ಹೆತ್ತವರು ನಮಗೆ ಜನ್ಮ ನೀಡಿ ಸಂಸ್ಕಾರ ಕೊಟ್ಟರೆ ,ಜೀವನ ರೂಪಿಸುವುದು ಶಿಕ್ಷಕ ವೃತ್ತಿ ಪವಿತ್ರವಾದದ್ದು ಶಾಸಕ ಬಿ.ದೇವೇಂದ್ರಪ್ಪ ಶ್ಲಾಘಿಸಿದರು.


ಜಗಳೂರು,ಆ.2: ಹೆತ್ತವರು ನಮಗೆ ಜನ್ಮ ನೀಡಿ ಸಂಸ್ಕಾರ ಕೊಟ್ಟರೆ ,ಜೀವನ ರೂಪಿಸುವುದು ಶಿಕ್ಷಕ ವೃತ್ತಿ ಪವಿತ್ರವಾದದ್ದು ಶಾಸಕ ಬಿ.ದೇವೇಂದ್ರಪ್ಪ ಶ್ಲಾಘಿಸಿದರು. .

ಶನಿವಾರ ಪಟ್ಟಣದ ಗುರುಭವನದಲ್ಲಿ ಪ್ರೌಢಶಾಲಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಬಿಎಲ್‌ ಸುರೇಶ್ ರೆಡ್ಡಿ ಅವರ ನಿವೃತ್ತಿ ಸಮಾರಂಭದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.

ಒಬ್ಬ ಯಶಸ್ವಿ ಪುರುಷನ ಹಿಂದೆ ತಾಯಿ,ಸಹೋದರಿ,ಧರ್ಮಪತ್ನಿಯ ಪಾತ್ರವಿರುತ್ತದೆ.ವೃತ್ತಿಜೀವನಕ್ಕೆ‌ ಬೆನ್ನೆಲುಬಾಗಿ ನಿಲ್ಲುವುದು ಧರ್ಮಪತ್ನಿ ಎಂಬುದನ್ನು ಮರೆಯಬಾರದು.ಸರ್ಕಾರಿ ಹುದ್ದೆಯಲ್ಲಿ ವಯೋನಿವೃತ್ತಿಯವರೆಗೂ ಕಾಯಕ ನಿಷ್ಠೆ,ಶಿಸ್ತು,ಸಮಯಪಾಲನೆ,ಸಹುದ್ಯೋಗಿಗಳೊಂದಿಗೆ ಸಹಬಾಳ್ವೆ,ಸಾಮರಸ್ಯತೆ ಕಾಪಾಡಿಕೊಂಡರೆ ವೃತ್ತಿ ಜೀವನ ಯಶಸ್ವಿ ಜೊತೆಗೆ ಸಮಾಜದಲ್ಲಿ ಗೌರವ,ಮನ್ನಣೆ ಲಭಿಸುತ್ತವೆ ಎಂದು ಸಲಹೆ ನೀಡಿದರು.

ತರಗತಿಯಲ್ಲಿ ವಿಷಯ ಶಿಕ್ಷಕರಿಗಿಂತ ದೈಹಿಕ ಶಿಕ್ಷಕರು ವಿದ್ಯಾರ್ಥಿಗಳ ಮಧ್ಯೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ.ದಿನದ ವೇಳಾಪಟ್ಟಿಯಲ್ಲಿ ಕ್ರೀಡಾ ಅವಧಿಯಲ್ಲಿ ದೈಹಿಕ ಶಿಕ್ಷಕರೊಂದಿಗೆ ಆನಂದದಿಂದ ಸಮಯ ಕಳೆಯುತ್ತಾರೆ.ಇಂತಹ ನೆಚ್ಚಿನ ವೃತ್ತಿಯಲ್ಲಿ ವಯೋ ನಿವೃತ್ತಿಯವರೆಗೂ ಸುದೀರ್ಘವಾಗಿ 31 ವರ್ಷಗಳ ಕಾಲ‌ಸೇವೆಗೈದ ದೈಹಿಕ ಶಿಕ್ಷಣ ಪರಿವೀಕ್ಷಕ ಸುರೇಶ್ ರೆಡ್ಡಿ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.

ಮನುಷ್ಯನಿಗೆ ಸಂಪತ್ತಿಗಿಂತ ಆರೋಗ್ಯ ಮುಖ್ಯ.ಪ್ರತಿಯೊಬ್ಬರೂ ವೃತ್ತಿ ಒತ್ತಡದ ಜೊತೆ ವೈಯಕ್ತಿಕ ಆರೋಗ್ಯಕ್ಕೆ ಒತ್ತುಕೊಡಿ,ಬಾಲ್ಯದಲ್ಲಿನ ಆಹಾರಪದ್ದತಿ ಸೇವನೆ ಪರಿಣಾಮ ಇತ್ತೀಚೆಗೆ ನಾನೂ ಕೂಡ ಸದೃಢ ಆರೋಗ್ಯ ಕಾಪಾಡಿಕೊಳ್ಳಲುಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಜಿ.ಪಂ ಸದಸ್ಯ ಕೆ.ಪಿ ಪಾಲಯ್ಯ ಮಾತನಾಡಿ,ಸುರೇಶ್ ರೆಡ್ಡಿ ಅವರ ವೃತ್ತಿಜೀವನದ ವಯೋನಿವೃತ್ತಿಯ ಕೊನೆಯದಿನಗಳನ್ನು ತವರು ತಾಲ್ಲೂಕಿನಲ್ಲಿ ಸೇವೆ ಗೈದಿರುವುದು ಶ್ಲಾಘನೀಯ.ನಾನು ಜಿಲ್ಲಾಪಂಚಾಯಿತಿ ಸದಸ್ಯನಾದ ಸಂದರ್ಭದಲ್ಲಿ ಸುರೇಶ್ ರೆಡ್ಡಿ ಅವರ ಜವಾಬ್ದಾರಿಯಿಂದ ಪ್ರಾಥಮಿಕ,ಪ್ರೌಢಶಾಲೆ ಹಂತದ ಎರಡು ಜಿಲ್ಲಾಮಟ್ಟದ ಕ್ರೀಡಾಕೂಟ ಆಯೋಜಿಸಿ ಯಶಸ್ವಿಗೊಳಿಸಲಾಗಿತ್ತು ಎಂದರು.

ಬಿಇಓ ಹಾಲಮೂರ್ತಿ ಮಾತನಾಡಿ,ಪ್ರಸಕ್ತಸಾಲಿನಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಪಾಠ ಪ್ರವಚನಗಳನ್ನು ಸಕ್ರಿಯವಾಗಿ ನಡೆಸುವ ಮೂಲಕ ಅಧ್ಯಯನ ನಡೆಸಬೇಕಿದೆ.ಪೋಷಕರ ಸಭೆಯೊಂದಿಗೆ ಶಿಕ್ಷಣ ಆದ್ಯತೆಗೆ ಒತ್ತು ನೀಡಲು ಮನವರಿಕೆಮಾಡಲಾಗುತ್ತಿದೆ.ಡಿಸೆಂಬರ್ ಅಂತ್ಯಕ್ಕೆ ವಿಷಯಾನುಕ್ರಮಣಿಕೆ ಮುಕ್ತಾಯಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸುರೇಶ್ ರೆಡ್ಡಿ ಅವರು ಇಲಾಖೆಯಲ್ಲಿ ಕರ್ತವ್ಯ ಬದ್ದತೆಯಿಂದ ಇಲಾಖೆಯಲ್ಲಿ ತಮ್ಮ ವೃತ್ತಿಯೊಂದಿಗೆ ವಿಷಯ ಶಿಕ್ಷಕರಂತೆ ಜವಾಬ್ದಾರಿ ನಿಭಾಯಿಸಿದ ಅವರ ಕಾರ್ಯವೈಖರಿ ನಿಜಕ್ಕೂ ಪ್ರಶಂಸನೀಯ.ಅವರ ನಿವೃತ್ತಿಯಿಂದ ಇಲಾಖೆಯ ಕೊಂಡಿ ಕಳಚಿದಂತಾಗಿದೆ ಅವರಂತಹ ಮತ್ತೊಬ್ಬ ಅಧಿಕಾರಿಯ ಅವಶ್ಯಕತೆಯಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಆರ್ ಸಿ ಡಿಡಿ ಹಾಲಪ್ಪ,ಅಕ್ಷರದಾಸೋಹ ಅಧಿಕಾರಿ ಮಂಜುನಾಥ್,
ಸುರೇಶ್ ರೆಡ್ಡಿ ಅವರ ಮಾವ ಪ್ರಕಾಶ್ ರೆಡ್ಡಿ, ಪತ್ನಿ ಅನುಪಮಾ,ತಂದೆ ನಾಗೇಂದ್ರ ರೆಡ್ಡಿ,ಬಿ.ಮಹೇಶ್ವರಪ್ಪ,ಪಿಎಸ್ ಅರವಿಂದನ್,ಪಿಎಲ್ ಡಿ ಬ್ಯಾಂಕ್,ಹಾಲಸ್ವಾಮಿ,ಷಂಷುದ್ದೀನ್,ವಿಶ್ವನಾಥ್ ರೆಡ್ಡಿ,ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಬಾಲರಾಜ್,ಕಲ್ಲಿನಾಥ್,ಟಿಆರ್ ಬಸವರಾಜ್,ಬಸವರಾಜ್,ಸತೀಶ್ ,ಸಿದ್ದಲಿಂಗಪ್ಪ,ಪರುಶರಾಮಪ್ಪ,ಬಾಲರಾಜ್,ವಿಶ್ವನಾಥ್,ಕರಿಬಸಪ್ಪ,ರಾಜಪ್ಪ,ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮೂರ್ತಿ,ಸಿಆರ್ ಪಿಗಳಾದ ಮಂಜುನಾಥ್, ಆಂಜನೇಯ,ಇಸಿಓ ಬಸವರಾಜ್,ಹನುಮಂತಪ್ಪ,ತಿರುಮಲೇಶ್,ಡಿಪಿಓ ಮಂಜುಳಾ ಸೇರಿದಂತೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!