ಜಗಳೂರು ತಾಲೂಕು ಉಪ್ಪಾರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಜಗಳೂರು ತಾಲೂಕು ಉಪ್ಪಾರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು
ಪಟ್ಪಣದ ಪ್ರವಾಸಿ ಮಂದಿರದಲ್ಲಿ ದಿನಾಂಕ 24.08.2025 ರಂದು ಆಯ್ಕೆ ಮಾಡಲಾಯಿತು.
ಸಂಘದ ಅಧ್ಯಕ್ಷರಾಗಿ ಜಮಾಪುರದ ಬಿ. ಆರ್ .ರಂಗಪ್ಪ ಪ್ರಧಾನ ಕಾರ್ಯದರ್ಶಿಯಾಗಿ ದೇವಿಕೆರೆ ಯು. ಎಂ. ಗುರುಸ್ವಾಮಿ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಕ್ಯಾಸೇನಹಳ್ಳಿ ಬಸವಣ್ಯಪ್ಪ, ಉಪಾಧ್ಯಕ್ಷರಾಗಿ ಗಿಡ್ಡನಕಟ್ಟೆ ಸಿ. ತಿಪ್ಪೇಸ್ವಾಮಿ, ಚಂದನ ನಗರದ ಆರ್ .ಪುಟ್ಟಪ್ಪ ಅಸಗೋಡು ನರಸಿಂಹಪ್ಪ ಸಂಘಟನಾ ಕಾರ್ಯದರ್ಶಿಗಳಾಗಿ ಜಗಳೂರಿನ ಎ. ಬಂಗಾರಪ್ಪ ಹೊಸಹಟ್ಟಿ ಬಿ. ಚೌಡಪ್ಪ ಉದ್ದಗಟ್ಟದ ಮಂಜುನಾಥ್ ಹಿರೇಅರಕೆರೆ ನಾಗರಾಜ್ ಖಜಾಂಚಿಯಾಗಿ ರಸ್ತೆ ಮಾಕುಂಟೆ ಮಹಾಂತೇಶ್ ಆಯ್ಕೆಯಾಗಿದ್ದಾರೆ. ಸಂಘದ ನಿರ್ದೇಶಕರುಗಳಾಗಿ ಜ್ಯೋತಿಪುರದ ಟಿ. ರವಿ, ಚಿಕ್ಕ ಅರಕೆರೆ ಆರ್. ಮಂಜಪ್ಪ, ಸಾಗಲಗಟ್ಟೆ ಟಿ. ರಂಗಪ್ಪ ,ಹಳವದಂಡಿ ಟಿ. ಮಂಜುನಾಥ್, ದೊಣ್ಣೆಹಳ್ಳಿ ವೆಂಕಟೇಶ್, ಭರಮಸಮುದ್ರ ಎಂ .ಎನ್. ಶಾಮಣ್ಣ ,ಮೂಡಲ ಮಾಚಿಕೆರೆ ಎಚ್. ವೆಂಕಟೇಶ್ ರಸ್ತೆ ಮಾಚಿಕೆರೆ ಬಸವರಾಜಪ್ಪ, ಆಯ್ಕೆಯಾಗಿದ್ದಾರೆ.
ಕಾನೂನು ಸಲಹೆಗಾರರಾಗಿ ವಕೀಲರಾದ ಶಿವಪ್ರಕಾಶ್ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಆಯ್ಕೆ ಸಭೆಯ ನೇತೃತ್ವವನ್ನು ದಾವಣಗೆರೆ ಜಿಲ್ಲಾ ಉಪ್ಪಾರ್ ಸಂಘದ ಉಪಾಧ್ಯಕ್ಷರಾದ ಎಂ. ಕಾಂತರಾಜ್ ಜಗಳೂರು ತಾಲೂಕು ಉಪ್ಪಾರ್ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ನಾಗೇಂದ್ರಪ್ಪ, ಜಮ್ಮಾಪುರ ವೆಂಕಟೇಶ್, ವಕೀಲರಾದ ದೇವಿಕೆರೆ ಶಿವಪ್ರಕಾಶ್, ಗಿಡ್ಡನಕಟ್ಟೆ ಫೈನಾನ್ಸ್ ಮಂಜುನಾಥ್, ಅಸಗೋಡು ರಂಗಪ್ಪ, ಉದ್ದಗಟ್ಟದ ಹನುಮಂತಪ್ಪ ವಹಿಸಿದ್ದರು. ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಎಸ್ ಬಂಗಾರಪ್ಪ ,ಕೆ. ಗುರುಸಿದ್ದಪ್ಪ ಸೇರಿದಂತೆ ಜಗಳೂರು ತಾಲೂಕಿನ ಉಪ್ಪಾರ್ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.
