ತಾಲ್ಲೂಕಿನ ಅಣಬೂರು ಗ್ರಾಮ ಪಂಚಾಯಿತಿ ಅದ್ಯಕ್ಷರಾಗಿ ಎಂ.ಎಂ. ನಾಗರಾಜ್ ಅವಿರೋಧ ಆಯ್ಕೆ
ಸುದ್ದಿ :ಜಗಳೂರು
ಜಗಳೂರು: ತಾಲ್ಲೂಕಿನ ಅಣಬೂರು ಗ್ರಾಮ ಪಂಚಾಯಿತಿ ಅದ್ಯಕ್ಷರಾಗಿ ಎಂ.ಎಂ.ನಾಗರಾಜ್ ರವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಡಿ.ಪಿ.ಓ ಇಲಾಖೆ ಬೀರೆಂದ್ರಕುಮಾರ್ ಘೋಷಣೆ ಮಾಡಿದರು.
ಶನಿವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮೀಸಲು ಕ್ಷೇತ್ರಕ್ಕೆ ಎಂ.ಎಂ.ನಾಗರಾಜ್ ರವರು ಸ್ವರ್ಧೆ ಮಾಡಿದ್ದು ಇವರ ವಿರುದ್ದ ಯಾವುದೇ ಪ್ರತಿಸ್ವರ್ದಿಯಾಗಿ ನಾಮಪತ್ರ ಸಲ್ಲಿಕೆಯಾಗದ ಕಾರಣ ಶ್ರೀಯುತ ನಾಗರಾಜ್ ರವರು ಸರ್ವ ಸದಸ್ಯರ ಸಹಕಾರ ಬಹುಮತದಿಂದ ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದ್ದಾರೆ. ಅದ್ಯಕ್ಷರ ಸ್ಥಾನವು ಈ ಹಿಂದೆ ಕಾರಣಂತರದಿಂದ ತೆರವಾಗಿತ್ತು ತೆರವಾದ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 14 ಜನ ಗ್ರಾಪಂ ಸದಸ್ಯರಿದ್ದು ಇವರ ಬೆಂಬಲ ಬಹುಮತದೊಂದಿಗೆ ಆಯ್ಕೆಯಾಗಿದ ನೂತನ ಅದ್ಯಕ್ಷರಿಗೆ ವಿವಿಧ ಗಣ್ಯರು ಹೂವಿನ ಹಾರ ಹಾಕಿ ಶುಭಾ ಕೋರಿದರು.
ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ನೂತನವಾಗಿ ಆಯ್ಕೆಯಾದ ಅದ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡ ಸೂರಲಿಂಗಪ್ಪ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಒಬಯ್ಯ . ಗ್ರಾಪಂ . ಸದಸ್ಯರಾದ ಶ್ರೀಮತಿ ಸಣ್ಣನಾಗಮ್ಮ. ಕಮಲ . ಶಿವಮ್ಮ. ಶಿವಲಿಂಗಮ್ಮ.ಎಂ.ವೀರೇಶ್. ಹೆಚ್ ಸಿದ್ದಪ್ಪ. ಬಿ.ಶಿವಣ್ಣ.ಜ್ಯೋತಿ.ಶ್ರೀಮತಿ ಮೀನಾಕ್ಷಿಬಾಯಿ.ಮಲ್ಲಿಕಾರ್ಜನ್.ಸುನಿತಾ. ಇಂದ್ರಮ್ಮ.ಅಕ್ಕಮ್ಮ . ಜ್ಯೋತಿಪುರ ಸಿದ್ದೇಶಿ. . . .ಹಾಜುರಿದ್ದರು

