ಸುದ್ದಿ:-ಜಗಳೂರು

Editor by m.rajappa vyasagondanahalli

Shukradeshe news online portal media news ಸೆ 31_2025

ಕಳಪೆ ಮಟ್ಟದ ಆಹಾರ ವಿತರಿಸುವ ಹಾಸ್ಟೆಲ್ ಗಳಿಗೆ ನಾಗರೀಕ ಹಕ್ಕು ನಿರ್ದೇಶನಾಲಯದ ಅಧಿಕಾರಿಗಳು ಭೇಟಿ ಸ್ಟಾಕ್ ಅಂಡ್ ಇಂಡೇಂಟ್ ಪರಿಶೀಲನೆಯಲ್ಲಿ ವ್ಯತ್ಯಾಸ ನಕಲಿ ಬಯೋಮೆಟ್ರಿಕ್ ಪುಡ್ ಚಾಟ್ ಅಪ್ಲೋಡ್ ಮಾಡಿದ ವಾರ್ಡನ್ ಗಳ ಬಣ್ಣ ಬಯಲು

ಜಗಳೂರು ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವಿಧ್ಯಾರ್ಥಿನೀಯರ ಮೆಟ್ರಿಕ್ ಪೂರ್ವ ಮೆಟ್ರಿಕ್ ನಂತರ ಹಾಸ್ಟೆಲ್ ಗಳಿಗೆ ಶನಿವಾರ ಭೇಟಿ ನೀಡಿದ ಜಿಲ್ಲಾ ನಾಗರೀಕ ಹಕ್ಕು ನಿರ್ದೇಶನಾಲಯದ ಅಧಿಕಾರಿಗಳು

ಬೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ವಿದ್ಯಾರ್ಥಿಗಳಿಂದಲೆ ಕಳಪೆ ಮಟ್ಟದ ಆಹಾರ ವಿತರಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಬೇಸೆತ್ತ ವಿದ್ಯಾರ್ಥಿಗಳು

ವಾರ್ಡನ್ ರುಬಿಯಾಬಾನು ನಡೆಸುತ್ತಿರುವ ಸರ್ಕಾರಿ ಬಾಲಕೀಯರ ಮೆಟ್ರಿಕ್ ನಂತರ ಮೆಟ್ರಿಕ್ ಪೂರ್ವ ಹಾಸ್ಟೆಲ್ ಸೇರಿದಂತೆ ವಾರ್ಡನ್ ಉಮೇಶ ನಿರ್ವಹಣೆ ಮಾಡುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಬಾಲಕರ ಹಾಸ್ಟೆಲ್ ಗೆ ಜಿಲ್ಲಾ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಟಾಕ್ ಇಂಡೆಂಟ್ ವ್ಯತ್ಯಾಸವಿದ್ದು ನಾಗರೀಕ ಹಕ್ಕುಗಳ ನಿರ್ದೇಶನಾಲಯದ ಅಧಿಕಾರಿಗಳು ಕಡತಗಳ ಸಮೇತ ಇಲಾಖೆ ಬರುವಂತೆ ತಿಳಿಸಿದ್ದಾರೆ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳ ಮೂಲಕ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ

ವಿದ್ಯಾರ್ಥಿಗಳ ಅಕ್ಕಿ ಕದಿಯುವ ವಾರ್ಡನ್ ಗಳು ಇಂಡೆಂಟ್ ಸ್ಟಾಕ್ ಮಂಗಮಾಯ
ನಿಗೂಡವಾಗಿ ನಡೆಯಲಿದೆ ಅಕ್ಕಿ ಕಳ್ಳತನದ ದಂಧೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಕರೆ ಶಾಮೀಲು ಆಗಿರುವ ಶಂಕೆ.

ಹಾಸ್ಟೇಲ್​ಗಳ ರೇಷನ್​ ದುರ್ಬಳಕೆಯಾಗುತ್ತಿದೆ‌ ಎಂಬ ಆರೋಪಗಳು ಸರ್ವೇಸಾಮಾನ್ಯವಾಗಿದೆ. ಇಲ್ಲಿನ ವಾರ್ಡನ್ ಗಳಿಗೆ ಹೇಳೋರು ಇಲ್ಲ, ಕೇಳೋರು ಇಲ್ಲ ಎಂಬತಾಗಿದೆ.
ತಾಲ್ಲೂಕಿನ ಸಮಾಜ ಕಲ್ಯಾಣ ವ್ಯಾಪ್ತಿಗೆ ಬರುವಂತ ಹಾಸ್ಟೇಲ್​ಗಳು ಅವ್ಯವಸ್ಥೆ ಆಗರವಾಗಿವೆ.

ವಿದ್ಯಾರ್ಥಿಗಳ ಮಕ್ಕಳ ಅನ್ನಕ್ಕೆ ಕನ್ನ ಹಾಕುವ ವಾರ್ಡನ್ ಗಳೆ ನಿಮ್ಮ ಬಣ್ಣ ಬಯಲಾಗಿದೆ .

ಸರ್ಕಾರದ ಆದೇಶದ ಪ್ರಕಾರ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ಹಾಸ್ಟೆಲ್​ ವಿದ್ಯಾರ್ಥಿಗಳಿಗೆ ನೀಡಬೇಕು. ಆದರೆ ಯಾವೊಂದು ಸೌಲಭ್ಯವೂ ಮಕ್ಕಳಿಗೆ ತಲುಪುತ್ತಿಲ್ಲ. ಕಳಪೆ ಗುಣಮಟ್ಟದ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ.

ಶನಿವಾರ ಅಧಿಕಾರಿಗಳು ಎರಡು ಹಾಸ್ಟೇಲ್ ಗಳಿಗೆ ಭೇಟಿ ನೀಡಿದಾಗ ಅಲ್ಲಿನ ನ್ಯೂನತೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಜಿಲ್ಲಾ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಶ್ರೀಧರ ನಿರ್ದೇಶನದ ಮೇರೆಗೆ ಸಿ.ಪಿ.ಐ .ಎಂ.ವಿ ಮೇಘರಾಜ್. ನೇತೃತ್ವದಲ್ಲಿ ಪಿ.ಎಸ್ ಐ.ಸಂಜೀವಕುಮಾರ್ ಸೇರಿದಂತೆ ಸಿಬ್ಬಂಧಿಗಳು ಪರಿಶೀಲನೆ ನಡೆಸಿದ್ದಾರೆ.

ಓರ್ವ ವಾರ್ಡನ್​ನಿಂದ ಎರಡು ಮೂರು ಹಾಸ್ಟೇಲ್ ಗಳನ್ನು ನೋಡಿಕೊಳ್ಳಲಾಗುತ್ತಿದೆ. ಮೇನು ಚಾರ್ಟ್ ಪ್ರಕಾರ ಹಾಸ್ಟೇಲ್​ಗಳಲ್ಲಿ ತಿಂಡಿ, ಊಟ ನೀಡುತ್ತಿಲ್ಲ. ಯಾವ ಹಾಸ್ಟೇಲ್​ನಲ್ಲೂ ಸರಿಯಾದ ರೀತಿ ಮೆನು ಪಾಲನೆಯಾಗದೆ ಸರ್ಕಾರಿ ನೀಯಮಗಳನ್ನೆ ಗಾಳಿಗೆ ತೂರಿ ಆಡಿದ್ದೆ ಆಟ ಎಂಬತಾಗಿದೆ.
ವಿದ್ಯಾರ್ಥಿನಿಯರಿಗೆ ಸೇಪ್ಟಿ ಕಿಟ್ ಸೋಪು ಇನ್ನಿತರೆ ಸೌಲಭ್ಯಗಳನ್ನ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ

ವಿದ್ಯಾರ್ಥಿನಿಯರು ಹೊರ ಹೋಗುವಾಗ ಮತ್ತು ಹಾಸ್ಟೇಲ್ ಪ್ರವೇಶಿಸುವಾಗ ಹಾಜುರಾತಿ ಹಾಕಬೇಕು ಆದರೆ ಇದು ಪಾಲನೆಯಾಗದೆ ಯಾವುದೇ ಭಯವಿಲ್ಲದೆ ವಿದ್ಯಾರ್ಥಿಗಳು ಹೊರಹೋಗುತ್ತಾರೆ ಹಾಜುರಾತಿ ಹಾಕುತ್ತಿಲ್ಲ. ಮಕ್ಕಳು ಹೊರಹೋಗಬೆಕಾದರೆ ಎಲ್ಲಿಗೆ ಯಾವಾಗ ಹೋಗಿದ್ದಾರೆ ಎಂಬ ಪ್ರವೇಶ ದಾಖಲಾತಿ ಪುಸ್ತಕ ರಿಜಿಸ್ಟರ್ ಮಾಡಬೇಕು ಪ್ರಶ್ನೆಸಿದರೆ ಸಿ.ಸಿ ಕ್ಯಾಮರವಿದೆ ಎಂದು ಹೇಳುವ ಇವರು ಎಲ್ಲಾ ಕೆಲಸವನ್ನ ಸಿ ಸಿ ಕ್ಯಾಮರ್ ಮಾಡಲಿದೀಯ ಎಂದು ಮಕ್ಕಳ ಪೋಷಕರ ಪ್ರಶ್ನೆಯಾಗಿದೆ. ಮಕ್ಕಳನ್ನ ಹದ್ದುಬಸ್ತಿನಲ್ಲಿಡಬೇಕಾದ ವಾರ್ಡನ್ ರುಬಿಯಾ ಬಾನು ಬೇಜವಾಬ್ದರಿ ತೋರಿಸುತ್ತಿದ್ದಾರೆ ಎಂದು ಪೋಷಕರು ಮಧು ಆರೋಪಿಸಿದ್ದಾರೆ.
ಕೆಲ ಅಡುಗೆ ಸಹಾಯಕರೆ ಇಲ್ಲಿ ವಿದ್ಯಾರ್ಥಿಗಳ ರೇಕಾರ್ಡ್ ಕಲೆ ಹಾಕಲು ಹೇಳುವ ವಾರ್ಡನ್ ಸರಿಯಾದ ರೀತಿ ಹಾಸ್ಟೆಲ್ ಗೆ ಬರದೆ ಸರ್ಕಾರಿ ಅಧಿಕಾರವನ್ನ ದುರ್ಬಳಕೆ ಮಾಡಿಕೊಳ್ಳುವ ವಾರ್ಡನ್ ರುಬಿಯಾ ಬಾನು ರವರ ಎತ್ತಂಗಡಿ ಯಾವಾಗ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ..

Leave a Reply

Your email address will not be published. Required fields are marked *

You missed

error: Content is protected !!