ಪಂಜಾಬ್ ನ ಚಂಡೀಗಢನಲ್ಲಿ ನಡೆಯಲಿರುವ ಕಾರ್ಯನಿರತ ಪತ್ರಕರ್ತರ ವಾರ್ಷಿಕ ಸಾಮಾನ್ಯ ಸಭೆಗೆ -: ಅಣಬೂರು ಮಠದ ಎ.ಎಂ.ಕೊಟ್ರೋಶ್ ಭಾಗವಹಿಸುವರು
ಜಗಳೂರು :- ಪಂಜಾಬ್ ರಾಜ್ಯದ ಚಂಡಿಗಡದಲ್ಲಿ ಏಪ್ರಿಲ್ 22 ಹಾಗೂ 23 ರಂದು ರಾಷ್ಟ್ರೀಯ ಪತ್ರಕರ್ತರ ಕಾರ್ಯಕಾರಿ ಸಮಿತಿ ಸಭೆಗೆ ರಾಷ್ಟ್ರೀಯ ಮಂಡಳಿಯ ಒಕ್ಕೂಟದ ಸದಸ್ಯರಾದ ಜಗಳೂರು ನನ್ನ ಮಿತ್ರ ಪತ್ರಿಕೆಯ ಸಂಪಾದಕರಾದ ಎ.ಎಂ.ಕೊಟ್ರೋಶ್ ಸೇರಿದಂತೆ ರಾಜ್ಯದ ನಾಲ್ಕು ಜನ ರಾಷ್ಟ್ರೀಯ ಮಂಡಳಿಯ ಒಕ್ಕೂಟದ ಸದಸ್ಯರುಗಳು ಸಭೆಗೆ ಭಾಗವಹಿಸಲಿದ್ದಾರೆ
ರಾಷ್ಟ್ರೀಯ ಪರಿಷತ್ ಅಧ್ಯಕ್ಷರಾದ ಬಿ.ವಿ.ಮಲ್ಲಿಕಾರ್ಜುನ್ ಸಭೆಯ ಅಧ್ಯಕ್ಷತೆ ವಹಿಸುವರು.
ಜಗಳೂರಿನಿಂದ ಪಂಜಾಬ್ ರಾಜ್ಯದ ಚಂಡಿಗಡಕ್ಕೆ ಇಂದು ಪ್ರಯಾಣ ಬೆಳಿಸಲಿರುವ ಅಣಬೂರು ಮಠದ ಕೊಟ್ರೇಶ್ ಅವರಿಗೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶುಭಾ ಕೋರಿದ್ದಾರೆ.