ಜಗಳೂರು: ಸ್ವಚ್ಛತಾ ಇ ಸೇವಾ ಆಂದೋಲನ ಅಂಗವಾಗಿ ಸಾರ್ವಜನಿಕರು ಕಸ ಎಸೆಯುವ ಸ್ಥಳಗಳಲ್ಲಿ ಕಸ ಎಲ್ಲೆಂದರೆ ಅಲ್ಲೆ ಕಸ ಎಸೆಯದಂತೆ ಪಪಂ ಸಿಬ್ಬಂದಿಗಳು ಸ್ವಚತೆ ಮಾಡಿ ರಂಗೋಲಿ ಹಾಕಿ ಸಾರ್ವಜನಿಕರಿಗೆ ಜನಜಾಗೃತಿ ಮೂಡಿಸಿದರು.
ಜಗಳೂರು ಪಟ್ಟಣ ಪಂಚಾಯ್ತಿ ವತಿಯಿಂದ ಸ್ವಚ್ಛತಾ ಇ ಸೇವಾ ಆಂದೋಲನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪಟ್ಟಣ ಪಂಚಾಯ್ತಿ ವತಿಯಿಂದ ಪಟ್ಟಣದ ಜೆ ಸಿ ಆರ್ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳ ಸಾರ್ವಜನಿಕ ಸ್ಥಳಗಳಲ್ಲಿ ಜನರು ಬೇಕಾಬಿಟ್ಟಿ ಎಸೆದಿರುವ ಕಸವನ್ನು ಸಿಬ್ಬಂದಿಗಳು ಸ್ವಚತೆ ಮಾಡಿ ರಂಗೋಲಿ ಹಾಕಿ ಪ್ರತಿಜ್ಘಾವಿಧಿ ಬೋದನೆ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಈ ವೇಳೆ ಪಪಂ ಆರೋಗ್ಯ ಅಧಿಕಾರಿ ಪ್ರಶಾಂತ ಮಾತನಾಡಿದರು ಗಾಂಧೀಜಿಯವರ ಸ್ವಚ್ಛ ಭಾರತದ ಪರಿಕಲ್ಪನೆಯಲ್ಲಿ ಸರ್ಕಾರದ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ನೈರ್ಮಲ್ಯ ಆಂದೋಲನ, ನಿರ್ಮಲ ಭಾರತ, ಸ್ವಚ್ಛ ಭಾರತ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ದೇಶದ ಪ್ರಗತಿಗೆ ಸ್ವಚ್ಛತೆಯು ಮಾಡುವ ಸಂಕಲ್ಪದಂತೆ ಸಂದೇಶ ಸಾರಲಾಗುತ್ತಿದೆ ಎಂದು ಹೇಳಿದರು.
, ‘ನಮ್ಮ ಸುತ್ತ ಮುತ್ತಲ ಪರಿಸರದ ಸ್ವಚ್ಛತೆಯ ಬಗ್ಗೆ ನಾವು ಜವಾಬ್ದಾರಿ ವಹಿಸಬೇಕು. ಇಲ್ಲದಿದ್ದರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಿಲ್ಲ’ ಎಂದರು.
, ‘ಕೆಲ ಬಡಾವಣೆಯ ಪ್ರದೇಶದಲ್ಲಿನ ಕೊಳಕು, ಅನೈರ್ಮಲ್ಯ ಸ್ಥಿತಿಯನ್ನು ತೊಡೆದುಹಾಕಿ ಸಂಪೂರ್ಣ ಸ್ವಚ್ಛತೆ ಹಾಗೂ ನೈರ್ಮಲ್ಯ ಸಾಧಿಸಲು ಇ ಸ್ವಚ್ಛ ಭಾರತ ಯೋಜನೆ ಮಹತ್ವದ ಪಾತ್ರ ವಹಿಸಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ವೀರೇಶ್..ಶಿವರುದ್ರಪ್ಪ. ಕಮ್ಯೂಟಿ ಮೋಬೈಲೆಜರ್ ಗಳಾದ ಮಮತಾ. ನೇತ್ರಾಮ್ಮ. . ಪೌರ ನೌಕರರ ಸಿಬ್ಬಂದಿಗಳಾದ ರಾಜೇಶ್ ಕುಮಾರ್. ಮಲ್ಲಪ್ಪ.ನಾಗರಾಜ್. ಸೇರಿದಂತೆ ಹಾಜುರಿದ್ದರು.

