ಜಾತಿಗಣತಿ ಕಲಂ 9 ಮತ್ತು 11 ರಲ್ಲಿ ನಾಯಕ ಎಂದು ನಮೂದಿಸಿ:ಶಾಸಕ ಬಿ.ದೇವೇಂದ್ರಪ್ಪ
ಶುಕ್ರದೆಸೆನ್ಯೂಸ್
ಜಗಳೂರು ಸುದ್ದಿ,
ಜಗಳೂರು,ಸೆ.21:ತಾಲ್ಲೂಕಿನಾದ್ಯಂತ ಜಾತಿಗಣತಿಯ ಜಾತಿ ಕಲಂ 9 ಮತ್ತು 11 ರಲ್ಲಿ ನಾಯಕ ಎಂದು ನಮೂದಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.
ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಾಯಕ ಸಮಾಜದಿಂದ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಸೆ. 22 ರಿಂದ ಅ.7ರವರೆಗೆ ನಡೆಯಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿಗಣತಿಯಲ್ಲಿ ತಾಲ್ಲೂಕಿನ ನಾಯಕ ಸಮಾಜದವರು ಜಾತಿಗಣತಿಯಲ್ಲಿ 9 ಮತ್ತು 11 ರಲ್ಲಿ ನಾಯಕ ಎಂದು ನಮೂದಿಸಬೇಕು. ವಿದ್ಯಾವಂತ ಯುವಕರ ತಂಡಗಳನ್ನು ರಚಿಸಿ ಧ್ವನಿವರ್ಧಕಗಳೊಂದಿಗೆ ಕರಪತ್ರಗಳನ್ನು ಹಂಚುವ ಮೂಲಕ ಗ್ರಾಮೀಣ ಭಾಗದಲ್ಲಿ ಜಾಗೃತಿಮೂಡಿಸಲಾಗುವುದು.ಜಾತಿಗಣತಿಯಲ್ಲಿ ಸ್ವಲ್ಪ ನಿರ್ಲಕ್ಷ್ಯವಹಿಸಿದರೆ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವುದು ಶತಸಿದ್ದ ಪಕ್ಷಾತೀತವಾಗಿ ಜಾತಿಗಣತಿ ಸಮೀಕ್ಷೆಯಲ್ಲಿ ಸಹಕರಿಸಬೇಕು ಎಂದುಮನವಿ ಮಾಡಿದರು.
ಕುರುಬ ಸಮಾಜವನ್ನು ಎಸ್ ಟಿ ಗೆ ಸೇರ್ಪಡೆ ಗೊಳಿಸುವುದನ್ನು ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ,ಸಂವಿಧಾನದಡಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ.ಕೇಳಿದ ಕೂಡಲೇ ಸೇರ್ಪಡೆಗೊಳಿಸಿದರೆ ನಮ್ಮ ಸಮುದಾಯದ ಹಕ್ಕುಗಳಿಗೆ ಚ್ಯುತಿ ಬಂದರೆ ಒಗ್ಗಟ್ಟು ಅನಿವಾರ್ಯ ಸಮುದಾಯದ ಚಿಂತಕರ,ಹಿರಿಯ ರಾಜಕಾರಣಿಗಳ ಸಲಹೆ ಪಡೆದು ಮುಂದುವರೆಯುತ್ತೇವೆ ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,ನಾಯಕ ಸಮಾಜದ ಮೂಲಕಸುಬುಗಳಾದ ಪಶುಪಾಲನೆ,ಕುರಿಸಾಕಾಣಿಕೆ,ವ್ಯವಸಾಯ ಅವಲಂಬಿತರು ಆಯಾ ವೃತ್ತಿಯನ್ನು ಸ್ಪಷ್ಟವಾಗಿ ಬರೆಸಬೇಕು.1976 ರ ಹಾವನೂರು ವರದಿಯನ್ವಯ ತಾಲ್ಲೂಕಿನ ನಾಯಕಸಮುದಾಯದವರಿಗೆ ಜಾತಿಗಣತಿ ಕಲಂನಲ್ಲಿ 10 ಅನ್ವಯವಾಗುವುದಿಲ್ಲ.ನಮ್ಮ ಜಾತಿಯ 38/2 ಕ್ರಮಸಂಖ್ಯೆಯಂತೆ ಕಲಂ 9 ಮತ್ತು 11 ರಲ್ಲಿ ನಾಯಕ ಎಂದು ಮಾತ್ರ ಬರೆಸಬೇಕು. ಬೇರೆಬೇರೆ ಜಿಲ್ಲೆಗಳಲ್ಲಿ ಉಪಜಾತಿಗಳನ್ನು ನಮೂದಿಸಿ ಎಸ್ ಟಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಗೊಂದಲಬೇಡ ಎಂದು ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂಮಾಜಿ ಸದಸ್ಯ ಕೆ.ಪಿ.ಪಾಲಯ್ಯ,ನಾಯಕಸಮಾಜದ ತಾಲ್ಲೂಕು ಅಧ್ಯಕ್ಷ ನಾಗರಾಜ್,ಮುಖಂಡರಾದ,ಸೂರಲಿಂಗಪ್ಪ,ಮಾರಪ್ಪ,ಡಾ.ಪಾಲಾಕ್ಷಿ,ಕಾನನಕಟ್ಟೆ ತಿಪ್ಪೇಸ್ವಾಮಿ,ಓಬಣ್ಣ,ಡಿ ಆರ್ ಹನುಮಂತಪ್ಪ,ವಕೀಲ ಅರ್.ಓಬಳೇಶ್,ವಕೀಲ ರುದ್ರೇಶ್, ಸಣ್ಣ ಓಬಣ್ಣ,ಲೋಕೇಶ್,ರೇವಣ್ಣ,ರಾಜಣ್ಣ,ಸಿದ್ದಪ್ಪ,ನಾಗರಾಜ್,ಪರಮೇಶ್,ಸೇರಿದಂತೆ ಇದ್ದರು.
