ಶುಕ್ರದೆಸೆ ಬ್ರೇಕಿಂಗ್ ನ್ಯೂಸ್.
ಜಗಳೂರು ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ನಾಡ ಹಬ್ಬ ವಿಶ್ವವಿಖ್ಯಾತ ದಸರ ಹಬ್ಬ ಸಂಭ್ರಮದ ಅಂಗವಾಗಿ ಬನ್ನಿ ತೆಗೆದುಕೊಂಡು ಬಂಗಾರದಂತೆ ಜೀವಿಸೋಣ ಎಂಬ ಸಂದೇಶ ಸಾರಿದ್ದಾರೆ.
ಜಗಳೂರು ಪಟ್ಟಣದ ಬನ್ನಿಮಂಟಪದ ಬಳಿಯಿರುವ ಬನ್ನಿ ಮರಕ್ಕೆ ವಿಶಿಷ್ಠ ಪೂಜೆ ಸಲ್ಲಿಸುವ ಪೂಜೆ ಕೈಂಕಾರ್ಯದಲ್ಲಿ ಪಾಲ್ಗೋಂಡು ಭಕ್ತರೊಂದಿಗೆ ಬನ್ನಿ ಎಲೆ ವಿನಿಮಯ ಮಾಡಿಕೊಳ್ಳುವ ಮೂಲಕ ಸಾಕ್ಷಿಯಾಗಿದ್ದಾರೆ.
ಪಟ್ಟಣದಲ್ಲಿ ತಹಶೀಲ್ದಾರ್ ಸೈಯದ್ ಕಲೀಂ ಉಲಾರವರಿಂದ ವಿಶಿಷ್ಠ ಪೂಜೆಯೊಂದಿಗೆ ಅಂಬು ಛೇದಿಸಿದರು
ಸಡಗರ ಸಂಭ್ರಮದಿಂದ ವಿಜಯದಶಮಿ ಅಂಗವಾಗಿ ಬನ್ನಿ ಮುಡಿದು ಬಾಳೆ ಗಿಡಕ್ಕೆ ಅಂಬು ಛೇದಿಸಿದರು.
ನಗರದ ರಾಮ ದೇವರು ಪ್ರಮುಖ ರಸ್ತೆಯಲ್ಲಿ ವಿವಿಧ ವಾಧ್ಯಗಳೊಂದಿಗೆ ಮೆರವಣಿಗೆ ಮೂಲಕ ಬನ್ನಿಮರದ ಮೈದಾನಕ್ಕೆ ತೆರಳಿದವ ಮೂಲಕ ದೇವರುಗಳಿಗೆ ಹಾಗೂ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ.ತಹಶೀಲ್ದಾರ್ ಸೈಯದ್ ಕಲೀಂ ಉಲಾರವರು ಮೈಸೂರು ಪೇಟ ಧರಿಸಿ ಮಹಾರಾಜ ಉಡುಪುಗಳೊಂದಿಗೆ ಆಯುಧವನ್ನ ಹಿಡಿದು ಬಾಳೆ ಕಂದನ್ನು ಕತ್ತರಿಸುವ ಮೂಲಕ ಬನ್ನಿ ಮುಡಿದ ವೈಶಿಷ್ಠತೆಗೆ ಮತ್ತೊಂದು ಹೆಸರೆ ಜಗಳೂರು ಹಿಂದೂ ಮುಸ್ಲೀ ಎಂಬ ಭಾವೈಕ್ಯತೆಗೆ ಸಾಕ್ಷಿ ಎಂದರು ,
ನಂತರ ಭಕ್ತರು ಬನ್ನಿ ಮರದ ಎಲೆಗಳೊಂದಿಗೆ ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡು ಶುಭಕೋರಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಲೋಕ್ಯಾನಾಯ್ಕ್ .ಪಪಂ ಸದಸ್ಯರಾದ ಮುಖಂಡರಾದ ವೆಂಕಟೇಶರೆಡ್ಡಿ.ಮಹೇಶ್ ವಿವಿದ ಭಕ್ತಾದಿಗಳು . ಸಾರ್ವಜನಿಕರು ಪಾಲ್ಗೊಂಡಿದ್ದರು.
