ಸರ್ವಶ್ರೇಷ್ಠ ಶ್ರೀಕೃಷ್ಣ ಜಯಂತಿ ಜಾತ್ಯಾತೀತವಾಗಿ ಮತ್ತು ಪಕ್ಷಬೇದ ಮರೆತು ಆಚರಿಸೋಣ ಎಂದು :ಯಾದವಾನಂದ ಶ್ರೀ ಅಭಿಪ್ರಾಯಪಟ್ಟರು

ಜಗಳೂರು ಸುದ್ದಿ,
ಜಗಳೂರು,ಆ.23: ಶ್ರೀಕೃಷ್ಣ ಅವತಾರ ಪುರಷರಂತಹ ಮಹಾನೀಯರ ಜಯಂತಿಗಳು ಪಕ್ಷಬೇದ ಮರೆತು ಜಾತ್ಯತೀತವಾಗಿ ಆಚರಿಸಿ ಶ್ರೀ ಕೃಷ್ಣನ ಸಂದೇಶವನ್ನ ಪಾಲಿಸುವಂತೆ ಚಿತ್ರದುರ್ಗ ಯಾದವ ಮಹಾಸಂಸ್ಥಾನದ ಜಗದ್ಗರು ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮಿಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಶನಿವಾರ ಪಟ್ಟಣದ ಮರೇನಹಳ್ಳಿ ರಸ್ತೆಯಲ್ಲಿ ನೂತನ ಯಾದವ ಸಮಾಜದ ನಿವೇಶನದಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ದಿವ್ಯಸಾನಿಧ್ಯ ವಹಿಸಿ ಆಶೀರ್ವಾಚನ ನೀಡಿದರು.

ನಮ್ಮ ಸಮುದಾಯವನ್ನು ಎಸ್ ಟಿ ಮೀಸಲಾತಿ ಸೇರ್ಪಡೆ ಮಾಡಲು ನಿರಂತರ ಹೊರಾಟ ಮಾಡಲು ಭಾನುವಾರ ಪೂರ್ವಭಾವಿ ಸಭೆಯನ್ನು ಆ.24 ರಂದು ಚಿತ್ರದುರ್ಗದ ಮಠದಲ್ಲಿ ಕರೆಯಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಮುಖಂಡರುಗಳು ಭಾಗವಹಿಸಿ ಸಲಹೆ ಸಹಕಾರ ನೀಡಬೇಕೆಂದರು.ಮುಂಬರುವ ವರ್ಷಕ್ಕೆ ತಾಲೂಕಿನಲ್ಲಿ ಸರ್ವರ ಸಹಕಾರದಿಂದ ಸಮುದಾಯಭವನ ಪೂರ್ಣಗೊಂಡು ಮುಂದಿನ ವರ್ಷದ ಕೃಷ್ಣ ಜಯಂತಿ ಅದ್ದೂರಿಯಾಗಿ ಹರ್ಷದಿಂದ ಆಚರಿಸೋಣ ಎಂದು ಕರೆ ನೀಡಿದರು.

ಯಾದವ ಸಮಾಜದ ರಾಜ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಮಾತನಾಡಿದರು ,ಪಟ್ಟಣದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಮೊದಲ ಕಂತಿನಲ್ಲಿ ರೂ.5 ಲಕ್ಷ ಅನುದಾನ ಕಲ್ಪಿಸುವೆ..ಸಮಾಜದವರು ಸಮಿತಿ ರಚಿಸಿಕೊಂಡು ಅನುದಾನವನ್ನು ಪಾರದರ್ಶಕವಾಗಿ ಸದ್ಬಳಕೆ ಮಾಡುಕೊಳ್ಳಿ ಜಾತ್ರೆ,ಹಬ್ಬಗಳಲ್ಲಿ ದುಂದುವೆಚ್ಚಕ್ಕೆ ಕಡಿವಾಣಹಾಕಿ ಸಮುದಾಯಕ್ಕೆ ವಂತಿಗೆ ಸಂಗ್ರಹಿಸಿ ಮುಂದಿನ ವರ್ಷದ ಕೃಷ್ಣ ಜಯಂತಿಗೆ ಭವನ ಕಟ್ಟಡ ನಿರ್ಮಾಣ ಮಾಡಲು ಸಹಾಯಸ್ತ ಚಾಚುವಂತೆ ಕಿವಿ ಮಾತು ಹೇಳಿದರು.ನಮ್ಮ ಸಮುದಾಯವನ್ನ
ಎಸ್ ಟಿ ಜಾತಿ ಮೀಸಲು ಕ್ಷೇತ್ರಕ್ಕೆ ಸೇರ್ಪಡೆ ಮಾಡುವವರೆಗೂ ಹೋರಾಟ ನಿರಂತರವಾಗಿ ನಡೆಯಲಿದೆ : ಈ ಹಿಂದೆ ಕಾಡುಗೊಲ್ಲ ಸಮುದಾಯವನ್ನು ಎಸ್ ಟಿ ಮೀಸಲಾತಿ ಸೇರ್ಪಡೆ ಹೊರಾಟವನ್ನು ಮಾಜಿ ಪ್ರಧಾನಿ ದೇವೇಗೌಡರ ಭರವಸೆಯಂತೆ ಹೋರಾಟ ಸ್ಥಗಿತಗೊಂಡಿತ್ತು ಆದರೆ ಯಾದವರ ಮತಬ್ಯಾಂಕ್ ಪಡೆದು ಮರೆತಿರುವ ಸಂಸದರುಗಳು ಒಂದೂವರೆ ವರ್ಷಕಳೆದರೂ ಬೇಡಿಕೆ ಈಡೇರಿಲ್ಲ.ಕೇಂದ್ರಕ್ಕೆ ಕಳಿಸಿದ್ದ ರಾಜ್ಯ ಸರ್ಕಾರದ ಮೀಸಲಾತಿ ಶಿಫಾರಸ್ಸು ಮರಳಿ ಬಂದಿದೆ ಕೇಂದ್ರ ಸರಕಾರದ ವಿರುದ್ದ ಯಾದವ ಸಮಾಜದ ಸಂಘಟಿತ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದರು.

ಸರ್ಕಾರದಿಂದ ಅಲೆಮಾರಿ ಅಭಿವೃದ್ದಿ ನಿಗಮದಲ್ಲಿ ರೂ.64 ಕೋಟಿ ಮೀಸಲಿದ್ದು ನೆನೆಗುದಿಗೆ ಬಿದ್ದಿರುವ ಮನೆಗಳನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಸದುಪಯೋಗಪಡೆದುಕೊಳ್ಳಬೇಕು ಎಂದರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,ಭವ್ಯ ಸಮುದಾಯ ಭವನ ನಿರ್ಮಾಣಕ್ಕೆ ನಾನು ಸಹ ಕೈಜೋಡಿಸುವೆ ಮುಂದಿನ ವರ್ಷ ಸುಂದರ ಸಮುದಾಯ ಭವನದಲ್ಲಿ ಆಚರಿಸಲು ಸಮುದಾಯ ಭವನ ಕಟ್ಟಡ ಶತ ಸಿದ್ದ ಎಂದು ಭರವಸೆ ನೀಡಿದರು. ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಅವರ ಸಹಕಾರದಿಂದ ನನ್ನ ಸ್ವಗ್ರಾಮ ಚಿಕ್ಕಮ್ಮನಹಟ್ಟಿಯಲ್ಲಿ ರೂ.1ಕೋಟಿ ಅನುದಾನದಡಿ ಅಭಿವೃದ್ದಿಗೆ ಒತ್ತು ನೀಡಿ ಇದೀಗ ಸುಂದರ ವಿನ್ಯಾಸದಲ್ಲಿ ದೇವಸ್ಥಾನ ನಿರ್ಮಾಣಗೊಂಡಿದೆ.ನಾನೂ ಪ್ರತಿಯಾಗಿ ಅವರ ಋಣ ತೀರಿಸಲು ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರ ಸ್ವಗ್ರಾಮವಾದ ಬಿದರಕೆರೆ ರೂ.2 ಕೋಟಿ ಅನುದಾನ ಒದಗಿಸಿ ಅಭಿವೃದ್ದಿಗೆ ಒತ್ತು ನೀಡುವೆ ತಾವುಗಳು ಒಂದು ಕ್ರಿಯಯೋಜನೆ ಕೋಡಿ ಎಂದರು . ನಮ್ಮ ಕಾಂಗ್ರೇಸ್ ಸಿದ್ದರಾಮಯ್ಯನವರ ಸರ್ಕಾರ ನೂತನವಾಗಿ ಕುರಿಗಾಯಿ ರಕ್ಷಣೆ ಕಾಯ್ದೆ ಜಾರಿಗೆ ತಂದಿದ್ದು ಅವಶ್ಯವಾಗಿ ಬಳಸಿಕೊಳ್ಳುವಂತೆ ತಿಳುಸಿದರು .ಯಾದವ ಸಮಾಜ ಕಷ್ಟದಲ್ಲಿ ನೆರವಾದವರು,ಅಧರ್ಮ ರಕ್ಷಣೆಗೆ ಕೃಷ್ಣ ಸದಾ ಬೆನ್ನೆಲುಬಾಗಿರುವ ಸಂದೇಶ ಅರಿತುಕೊಳ್ಳಬೇಕು.ತೋರಣಗಟ್ಟೆ ಮೆಲ್ಲಜ್ಜ ದೇವಸ್ಥಾನ ಅಭಿವೃದ್ದಿಗೆ ರೂ.25 ಲಕ್ಷ ಅನುದಾನ ಒದಗಿಸಲಾಗಿದೆ.ಅಂತ ಅಂತವಾಗಿ ಗೊಲ್ಲರಹಟ್ಟಿಗಳ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಮಾತನಾಡಿ,ವಾಲ್ಮೀಕಿ ಮತ್ತು ಯಾದವ ಬುಡಕಟ್ಟು ಸಂಸ್ಕೃತಿ ಒಂದೆಯಾಗಿದ್ದು ಗುಂಪುಗುಂಪಾಗಿ ಜೀವನಸಾಗಿಸುತ್ತಿದ್ದು.ಆಚರಣೆ,ಸಂಪ್ರದಾಯಗಳಿಗೆ ಒಂದೇ ಸಾಮ್ಯತೆ ಹೊಂದಿವೆ.ಯಾದವ ಸಮಾಜ ಪೂಜ್ಯರ ಮತ್ತು ಹಿರಿಯರ ಮಾರ್ಗದರ್ಶನಡಿ ಸಂಘಟಿತರಾಗಿ ಮುಖ್ಯವಾಹಿನಿಗೆ ಬರಬೇಕು.ನನ್ನ ಆಡಳಿತಾವಧಿಯಲ್ಲಿ ನಿಗಮದಡಿ 2500 ಮನೆ ಕಲ್ಪಿಸಿರುವೆ‌.ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಸುಸಜ್ಜಿತ ರಸ್ತೆ,ದೇವಸ್ಥಾನ ನಿರ್ಮಾಣಕ್ಕೆ ರೂ.1ಕೋಟಿ ಅನುದಾನ ಒದಗಿಸಲಾಗಿತ್ತು ಎಂದರು.


‘ರಾಜ್ಯದಲ್ಲಿ ಕುರುಬ,ವಾಲ್ಮೀಕಿ,ಯಾದವ ಸಮುದಾಯಗಳ ಸಂಸ್ಕೃತಿ ವಿಭಿನ್ನವಾಗಿದ್ದು.ಸಂಸ್ಕೃತಿಯ ಅಸ್ಮಿತೆ ಉಳಿವಿನ ಅಗತ್ಯವಿದೆ.ಪ್ರಸಕ್ತವಾಗಿ ಹಿಂದುಳಿದ ವರ್ಗಗಳ ರಾಜಕೀಯ ಅಸ್ತಿತ್ವಕ್ಕೆ ಪರದಾಡುವಂತಾಗಿದೆ.ಒಗ್ಗಟ್ಟಾದರೆ ಮಾತ್ರ ಅಧಿಕಾರ ನಿಶ್ಚಿತ,ತಮ್ಮ ಮಕ್ಕಳಿಗೆ ಐಎಎಸ್,ಕೆಎಸ್ ಪರೀಕ್ಷೆಗಳಿಗೆ ಉಚಿತ ಕೋಚಿಂಗ್ ನೀಡಲು ಇನ್ ಸೈಟ್ ಸಂಸ್ಥೆ ಸದಾ ತೆರದಿರುತ್ತದೆ‌ ಸದುಪಯೋಗಪಡೆದುಕೊಳ್ಳುವಂತೆ ತಿಳಿಸಿದರು.’.
—– ಜಿ.ಬಿ.ವಿನಯ್ ಕುಮಾರ್,
ಐಎಸ್ ಇನ್ ಸೈಟ್ ಸಂಸ್ಥೆ ಸಂಸ್ಥಾಪಕ.

ಪಿಡಿಓ ವಾಸುದೇವ ಪ್ರಾಸ್ತಾವಿಕವಾಗಿ ಮಾತನಾಡಿ,ಸಮುದಾಯದ ಕುಂದುಕೊರತೆಗಳನ್ನು ಸಭೆಯ ಮುಂದಿಟ್ಟರು.

ಕಾರ್ಯಕ್ರಮಕ್ಕೂ ಮುನ್ನ ಶ್ರೀಕೃಷ್ಣ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉರಿಮೆ,ಕೋಲಾಟ,ವಾದ್ಯವೃಂದಗಳೊಂದಿಗೆ ಅದ್ದೂರಿ ಮೆರವಣಿಗೆ ಸಾಗಿತು.ಶಾಸಕ ಬಿ.ದೇವೇಂದ್ರಪ್ಪ ಅವರು ಸೇಬು ಹಣ್ಣಿನ ಬೃಹತ್ ಹೂವಿನಹಾರ ಮಾಲಾರ್ಪಣೆ ಸ್ವೀಕರಿಸಿ ಉರಿಮೆ ವಾಧ್ಯಕ್ಕೆ ಹೆಜ್ಜೆಹಾಕಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರಪ್ಪ, ಜಿ.ಪಂ ಮಾಜಿ ಸದಸ್ಯ ಕೆ.ಪಿ ಪಾಲಯ್ಯ,ಯಾದವ ಸಮಾಜದ ತಾಲೂಕು ಅಧ್ಯಕ್ಷ ಜಿ.ಸಿ.ಕೃಷ್ಣಮೂರ್ತಿ,ಟಿ.ಪ್ರವೀಣ್ ಕುಮಾರ್,ಪಲ್ಲಾಗಟ್ಟೆ ಶೇಖರಪ್ಪ,ಬಿ.ಮಹೇಶ್ವರಪ್ಪ,ಸಣ್ಣ ಸೂರಜ್ಜ,ಬಂಗಾರಪ್ಪ,ಬಕ್ಕೇಶ್,ಅರ್ಜುನಪ್ಪ,ಯಾದವ ಸಮಾಜದ ಮುಖಂಡರಾದ ಇಂದ್ರೇಶ್.ಬಾಲರಾಜ್.ಮಹಾಲಿಂಗಪ್ಪ ಎಚ್.ಹೊಳೆ ಶಶಿಧರ,ತಿಪ್ಪೇಸ್ವಾಮಿಗೌಡ್ರು, ಕೃಷ್ಣಪ್ಪ,ನಿವೃತ್ತ ಉಪಾ ತಹಶೀಲ್ದಾರ್ ನಾಗೇಂದ್ರಪ್ಪ,ಹನುಮಂತಾಪುರ ಚಿತ್ತಪ್ಪ,ನಾಗರಾಜ್,ತಿಪ್ಪೇಸ್ವಾಮಿ,ಬಾಲರಾಜ್ ,ತೋರಣಗಟ್ಟೆ ಬಡಪ್ಪ. ಲ್ಯಾಬ್ ಶಿವು.,ಸತ್ಯಪ್ಪ,ವೀರೇಶ್,ಕಾಟಪ್ಪ,,,ಶ್ರೀಕಾಂತ್,ರಮೇಶ್ ಸರ್ಕಾರ್.ವೀರೇಶ್,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!