ಸುದ್ದಿ ಶಿವಮೊಗ್ಗ ಜಿಲ್ಲಾ ಶುಕ್ರದೆಸೆ ನ್ಯೂಸ್

ಶಿವಮೊಗ್ಗದ ಶಿಕ್ಷಕಿ ಸಾಹಿತಿ ಶಿಲ್ಪಾವತಿಗೆ ಡಾಕ್ಟರೇಟ್ ..

ಇಂಟರ್ ನ್ಯಾಷನಲ್ ರಿಸರ್ಚ್ ಆಕಾಡೆಮಿ ವತಿಯಿಂದ ಡಾಕ್ಟರೇಟ್ ನೀಡಿ ಸನ್ಮಾನಿಸಿ ಗೌರವ ಸಮರ್ಪಣೆ

ಏಷಿಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿರ್ವಸಿಟಿ ವತಿಯಿಂದ , ಸಾಹಿತ್ಯ ಕ್ಷೇತ್ರದಿoದ . ಶಿಕ್ಷಕರು – ಸಾಹಿತಿಗಳು ಮತ್ತು ಲೇಖಕರು ಎಂದು ಆಯ್ಕೆ ಮಾಡಿ ಗೌರವ ಡಾಕ್ಟರೇಟ್ ಅವಾರ್ಡ್ ನೀಡಿ ಗೌರವಿಸಲಾಗಿದೆ .

ಇತ್ತಿಚಿಗೆ ಬೆಂಗಳೂರು ನಗರದಲ್ಲಿ ಇಂಟರ್ ನ್ಯಾಷನಲ್ ರಿಸರ್ಚ್ ಆಕಾಡೆಮಿ ವತಿಯಿಂದ ವಿವಿಧ ರಾಜ್ಯದ ಸಾಧಕರಿಗೆ ಅವರ ವ್ಯಕ್ತಿತ್ವ ಮತ್ತು ಅವರ ಕಾರ್ಯವೈಕರಿಗಳನ್ನು ಗುರುತಿಸಿ ರಿಸರ್ಚ್ ನಡೆಸಿದ ನ್ಯಾಷನ್ ಲ್ ಆಕಾಡೆಮಿ ಶ್ರೀಯುತ ಡಾ.ಶಿಲ್ಪಾವತಿ ಅವರಿಗೆ ಮೊನ್ನೆ ಬೆಂಗಳೂರು ನಗರದಲ್ಲಿ ಡಾಕ್ಟರೇಟ್ ನೀಡಿ ಗೌರವಿಸಿದೆ

ಶ್ರೀಯುತ ಡಾ ಶಿಲ್ಪಾವತಿಗೆ ಇಂಟರ್ ನ್ಯಾಷನಲ್ ಹ್ಯೂಮನ್ ಡೆವಲಪ್ಮೆಂಟ್ ಕೌನ್ಸಿಲ್ ವತಿಯಿಂದ ಮುಂಬೈನಲ್ಲಿ ರಾಷ್ಟ್ರೀಯ ರತ್ನ ಅವಾರ್ಡನ್ನು ಸಹ ತನ್ನ ಮುಡಿಗೇರಿಸಿಕೊಂಡಿದ್ದಾರೆ. ಹಾಗೂ ಇತ್ತಿಚಿಗೆ ಮೈಸೂರಿನ ಕರ್ನಾಟಕ ಯುವರಕ್ಷಣಾ ವೇದಿಕೆ ವತಿಯಿಂದ , ಕರ್ನಾಟಕ ಸೇವಾ ರತ್ನ ಬೆಳ್ಳಿ ಪದಕವನ್ನು ನೀಡಿ ಗೌರವಿಸಲಾಗಿದೆ. ಒಟ್ಟಾರೆ ಇವರ ಅಮೋಘವಾದ ಸೇವೆಗೆ ಸಾಲು ಸಾಲು ಅನೇಕ ಪ್ರಶಸ್ತಿ ಅವಾರ್ಡ್ ಗಳು ಲಭಿಸಿರುವುದು ಒಂದು ಆಶಾದಾಯಕ ಬೆಳವಣಿಯಾಗಿದೆ.

… ಡಾಕ್ಷರೇಟ್ ಪಡೆದ ಡಾ. ಶಿಲ್ಪಾವತಿಗೆ ವಿವಿಧ ಸಾಹಿತಿಗಳು ಸ್ನೇಹಿತರು ಆತ್ಮೀಯರು .ವೃತ್ತಿನಿರತ ಮಹಾತ್ಮ ಶಾಲಾ ಮುಖ್ಯಸ್ಥರು ಸ್ನೇಹಿತರು. ಮತ್ತು.ಕವಿಗಳು.ಸಾಹಿತಿ ಗಳು ಅಭಿನಂದಿಸಿದ್ದಾರೆ….

ಶಿಲ್ಪಾವತಿ ಶುಕ್ರದೆಸೆ ನ್ಯೂಸ್ ಮೀಡಿಯ ಸಂಪಾದಕರೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿದರು ನಾನು ಪಡೆದ ಈ ಡಾಕ್ಟರೇಟ್ ಪದವಿ ನನ್ನ ಹೆತ್ತು ಹೊತ್ತು ಸಾಕಿ ಸಲುಹಿ ನನಗೆ ಜೀವನಕ್ಕೆ ಮಾರ್ಗ ತೋರಿಸಿ ಜೀವನ ಕಲ್ಪಿಸಿ ಆಪಘಾತದಲ್ಲಿ ಇಹ್ಯಲೋಕ ತ್ಯಜಿಸಿದ ತಂದೆ ತಾಯಿ ದೇವರುಗಳು ಮತ್ತು ನನ್ನ ಪತಿರಾಯ. ನನ್ನ ಸಹೋದರರಿಗೆ ಹೆತ್ತ ಅಪ್ಪನಿಗೆ ಅರ್ಪಿಸುವೆ…

ಶಿಲ್ಪಾವತಿ ಬಾಲ್ಯದಲ್ಲಿ ತಂದೆಯವರೊಂದಿಗೆ ಅಂದು ಕಷ್ಟದ ದಿನಗಳಲ್ಲಿ ಸಂತೆಯಲ್ಲಿ ಉಪ್ಪು ಸೊಪ್ಪು .ಹೂವು ಮಾರಾಟ ಮಾಡುವ ಮೂಲಕ ವಿದ್ಯಭ್ಯಾಸ ಮಾಡಿ ಉತ್ತಮ ಶಿಕ್ಷಕಿಯೆಂಬ ಬದುಕು ಕಟ್ಟಿಕೊಂಡು .ಇದೀಗ ಶಿಕ್ಷಕಿ ವೃತ್ತಿ ಜೊತೆಗೆ ಸಾಹಿತ್ಯ ಚಟುವಟಿಕೆಗಳೊಂದಿಗೆ ಸುಂದರ ಸಾರ್ಥಕ ಬದುಕು ಸವೆಸುತ್ತಿರುವ ಒಂದು ಅರ್ಥಪೂರ್ಣ ಇತರರಿಗೆ ಸ್ಪೂರ್ತಿಯಾಗಿದ್ದಾರೆ.

ಇಂತ ಹೊತ್ತಿನಲ್ಲಿ ತಮ್ಮವರು ಯಾರು ಇಲ್ಲ ಎಂಬ ಭಾವನೆಗಳು ಮಾಸಲಿ ನಿಮ್ಮ ಬಾಳಲ್ಲಿ ಇಂತ ಆಘಾತ ಘಟನೆಗಳು ಮರುಕಳಿಸದಿರಲಿ ಹೆತ್ತವರು ನೆನಪು ಮಾತ್ರ ಅವರು ಬಿಟ್ಟು ಹೋದ ಅಸ್ಮಿತೆಗಳೆ ನಿನಗೆ ಜನ್ಮ ನೀಡಿದ ಜೀವ ಮತ್ತು ಜೀವನ ಅವರು ಮೆಚ್ಚುವಂತೆ ಬದುಕಿ ಬಾಳುವುದೇ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಆಶಿಸುವೆ…

ಇಂತಿ ಸಂ….ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ

Leave a Reply

Your email address will not be published. Required fields are marked *

You missed

error: Content is protected !!