filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;

ಶುಕ್ರದೆಸೆ ನ್ಯೂಸ್

ಜಗಳೂರು ಸುದ್ದಿ

ರಸ್ತೆಯೊ ಅಥವಾ ಕೆಸರು ಗದ್ದೆಯೊ ಕ್ಯಾರೆ ಅನ್ನದ ಪಿಡಿಓ ವಾಸು ಜಗಳೂರು ತಾಲ್ಲೂಕಿನ ಕೆಚ್ಚೆನಹಳ್ಳಿ ಗ್ರಾಮ ಪಂಚಾಯಿತಿ ಖಿಲಾ ಕಣ್ಣುಕುಪ್ಪೆ ಗ್ರಾಮದಲ್ಲಿ ಕೆಸರು ಗದ್ದೆಯಂತಾದ ರಸ್ತೆ ಜನರು‌ ಓಡಾಡುವುದೆ ಸಾಹಸ ಚರಂಡಿ ಗಬ್ಬೆದ್ದು ನಾರುತ್ತಿದೆ ಗ್ರಾಮಸ್ಥರು ಪಿಡಿಒ ವಿರುದ್ದ ಆಕ್ರೋಶ

ಗ್ರಾಮದಲ್ಲಿ ಸುಮಾರು 150 ಕುಟುಂಬಕ್ಕು ಹೆಚ್ಚು ವಾಸಿಸುವಂತ ಗ್ರಾಮ ಖಿಲಾ ಕಣ್ಣುಕುಪ್ಪೆ ಗ್ರಾಮದಲ್ಲಿ ಮಾರಪ್ಪನ ಮನೆಯಿಂದ ಮಡ್ರಹಳ್ಳಿ ಚೌಡಮ್ಮನ ದೇವಾಸ್ಥಾನದವರೆಗೆ ಹದಗೆಟ್ಟ ರಸ್ತೆ ಗದ್ದೆಯೊ ಅಥವಾ ರಸ್ತೆಯೊ ಮಳೆ ಬಂತೆಂದರೆ ಸಾಕು ಈ ರಸ್ತೆಯಲ್ಲಿ ವೃದ್ದರು .ಶಾಲಾ ಮಕ್ಜಳು. ಮಹಿಳೆಯರು . ಒಡಾಡುವುದೆ ದುಸ್ತರವಾಗಿದೆ‌. ಸುಮಾರು ಬಾರಿ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ರಸ್ತೆ ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು ಕ್ಯಾರೆ ಎನ್ನದ ಪಿಡಿಓ ವಾಸು ವಿರುದ್ದ ಗ್ರಾಮಸ್ಥರು ಕಿಡಿಕಾರಿದ್ದಾರೆ.

ಹದಗೆಟ್ಟ ರಸ್ತೆ ಮತ್ತು ಚರಂಡಿ ಸ್ವಚತೆ ಮಾಡುವಂತೆ ಅಲ್ಲಿನ ಗ್ರಾಮಸ್ಥರು ಕಳೆದ ಒಂದುವರೆ ತಿಂಗಳಿನಿಂದ ಹಲವು ಬಾರಿ ಗ್ರಾಮಸ್ಥರು ದೂರು ನೀಡಿದರೂ ಸಹ ಕ್ಯಾರೆ ಎನ್ನುತ್ತಿಲ್ಲ ಇನ್ನು ಜಗಳೂರಿಗೆ ಕೂಗು ಅಳತೆಯಲ್ಲಿರುವ ಖಿಲಾ ಕಣ್ಣುಕುಪ್ಪೆ ಕೆಚ್ಚೆನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕುಗ್ರಾಮವಾದ ಖಿಲಾ ಕಣ್ಣುಕುಪ್ಪೆಗೆ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.
ಗ್ರಾಮದ ಮಡ್ರಹಳ್ಳಿ ಚೌಡಮ್ಮನ ದೇವಾಸ್ಥಾನ ವಾರ್ಡಿನಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಜನರು‌ ರಾತ್ರಿ ವೇಳೆಯಲ್ಲಿ ಕಗ್ಗತ್ತಲಿನಲ್ಲಿ ಜೀವನ ಸಾಗಿಸುವಂತಾಗಿದೆ..

.

ಸಂಜೆಯಾದರೆ ಸಾಕು ಜಾಂಭವಂತ ಕರಡಿಗಳ ಹಾವಳಿ
ರಾತ್ರಿ ಪಾಳೆಯದಲ್ಲಿ ಜನರು ಭಯದ ವಾತವರಣದಲ್ಲಿ ತಿರುಗಾಡುತ್ತಿದ್ದಾರೆ ಸಂಜೆಯಾದರು ಸಾಕು ಕಣ್ಣುಕುಪ್ಪೆ ಗುಡ್ಡದಿಂದ ಕರಡಿಗಳು ಊರು ಒಳಗೆ ಪ್ರವೇಶಿಸಿ ದೇವಾಸ್ಥನದಲ್ಲಿರುವ ಎಣ್ಣಿ ಬಾಳೆಹಣ್ಣು ಸೇರಿದಂತೆ‌ ಕೆಲ ಮನೆಗಳ ಮುಂದೆ ಇಟ್ಟಿರುವ ಮುಸುರೆ‌ ಕುಡಿದು ಹೋಗುವುದು ಸರ್ವೆಸಾಮಾನ್ಯವಾಗಿದೆ ಎನ್ನುವರು ಇಲ್ಲಿನ ಗ್ರಾಮಸ್ಥರು.
. ಆದ್ದರಿಂದ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳಾದ ವಿದ್ಯುತ್. ರಸ್ತೆ‌ ಚರಂಡಿ ಸ್ವಚತೆಗೆ ಹೆಚ್ಚಿನ ಆದ್ಯತೆ ನೀಡಿ ಶೀಘ್ರವೇ ವಿದ್ಯತ್ ರಸ್ತೆ ಅಭಿವೃದ್ದಿಪಡಿಸುವಂತೆ ಒತ್ತಾಯಿಸಿದ್ದಾರೆ.

ವಿದ್ಯುತ್ ಸಂಪರ್ಕ‌ ಹಾಗೂ ಶೀಘ್ರವೆ ರಸ್ತೆ ಚರಂಡಿ ದುರಸ್ತೆ ಮಾಡದೇ ಹೋದರೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಹಾಗೂ ಬೆಸ್ಕಾಂ ಇಲಾಖೆ ಮುಂಭಾಗದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮದ ಆನಂದಪ್ಪ ಎಚ್ಚಿರಿಕೆ ನೀಡಿದ್ದಾರೆ.

ಚರಂಡಿ ವ್ಯವಸ್ಥೆ ಹದಗೆಟ್ಟಿದೆ ಸಂಬಂಧಿಸಿದ ಅಧಿಕಾರಿಗೆ ದೂರು ನೀಡಿದರೂ ಪಿಡಿಒ ನಿರ್ಲಕ್ಷ್ಯ ಮಾಡುತ್ತಿದ್ದುದ್ದರಿಂದ ಗ್ರಾಮಸ್ಥ ಚೌಡಪ್ಪ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!