ಬಿ.ಸಿ.ಎಂ ಇಲಾಖೆ ನಿವೃತ್ತ ಅಡುಗೆ ಸಹಾಯಕಿ ಭರಮ ಸಮುದ್ರ ಸುಮಾಕ್ಕ ಇಹ್ಯಲೋಕ ತ್ಯಜಿಸಿರುತ್ತಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಕಳೆದ ದಿನಗಳಿಂದ ಸುಮಾರವರು ಅನಾರೋಗ್ಯ ನಿಮಿತ್ತ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ‌ ಪಡೆಯುತ್ತಿದ್ದರು ಅಲ್ಲಿಯು ಸಹ ಗುಣಮುಖರಾಗದೆ ಚಿಕಿತ್ಸೆ‌ಫಲಕಾರಿಯಾಗದೆ ಸಾವನ್ನಪ್ಪಿರುತ್ತಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ಇವರು ತಾಲ್ಲೂಕು ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ನಲ್ಲಿ ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿಯಾಗಿದ್ದರು .

ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಇಹ್ಯಲೋಕ ತ್ಯಜಿರುತ್ತಾರೆ ಎಂದು ತಿಳಿದು ಬಂದಿದ್ದು ಅವರ ಅಂತ್ಯ ಸಂಸ್ಕಾರ ಅವರ ತೋಟದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ ಮೃತರ ಸಾವಿನ ಸುದ್ದಿ ಕೇಳಿ ಅನೇಕ‌ ಸಂಘಟನೆ ಮುಖಂಡರುಗಳು ಸಂತಾಪ ಸೂಚಿದ್ದಾರೆ

ಶ್ರೀಯುತರ ಅಂತಿಮ ಸಂಸ್ಕಾರವನ್ನ ಅವರ ಸ್ವಗ್ರಾಮವಾದ ಭರಮಸಮುದ್ರ ಗ್ರಾಮದ ತೋಟದಲ್ಲಿ ಅಂತ್ಯ ಸಂಸ್ಕಾರ ನೇರವೇರಲಿದೆ ಎಂದು ತಿಳಿದು ಬಂದಿದೆ .ಬಿ.ಸಿ ಎಂ. ಇಲಾಖೆ ನಿವೃತ್ತ ಅಧಿಕಾರಿ ವೆಂಕಟೇಶ್ ಮೂರ್ತಿ.ಸೇರಿದಂತೆ ಆಶಾ ಕಾರ್ಯಕರ್ತೆಯರ ಹೋರಾಟದ ಸಂಚಾಲಕಿ ಇಂದ್ರಮ್ಮ ಸೇರಿದಂತೆ ಅನೇಕ ಸಂಘಟನೆ ಪದಾಧಿಕಾರಿಗಳು ಸಂತಾಪ ಸೂಚಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!