ಚಿರತೆ ದಾಳಿಗೆ ತುತ್ತಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಆರೋಗ್ಯ ವಿಚಾರಿಸಿ ಚಿಕಿತ್ಸೆಗೆ 10 ಸಾವಿರ ಹಣ ನೀಡಿ ದೈರ್ಯ ತುಂಬಿದ ಶಾಸಕ ಬಿ.ದೇವೇಂದ್ರಪ್ಪ.

ಜಗಳೂರು :-ಸುದ್ದಿ
ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಮರೇನಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಎಂದಿನಂತೆ ವ್ಯಕ್ತಿ ಜಮೀನಿನಲ್ಲಿ ಕಳೆ ಕಿಳುವಾಗ ಎಕಾ ಏಕಿ ಬಂದ ಚಿರತೆ ದಾಳಿ ನಡೆಸಿದ ಹಿನ್ನಲೆಯಲ್ಲಿ ವ್ಯಕ್ತಿ ಗಾಬರಿಗೊಂಡು ಚಿರಾಡಿ ಅಲ್ಲಿಯೆ ಇದ್ದ ವ್ಯಕ್ತಿಯ ಪತ್ನಿ ಕಲ್ಲು ತೆಗೆದುಕೊಂಡು ಹೊಡೆದಿದ್ದಾರೆ ಅವರ ಚಿರಾಟಕ್ಕೆ ಚಿರತೆ ಬಿಟ್ಟು ಓಡಿಹೋಗಿದೆ ಈ ಹಿನ್ನಲೆಯಲ್ಲಿ ವ್ಯಕ್ತಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ.

ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ಶಾಸಕರು ಭೇಟಿ ನೀಡಿ ದಾಳಿಗೆ ತುತ್ತಾದ ಗಾಯಳು ಹೊನ್ನುರಪ್ಪನಿಗೆ ದೈರ್ಯ ತುಂಬಿ ಹೆಚ್ಚಿನ ಚಿಕಿತ್ಸೆ ಪಡೆಯಲು 10 ಸಾವಿರ ಹಣ ನೀಡಿ ಸೂಕ್ತ ಚಿಕಿತ್ಸೆ ಸೇರಿದಂತೆ ಅರಣ್ಯ ಇಲಾಖೆಯಿಂದ ಬರುವಂತ ಪರಿಹಾರ ಸೌಲಭ್ಯ ಕೋಡಿಸಲಾಗುವುದು ಎಂದು ಭರವಸೆ ನೀಡಿದರು.

ಮರೇನಹಳ್ಳಿ ಗ್ರಾಮದ ರೈತ ಹೊನ್ನೂರಪ್ಪ ಎಂಬಾತನ ಮೇಲೆ‌ ಚಿರತೆ ದಾಳಿ ನಡೆಸಿದೆ. ಈತ ಎಂದಿನಂತೆ ಬೆಳಿಗ್ಗೆ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಚಿರತೆ ಹಿಂಬದಿಯಿಂದ ಬಂದು ಎಕಾ ಏಕಿ ದಾಳಿ ನಡೆಸಿದ್ದು ಗಾಯಗೊಂಡಿದ್ದಾರೆ ಗಾಯಳು ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶಾಸಕ ಬಿ ದೇವೇಂದ್ರಪ್ಪರವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನಿತರೆ ಬಡವರ್ಗದವರಿಗೆ ಆರ್ಥಿಕ ಸಹಾಯ ನೀಡಿ ಜಗಳೂರು ಪ್ರದೇಶದಲ್ಲಿ ಹೆಚ್ಚಾಗಿ ಬಡ ವರ್ಗದ ಜನರು ಆಸ್ಪತ್ರೆಗೆ ಬರುತ್ತಿದ್ದು ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರುಗಳಿಗೆ ತಿಳಿಸಿದರು. ಸಂದರ್ಭದಲ್ಲಿ ‌ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಗಾಯಳುವಿನಿಂದ ಮಾಹಿತಿ ಪಡೆದು ಚಿರತೆಗೆ ಶೋಧನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು


ಚಿರತೆ ಒಡಾಡಿರುವ ಹೆಜ್ಜೆ ಗುರತುಗಳನ್ನ ಪತ್ತೆ ಹಚ್ಚಿ ಶೋಧಕಾರ್ಯ ನಡೆಸಲಾಗುತ್ತಿದ್ದು ಈಗಾಗಲೆ ಘಟನಾ ಸ್ಥಳದ ಅಕ್ಕಪಕ್ಕದಲ್ಲಿ ಚಿರತೆ ಬೋನ್ ಆಳವಡಿಸಲಾಗಿದ್ದು ಬೋನಿನ ಮೂಲಕ ಸೆರೆ ಹಿಡಿಯಲಾಗುವುದು.
ನಿತಿನ್ ಬಲ್ಲಾವರ
ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ


ಇನ್ನು ಗ್ರಾಮದಲ್ಲಿ 3 ಚಿರತೆ ಕಂಡು ಬಂದಿದ್ದು ರೈತರು ಮತ್ತು ಗ್ರಾಮದಲ್ಲಿ ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಗ್ರಾಮಸ್ಥರು

ಈ ಸಂದರ್ಭದಲ್ಲಿ ವೈದ್ಯರುಗಳಾದ ಶಶಿಕಲಾ ಮಾಜಿ ತಾಪಂ ಅದ್ಯಕ್ಷ ಸಣ್ಣ ಸೂರಜ್ಜ. ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಮಹೇಶ್. ಕಾಂಗ್ರೇಸ್ ಮುಖಂಡ ಕೆಚ್ಚೆನಹಳ್ಳಿ ಹನುಮಂತಪ್ಪ ಸೇರಿದಂತೆ ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!