filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;

ಕೀಳುಮಟ್ಟದ ರಾಜಕಾರಣ ಮಾಡಬೇಡಿ ನಾನು ಮಾಡುವ ಅಭಿವೃದ್ದಿ ಕಾಮಗಾರಿಗಳನ್ನ ಒಂದು ಬಾರಿ ಕಣ್ಣುತೆರೆದು ನೋಡಿ ಮಾತನಾಡುವಂತೆ ಶಾಸಕ ಬಿ.ದೇವೇಂದ್ರಪ್ಪ ಮಾಜಿ ಶಾಸಕರಿಗೆ ಸವಾಲೇಸೆದಿದ್ದಾರೆ.

ಸುದ್ದಿ :ಜಗಳೂರು.

ಪಟ್ಟಣದ ಭುವನೇಶ್ವರಿ ವೃತ್ತದ ಬಳಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜ‌ನೆ ಮಾಡಲಾಗಿತ್ತು ಜಿಲ್ಲಾ ನಗರ ಅಭಿವೃದ್ದಿ ಕೋಶ ಮತ್ತು 2024 _25 ಸಾಲಿನ ಎಸ್ ಎಪ್ ಸಿ ಯೋಜನೆಡಿಯಲ್ಲಿ ಸುಮಾರು 20 ಕೋಟಿ .ರೂಗಳಲ್ಲಿ ವಿವಿಧ ವಾರ್ಡಗಳಲ್ಲಿ ಸಿ ಸಿ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಶಂಕುಸ್ಥಾಪನೆ ಕಾರ್ಯಕ್ರಮ ಜರುಗಿತು.
ತಾಲ್ಲೂಕಿನ ಬಗ್ಗೆನಹಳ್ಳಿ ಬಳಿ 16 ಕೊಟಿ ರೂಗಳಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲಾ ಕಟ್ಟಡ ಕಾಮಗಾರಿ ಭೂಮಿ ಪೂಜೆ ಸೇರಿದಂತೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಎಸ್ ಎಪ್ ಸಿ ಯೋಜನೆಡಿಯಲ್ಲಿ ಅಶ್ವತ್ ರೆಡ್ಡಿ ನಗರದ ರಸ್ತೆ ಅಭಿವೃದ್ದಿ ಸುಮಾರು 30 ಲಕ್ಷ ರೂ ಉಜ್ಜಿನಿ‌ ಕೊಟ್ಟೂರು ರಸ್ತೆ ಸುಮಾರು 70 ಲಕ್ಷ ರೂಗಳ . ನಂತರ ಹಳೆ‌ ತಾಲ್ಲೂಕು ರಸ್ತೆ ಅಭಿವೃದ್ದಿ 60 ಲಕ್ಷ .ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಸಾಂಕೇತಿಕ ವಿವಿಧ ಕಾಮಗಾರಿಗಳ ಶಿಲಾನ್ಯಾಸ ನಾಮಫಲಕ ಅನಾವರಣಗೋಳಿಸಿ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕ್ಷೇತ್ರಕ್ಕೆ ಅನುದಾನಕ್ಕೆ ಕೊರತೆಯಿಲ್ಲ ಇತಿಹಾಸ ಕಂಡರಿಯದ ರೀತಿಯಲ್ಲಿ ಅಭಿವೃದ್ದಿ ಕಾಮಗಾರಿಗಳ ಶುಂಕುಸ್ಥಾಪನೆ ಒಂದು ಐತಿಹಾಸಿಕ ದಾಖಲೆಯಾಗಲಿದೆ. ಸ್ವಾತಂತ್ರ ಪೂರ್ವದಿಂದಲೂ ಡಾಂಬರು ಕಾಣದೇ ಶಿಥಿಲಗೊಂಡ ರಸ್ತೆಗಳ ಅಭಿವೃದ್ದಿಗೆ ಮುಂದಾಗಿದ್ದೆವೆ. ನಾನು ಮಾಡುವಂತ ಕಾಮಗಾರಿಗಳನ್ನು ಒಂದೊಮ್ಮೆ ನೋಡಿ ಮಾತನಾಡಬೇಕು .ಅಂದಿನ ರಾಜಕಾರಣಿ ಇಮಾಂ ಸಾಹೇಬರ ನಿರ್ಮಿಸಿದ ಉದ್ಗಾಟ ರಸ್ತೆ‌ ಮತ್ತು ಬಿಡ್ಜ್ ಅಭಿವೃದ್ದಿ . ತಾಲ್ಲೂಕಿನ ಸಿದ್ದಿಹಳ್ಳಿ ಜಿನಿಗಿ ಹಳ್ಳಕ್ಕೆ ಕಟ್ಟಲಾದ ಬಿಡ್ಜ್ ಕಂ ಬ್ಯಾರೆಜ್ ‌ಪಟ್ಟಣದ ಹೃದಯ ಬಾಗದಲ್ಲಿ‌ ಹೈಟೆಕ್ ಗ್ರಂಥಾಲಯ ನಿರ್ಮಾಣ ಸೇರಿದಂತೆ ಇಂತ ಹತ್ತು ಹಲವು ಕಾಮಗಾರಿಗಳ ಅಬಿವೃದ್ದಿ ಪಕ್ಷಿನೋಟಕ್ಕೆ ಸಾಕ್ಷಿಯಾಗಿದ್ದೆವೆ.

ಪಟ್ಟಣದ ಪ್ರಥಮ ಪ್ರಜೆ ಎನ್ನಿಸಿಕೊಂಡಿರುವ ಪಪಂ ಅದ್ಯಕ್ಷರು ಪತ್ತೆಯಿಲ್ಲ ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಸಲ್ಲದು ಪಕ್ಷಬೇದ ಮರೆತು ಅಭಿವೃದ್ದಿಗೆ ಸಹಕರಿಸಿ ಇನ್ನು ಹೆಚ್ವಿನ ಅನುದಾನ ತರಲು ನನಗೆ ಮನವಿ ಕೋಡಿ ಪಟ್ಟಣದ ಪ್ರತಿ ವಾರ್ಡಿನ ಸದಸ್ಯರು ತಮ್ಮ ಸಮಸ್ಯೆ ಅಹಾಲುಗಳ ನೀಡಿ ಸದಾ ಸ್ವಂದಿಸುತ್ತೆನೆ .ಈಗಾಗಲೇ
ಅತ್ಯಂತ ಹಿಂದೂಳಿದ ಸಮುದಾಯಗಳಿಗೆ ಪಪಂ ನಾಮನಿರ್ದೇಶನ ಸದಸ್ಯರನ್ನಾಗಿ ಆಯ್ಕೆ ಮಾಡಿದ ತೃಪ್ತಿ ನನಗಿದೆ.
ಅಭಿವೃದ್ದಿಗೆ ಪಕ್ಷಬೇದ ಮರೆತು ಅಭಿವೃದ್ದಿಗೆ ಸಂಕಲ್ಪ ನನ್ನದು ಎಂದು
ತಾಲ್ಲೂಕಿನಲ್ಲಿ ಕಳೆದ 30 ವರ್ಷಗಳಿಂದ ಮಾಡದೇ ಇರುವ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಮಾಡಿದ ಸಂತೃಪ್ತಿ ನನಗಿದೆ . 1926 ರಲ್ಲಿ
ಹಳೆ ಪಟ್ಟಣ ಪಂಚಾಯಿತಿ ಕಟ್ಟಡ ಸ್ಥಾಪನೆಯಾಗಿ ಮುಂದಿನ ವರ್ಷಕ್ಕೆ 100 ವರ್ಷ ತುಂಬಲಿದೆ ಅದರ ಸವಿ ನೆನಪಿಗಾಗಿ ಮಾಜಿ ಮುಖ್ಯ ಮಂತ್ರಿಗಳ ಸುಪುತ್ರರಾದ ಸಚಿವ ಮಧು ಬಂಗಾರಪ್ಪ .ಸಚಿವ ದಿನೇಶ್ ಗುಂಡುರಾವ್ ರವರನ್ನ ಕರೆ ತರುವ ಮೂಲಕ 100 ವರ್ಷದ ಸಂಭ್ರಮಾಚರಣೆ ಮಾಡಲಾಗುವುದು ಎಂದರು.
ಇದೀಗ ಶಂಕು ಸ್ಥಾಪನೆ ಮಾಡಿದ ಕಾಮಗಾರಿಗಳನ್ನ
ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ನಿರ್ಮಿಸಿ ಎಂದರು .

ಸ್ವಚತೆ ಕಾರ್ಯ ನನ್ನ ಇಷ್ಟ .
ರಾಷ್ಟ್ರದ ಪ್ರಧಾನಿ ನರೇಂದ್ರಮೋದಿ‌ಯವರು ಸ್ವಚತೆಗೆ ಮುಂದಾಗಿ ಪೌರ ಕಾರ್ಮಿಕರೊಂದಿಗೆ ಕಸ ಗೂಡಿಸಿದ್ದಾರೆ ನೀವು ಎಂದಾದರು ಕಸ ಗೂಡಿಸಿದ್ದಿರಾ? ನಾನು ಸಹ ಪೌರ ಕಾರ್ಮಿಕರೊಂದಿಗೆ ಕಸ ಗೂಡಿಸಿ ಅವರಿಗೆ ಆತ್ಮಸ್ಥೈರ್ಯ ತುಂಬಿರುವೆ ನಾನು ಯಾವಾಗ ಬೇಕಾದರು ಸಹ ವಿನೂತನವಾಗಿ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಕಸಗೂಡಿಸುತ್ತೆನೆ ಜೊತೆಗೆ ಬಾತ್ ರೂಂ ಕ್ಲೀನ್ ಮಾಡುವೆ ಟೈಂ ಬಂದರೆ ನಿಮ್ಮನೆ‌ ಕಸ ಹೊಡೆಯುವೆ ಶಾಸಕರು ಪ್ರತಿ ತಿಂಗಳು‌ ಸ್ವಚತೆಗೆ ಕಸ ಹೊಡೆಯುವುದನ್ನೆ ನಿಲ್ಲಿಸಿದ್ದಾರೆ ಎಂದು ಹೇಳಿರುವ ನಿಮ್ಮ ಸಾಧನೆ ಏನು? ಎಂದು ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರಿಗೆ ಹಾಲಿ ಶಾಸಕ ಬಿ ದೇವೇಂದ್ರಪ್ಪ ವಾಗ್ದಾಳಿ ನಡೆಸಿದ್ದಾರೆ.
ಪಪಂ ಸದಸ್ಯ ರಮೇಶ್ ರೆಡ್ಡಿ ಮಾತನಾಡಿ ಶಾಸಕರು ಪಟ್ಟಣದ ಪ್ರತಿ ವಾರ್ಡಿಗೂ ಆದ್ಯತೆ ನೀಡಿ ಪಟ್ಟಣದ ಅಭಿವೃದ್ದಿ ಪಣತೋಟ್ಟಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪಪಂ ಉಪಾದ್ಯಕ್ಷರ ಪತಿ ಒಬಳೇಶ್ ಮಾತನಾಡಿ ಗ್ರಾಮ ದೇವತೆ ಮಾರಿಕಾಂಬ ದೇವಾಸ್ಥಾನದ ರಸ್ತೆ ಅಬಿವೃದ್ದಿಗೆ ಅನುದಾನ ಕಲ್ಪಿಸುವಂತೆ ಮನವಿ ಮಾಡಿಕೊಂಡರು

ಈ ಸಂದರ್ಭದಲ್ಲಿ ಕಾಂಗ್ರೇಸ್ ಬ್ಲಾಕ್ ಅದ್ಯಕ್ಷರಾದ ಷಂಷೀರ್ ಆಹಮದ್.ಕಾಂಗ್ರೇಸ್ ಎಸ್ಟಿ ಘಟಕದ ರಾಜ್ಯ ಪ್ರದಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್. ಪಪಂ‌ ಸದಸ್ಯರಾದ ಮಂಜುನಾಥ. ಮಹಮದ್ ಆಲಿ. ಪಾಪಲಿಂಗಪ್ಪ.ಲಲಿತಮ್ಮ ಶಿವಣ್ಣ.ಆದರ್ಶರೆಡ್ಡಿ. ಪಪಂ ನಾಮನಿರ್ದೇಶನ ಸದಸ್ಯರಾದ ಕುರಿ ಜಯಣ್ಣ.ಶಾಂತಣ್ಣ.ಸಣ್ಣ ತಾನಾಜಿ ಗೋಸಾಯಿ. ರಮೇಶ್. ಹೌಸಿಂಗ್ ಬೋರ್ಡ್ ಎಇಇ.ಪ್ರಿಯ. ಪಂಚಾಯತ್ ರಾಜ್ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಶಿವಮೂರ್ತಿ. ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್. ಮುಖಂಡರಾದ ಸಣ್ಣಸೂರಜ್ಜ.ನಿವೃತ್ತ‌ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ ಮಹೇಶ್. ಗುತ್ತಿಗೆದಾರ ವಿಜಯ್ ಮುಖಂಡ ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!