editor by m. rajappa vyasagondanahalli |shukradeshe news Kannada online news portal kannada|october 15/10/2025 wednesday
ಕಾಣದ ತರಕಾರಿ ಮತ್ತು ಆಹಾರ ಸಮಾಗ್ರಿಗಳ ಕ್ರೈಟ್ ಖಾಲಿ ಖಾಲಿ ಹಾಸ್ಟೆಲ್ ನಿರ್ವಹಣೆ ಮಾಡುವಲ್ಲಿ ವಾರ್ಡನ್ ವಿಫಲ ಪ್ರಶ್ನೆಸಿದರೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ಹಾಗೂ ಜಿಲ್ಲಾ ಉಪಾನಿರ್ದೇಶಕರನ್ನೆ ಕೇಳಿ ಎಂದ ವಾರ್ಡನ್ ಆರ್ ತಿಪ್ಪೇಸ್ವಾಮಿ ಉದ್ದಟತನದಿಂದ ಉತ್ತರಿಸುವ ದುರಂಕಾರಿ ಸರ್ಕಾರದ ಇಲಾಖೆ ಅಧಿಕಾರಿ ಯಾವ ರೀತಿ ಸೌಜನ್ಯಯುತವಾಗಿ ವರ್ತಿಸಬೇಕೆಂಬುದೆ ಅರಿವಿಲ್ಲ
ಜಗಳೂರು ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಹಾರ ಸಾಮಾಗ್ರಿ ತರಕಾರಿ ಇಲ್ಲದೆ ಸಾಂಬರು ಸೇವಿಸುವ ವಿದ್ಯಾರ್ಥಿಗಳ ಗೋಳು ಕೇಳು ಯಾರು?
ಕಳಪೆ ಮಟ್ಟದ ಅಹಾರ ವಿತರಿಸುವ ವಾರ್ಡನ್ ಸ್ಥಳೀಯವಾಗಿಯೆ ಇರದೇ ಸರ್ಕಾರಿ ಪರ್ಮಾನು ನೀಯಮ ಉಲ್ಲಂಘನೆ ಮಾಡುವ ವಾರ್ಡನ್ ಗಿಲ್ಲ ಕಡಿವಾಣ
ಜಗಳೂರು ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಮೆಟ್ರಿಕ ನಂತರ ಬಾಲಕರ ವಿದ್ಯಾರ್ಥಿ ವಸತಿ ನಿಲಯದಲ್ಲಿ
ವಾರ್ಡನ್ ತಿಪ್ಪೆಸ್ವಾಮಿಗಿಲ್ಲ ಸರ್ಕಾರಿ ಕಾನೂನು ಮತ್ತು ಸುತ್ತೋಲೆಗಳ ನಿಯಮ
ಡೊಂಟ್ ಕೇರ್ ಎಂದು ದರ್ಪದಿಂದ ವರ್ತಿಸುವ ಈತನ ಬಣ್ಣಬಯಲು ಸರ್ಕಾರಿ ನೀಯಮದಂತೆ ವಾರ್ಡನ್ ಸ್ಥಳೀಯವಾಗಿಯೆ ವಾಸಿಸಬೇಕೆಂಬ ನೀಯಮವಿದೆ ಆದರೆ ಆ ನೀಯಮ ಪಾಲನೆಯಾಗುತ್ತಿಲ್ಲ .
ವಸತಿ ನಿಲಯದಲ್ಲಿ ಬಯೋಮೆಟ್ರಿಕ್ ಯಿದ್ದರು ಬಳಕೆಯಾಗದೆ ಅವ್ಯವಸ್ಥೆ ಅಗರವಾಗಿದೆ.ವಾರ್ಡನ್ ಹಾಸ್ಟೆಲ್ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ.ಸರಿಯಾದ ರೀತಿ ಹಾಸ್ಟೆಲ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಪ್ರಶ್ನೇಸಿದರೆ ಮೇಲಾಧಿಕಾರಿಗಳನ್ನೆ ಕೇಳಿ ಎಂದು ಉತ್ತರಿಸಿ ಸಬೂಬು ಹೇಳಿ ನುಣುಚಿಕೊಳ್ಳುತ್ತಾನೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದರು ಹೆಚ್ಚುವರಿ ತೋರಿಸಿ ನಕಲಿ ಬಿಲ್ ಸೃಷ್ಟಿಸಿ ಭ್ರಷ್ಟಾಚಾರ ಸಹ ಕೇಳಿ ಬಂದಿದೆ.. ಕಳಪೆ ಆಹಾರ ಸೇವನೆಯಿಂದ ಮಕ್ಕಳು ಅನಾರೋಗ್ಯದಿಂದ ಯ್ಯುವುಮ್ಯಾನಿಟಿ ಪವರ್ ಕಡಿಮೆಯಾಗುತ್ತಿದೆ.ಒಟ್ಟಾರೆ ಸರ್ಕಾರಿ ಸೌಲಭ್ಯವನ್ನ ಸರಿಯಾದ ರೀತಿ ವಿದ್ಯಾರ್ಥಿಗಳಿಗೆ ತಲುಪಿಸಿ ಉತ್ತಮ ರುಚಿಕರವಾದ ಊಟ ಇನ್ನಿತರೆ ಪೌಷ್ಟಿಕ ಆಹಾರ ಒದಗಿಸಿದರೆ ವಿದ್ಯಾರ್ಥಿಗಳು ಸದೃಡ ಆರೋಗ್ಯದಿಂದ ವಿದ್ಯಾಬ್ಯಾಸ ಮಾಡಲು ಸಹಕಾರಿಯಾಗುತ್ತಿದೆ ಆದರೆ ವಾರ್ಡನ್ ಮಾತ್ರ ತರಕಾರಿ ತರಲು ಹಣ ಕೊಟ್ಟು ಬಂದಿರುವೆ ಮಾರುಕಟ್ಟೆಗೆ ಹೋಗಿದ್ದಾರೆ ಎಂದು ಸಬೂಬು ಹೇಳಿ ನುಣುಚಿಕೊಂಡು ಮರೆಮಾಚುವ ವಾರ್ಡನ್ ತಿಪ್ಪೆಸ್ವಾಮಿಯವರು ಯಾವುದೊ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ರೀತಿ ದರ್ಪದಿಂದ ವರ್ತಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ..

ಮಂಚದ ಮೇಲೆ ಹರಿದ ಹಾಸಿಗೆ ಬೆಡ್ ಆಹಾರ ಸಾಮಗ್ರಿ. ಇಲ್ಲದೆ ಖಾಲಿಯಾಗಿರುವ ಅಹಾರ ಸಾಮಗ್ರಿಗಳ ಕೊಳಗಗಳು
ಒಟ್ಟಾರೆ ವಾರ್ಡನ್ ತಿಪ್ಪೇಸ್ವಾಮಿಯವರ ನಿರ್ಲಕ್ಷ್ಯತನದಿಂದ ವಿದ್ಯಾರ್ಥಿಗಳಿಗೆ ಕೆಲ ಸರ್ಕಾರಿ ಸೌಲಭ್ಯಗಳ ವಂಚಿತವಾಗುತ್ತಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಜಿಲ್ಲಾ ಉಪಾನಿರ್ದೇಶಕರೆ ಇತ್ತ ಕಡೆ ಗಮನಹರಿಸಿ ವಿದ್ಯಾರ್ಥಿಗಳಿಗೆ ಆಗುವ ಅನ್ಯಾಯವನ್ನ ಸರಿಪಡಿಸುವಂತೆ ಮಕ್ಕಳ ಪೋಷಕರು ಒತ್ತಾಯಿಸಿದ್ದಾರೆ.
