ಸಂಘಮಿತ್ರ ಹಣಕಾಸು ಸಂಸ್ಥೆಯ ಸಾಲ ಸೌಲಭ್ಯ ಸದುಪಯೋಗ ಯೋಗಪಡಿಸಿಕೊಳ್ಳಿ : ನಾಗರಾಜು , ದಾವಣಗೆರೆ ಜಿಲ್ಲಾ ವ್ಯವಸ್ಥಾಪಕರು. ಕಾವೇರಿ ನಿರ್ವಹಣಾ ಸಮುದಾಯ ಸಂಪನ್ಮೂಲ ಸಂಸ್ಥೆಯ ವಾರ್ಷಿಕ ಮಹಾಸಭೆ ಸಭೆಯಲ್ಲಿ ಭಾಗವಸಿ ಕರೆ ನೀಡಿದರು
ಜಗಳೂರು ಪಟ್ಟಣದ ಸಂಘಮಿತ್ರ ಕಛೇರಿಯಲ್ಲಿ ವಾರ್ಷಿಕ ಮಹಾಸಭೆ ಕುರಿತು ಮಾತನಾಡಿದರು , ಸಂಘಮಿತ್ರ ಕಿರು ಹಣಕಾಸು ಸಂಸ್ಥೆಯು ಮೈರಾಡ ಸಂಸ್ಥೆಯ ಅಂಗ ಸಂಸ್ಥೆ ಯಾಗಿದ್ದು ಮಹಿಳಾ ಸ್ವ ಸಹಾಯ ಸಂಘಗಳಿಗೆ ಹಣಕಾಸು ನೆರವು ನೀಡುತ್ತಿದ್ದು, ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ಮಹಿಳಾ ಸಹಾಯ ಸಂಘದ ಸದಸ್ಯರು ನಮ್ಮ ಸಂಸ್ಥೆಯ ಹಣಕಾಸು ನೆರವು ಪಡೆದು ಆದಾಯ ಉತ್ಪತ್ತಿ ಚಟುವಟಿಕೆ ಕಾ ರ್ಯಕ್ರಮ ಮಾಡಿಕೊಳ್ಳುವುದರಿಂದ ಅಭಿವೃದ್ಧಿ ಕಾಣುವಂತೆ ತಿಳಿಸಿದರು. ಸಾಲ ಪಡೆದ ಸದಸ್ಯರು ಗಳ ಅರೋಗ್ಯ ಕ್ಕಾಗಿ ಆಸ್ಪಿಕ್ಯಾಸ್ ಸೌಲಭ್ಯ, ಸಾಲದ ಅಪಾಯ ಕಡಿಮೆ ಮಾಡಲು ಲೈಫ್ ಇನ್ಸೂರೆಫ್ ಸೌಲಭ್ಯ ಇದೆ ಎಂದು ತಿಳಿಸಿದರು.
ಸಂಘಮಿತ್ರ ಹಣಕಾಸು ಸಂಸ್ಥೆಯ ತರಬೇತಿ ಅಧಿಕಾರಿ ಕುಮಾರ ದೊರೆ ಮಾತನ್ನಾಡಿ, ಸ್ವಸಹಾಯ ಸಂಘಗಳ ಸದಸ್ಯರುಗಳು ಸಾಲ ಮರುಪಾವತಿ ಮಾಡಲು ಡಿಸಿಟಲ್ ಹಣಕಾಸ ಸೇವೆಗಳಾದ ಗೂಗಲ್ ಪೇ, ಫೋನ್ ಪೇ ಮೂಲಕ ಸಾಲ ಮರುಪಾವತಿ ಗಳನ್ನು ಸದಸ್ಯರಿಂದ ಸಂಘಕ್ಕೆ, ಸಂಘದಿಂದ ಸಂಘಮಿತ್ರಕ್ಕೆ ನ್ಯಾಚ್ ಮರುಪಾವತಿ ವ್ಯವಸ್ಥೆ ಯನ್ನು ಹೈಬ್ರಿಡ್ ಮಾದರಿ ಎಂದು ಕರೆಯುತ್ತೇವೆ. ಎಲ್ಲಾ ಸದಸ್ಯರುಗಳು ಹೈಬ್ರಿಡ್ ಮಾದರಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಕಾವೇರಿ ಸಮುದಾಯ ಸಂಪನ್ಮೂಲ ಸಂಸ್ಥೆಗೆ ಹೊಸದಾಗಿ ಅಧ್ಯಕ್ಸರಾಗಿ ಜ್ಯೋತಿ, ಉಪಾಧ್ಯಕ್ಸರಾಗಿ ಅನ್ನಪೂರ್ಣ, ಖಜಾಂಜಿ ನೇತ್ರವತಿ ಹಾಗೂ ನಿರ್ದೇಶಕರುಗಳ ಆಯ್ಕೆ ಮಾಡಲಾಯಿತು. ಲೆಕ್ಕ ಪರಿಶೋಧನೆ ವರದಿ ಮಂಡನೆ ಮತ್ತು ಅದಕ್ಕೆ ಅನುಮೋದನೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘಮಿತ್ರ ಹಣಕಾಸು ಸಂಸ್ಥೆಯ ತರಭೇತಿ ಅಧಿಕಾರಿ ಕುಮಾರ ದೊರೆ, ಕಾವೇರಿ ಸಿ. ಎಂ. ಆರ್. ಸಿ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ್ ಹಾಗೂ ಸ್ವ ಸಹಾಯ ಸಂಘಗಳ ಸದಸ್ಯರುಗಳು ಹಾಜರಿದ್ದರು.
