರಾಜ್ಯದಿಂದ ಆಗಮಿಸುವರು ಇಂತ ದೇವಾಲಯಕ್ಕೆ ನಮ್ಮ ಸೇವೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು

ಈ ಸಂದರ್ಭದಲ್ಲಿ‌ ಗ್ರಾಮದ ಮುಖಂಡರಾದ ಸಣ್ಣಸೂರಜ್ಜ.ಮಾಜಿ ಜಿಪಂ ಸದಸ್ಯ ಕೆ.ಪಿ ಪಾಲ್ಯಯ್ಯ.ಕಾಂಗ್ರೇಸ್ ಎಸ್ಟಿ ರಾಜ್ಯ ಪ್ರದಾನಕಾರ್ಯದರ್ಶಿ ಎಂ.ಡಿ‌.ಕೀರ್ತಿಕುಮಾರ್‌ . ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ್‌.ಕಾಂಗ್ರೇಸ್ ಮುಖಂಡ ಕಲ್ಲೇಶ್ ರಾಜ್ ಪಟೇಲ್. ಕಾಂಗ್ರೇಸ್ ಪಕ್ಷದ ಬ್ಲಾಕ್ ಅದ್ಯಕ್ಷರಾದ ಷಂಷೀರ್ ಆಹಮದ್ .ಮುಖಂಡರಾದ ಕೆಚ್ಚೇನಹಳ್ಳಿ ಹರೀಶ್. .ಡಿ ಆರ್ ಹನುಮಂತಣ್ಣ. ಸೇರಿದಂತೆ ಮುಂತಾದವರು ಹಾಜುರಿದ್ದರು.

ಶ್ರೀ ವಿಶೇಷ ಪೂಜೆ ಸಲ್ಲಿಸಿ
ದೇವಾಸ್ಥಾನದಲ್ಲಿಯೇ ಭಕ್ತರೊಂದಿಗೆ ಪ್ರಸಾದ ಸವಿದರು

Leave a Reply

Your email address will not be published. Required fields are marked *

You missed

error: Content is protected !!