ಜಗಳೂರು ಬ್ರೇಕಿಂಗ್ ನ್ಯೂಸ್
Editor by m.rajappa vyasagondanahalli.shukradeshe news Kannada onlie news portal| knnada September 25
ಕ್ಲಿನ್ ಮ್ಯಾಕ್ಸ್ ಕಂಪನಿ ಹುಚವ್ವನಹಳ್ಳಿ ರೈತ ಮಹಿಳೆ ಚಾಯಲಕ್ಷ್ಮಿ ಎಂಬುವವರಿಗೆ ವಂಚನೆ.
ತಾಲ್ಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ಸರ್ವೇ ನಂ 61/3 ರ ಚಾಯಲಕ್ಷ್ಮೀ ಎಂಬುವವರ 4 ಎಕರೆ ಜಮೀನಿನಲ್ಲಿ ಕ್ಲಿನ್ ಮ್ಯಾಕ್ಸ್ ಕಂಪನಿಯವರು ಸೋಲಾರ್ ಆಳವಡಿಸಿಕೊಂಡು ರೈತರಿಗೆ ಪರಿಹಾರ ನೀಡದೆ ವಂಚನೆ ಮಾಡಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಚಾಲಕ ಹೆಚ್ ಮಲ್ಲೇಶ್ ಆರೋಪಿಸಿದ್ದಾರೆ.
ಜಮೀನು ಮಾಲಿಕರಾದ ಚಾಯಲಕ್ಷ್ಮಿ ಕಂಪನಿ ವಿರುದ್ದ ಆರೋಪಿಸಿದ್ದಾರೆ ಈ ಹಿಂದೆ ನಮ್ಮ ಜಮೀನು ಖರಿದಿಗಾಗಿ ಮತ್ತು ಗುತ್ತಿಗೆ ಪಡೆಯಲು ಒಪ್ಪಂದ ಮಾತುಕತೆ ನಡೆಸಿ ಅಡ್ವಾನಸ್ ಹಣ ನಿಡಿದ್ದು ಬಿಟ್ಟರೆ ಇದುವರೆಗೂ ನಮ್ಮ ಭೂಮಿಯನ್ನ ಯಾವುದೆ ಗುತ್ತಿಗೆ ಕರಾರು ಆಗಲಿ ಖರಿದಿಗೆ ಪಡೆಯದೆ ಇದೀಗ ಆಕ್ರಮವಾಗಿ ಸೋಲಾರ್ ಆಳವಡಿಸಿ ವಿದ್ಯುತ್ ಉತ್ಪಾದನೆ ಮಾಡುತಿದ್ದಾರೆ ಪರಿಹಾರ ಕೋಡಿಸುವಂತೆ ಒತ್ತಾಯಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ದಲಿತ ವಿಮೋಚನ ಮಾನವ ಹಕ್ಕುಗಳ ವೇದಿಕೆ ವಿಜಯನಗರ ಜಿಲ್ಲೆ ದಾವಣಗೆರೆ ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ ಜಗಳೂರು ತಾಲ್ಲೂಕು ಕಛೇರಿ ಮುಂಬಾಗದಲ್ಲಿ ಪ್ರತಿಭಟನೆ ನಡೆಸಿ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ .
.ರೈತರ ಭೂಮಿಯಲ್ಲಿ ಆಕ್ರಮವಾಗಿ ಸೊಲಾರ್ ಆಳವಡಿಸಿರುವುದನ್ನ ಪ್ರಶ್ನೆಸಿದರೆ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ರೈತ ಮಹಿಳೆ ಹುಚವ್ವನಹಳ್ಳಿ ಸುಗುಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಚವ್ವನಹಳ್ಳಿ ಹಾಗು ಹಿರೆ ಮಲ್ಲನಹೊಳೆ ಗ್ರಾಮಗಳಲ್ಲಿ ಕ್ಲಿನ್ ಮ್ಯಾಕ್ಸ್ ಕಂಪನಿಯವರು ರೈತರ ಜಮೀನಿನಲ್ಲಿ ಯಾವುದೆ ಪರವಾನಿಗೆ ಪಡೆಯದೇ ಮಾಲಿಕರ ಬಳಿ ಯಾವುದೇ ಗುತ್ತಿಗೆ ಕರಾರು ಅಥವಾ ಜಮೀನು ಖರಿದಿಸದೆ ಅನಧಿಕೃತವಾಗಿ ಸೋಲಾರ್ ಆಳವಡಿಸಿರುವುದು ಕಾನೂನುನಿಗೆ ಆಪಾರದವಾಗಿದೆ. ಎಂದು ವಿಜನಗರ ಜಿಲ್ಲೆ ದಲಿತ ವಿಮೋಚನ ಜಿಲ್ಲಾದ್ಯಕ್ಷ ಪಿ ಸಂತೋಷ ಆರೋಪಿಸಿದ್ದಾರೆ.
ಶೀಘ್ರವೆ ರೈತರ ಜಮೀನಿನಲ್ಲಿ ಅನಧಿಕೃತವಾಗಿ ಆಳವಡಿಸಿರುವ ಸೊಲಾರ್ ನ್ನು ತೆರವುಗೋಳಿಸಿ ಭೂಮಿ ಬಿಡಿಸಿಕೊಡಬೇಕು ಯಾವುದೇ ಪರವಾನಿಗೆ ಪಡೆಯದೆ ನಮ್ಮ ಜಮೀನಿನಲ್ಲಿ ಸೊಲಾರ್ ಅಳವಡಿಸಿ ಕೊಟ್ಯಂತರ ಹಣ ಗಳಿಸಿಕೊಂಡಿರುವ ಕಂಪನಿ ಮಾಲಿಕರು ನಮಗೆ ಪರಿಹಾರ ನೀಡಬೇಕೆಂದು ತಹಶೀಲ್ದಾರ್ ಕಛೇರಿ ಅವರಣದಲ್ಲಿ ಕೆಲ ಹೊತ್ತು ಪ್ರತಿಭಟನೆ ನಡೆಸಿ ಕಂಪನಿ ವಿರುದ್ದ ಹಾಗೂ ತಾಲ್ಲೂಕು ತಹಶೀಲ್ದಾರ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾದ್ಯಕ್ಷ ಪಿ. ಸಂತೋಷಕುಮಾರ್ ಮಾತನಾಡಿ ವಿಜನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಹಾಗೂ ಜಗಳೂರು ತಾಲ್ಲೂಕಿನಲ್ಲಿ ವಿಂಡ್ ಮಿಲ್ ಸೊಲಾರ್ ಕಂಪನಿಗಳು ರೈತರ ಕೃಷಿ ಭೂಮಿಯನ್ನ ಕಸಿಯುತ್ತಿವೆ. ಸರ್ಕಾರದ ನೀಯಮಗಳನ್ನ ಗಾಳಿಗೆ ತೂರಿ ಬೇಕಾಬಿಟ್ಟಿ ವಿಂಡ ಪ್ಯಾನ್ ಗಾಗೂ ಸೊಲಾರ ಆಳವಡಿಸುವುದನ್ನ ನಿಲ್ಲಿಸುಬೇಕು ರೈತರು ಬೆಳೆಯುವ ಕೃಷಿ ಭೂಮಿ ಇತ್ತಿಚಿಗೆ ಕ್ಷೀಣಿಸುತ್ತಿದೆ ಆದ್ದರಿಂದ ತಾಲ್ಲೂಕು ಆಡಳಿತ ಕ್ರಮಕೈಗೊಳ್ಳದಿದ್ದರೆ ಉಗ್ರಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಸಂದರ್ಭದಲ್ಲಿ ರಾಜ್ಯ ಸಂಚಾಲಕ ವೆಂಕಟೇಶ್. ವಿಜನಗರ ಜಿಲ್ಲಾ ದಸಂಸ ಸಂಚಾಲಕ ಎ.ಕೆ. ಮಾರಪ್ಪ .ಗೌರವದ್ಯಕ್ಷರು ಎ. ಬಸವರಾಜ. ಲೋಕಪ್ಪ .ವಿಜಯಕುಮಾರ್ ಹೊಸಪೇಟೆ. ಕರಿಯಪ್ಪ ಬಿ.ಪರುಶುರಾಮ್ .ತಿಪ್ಪೇಸ್ವಾಮಿ.ಬಸವರಾಜ.ಪರಶುರಾಮ.ವಿಜಯಕುಮಾರ್.ನಾಗರಾಜ್ ಸೇರಿದಂತೆ ಹಾಜುರಿದ್ದರು.

