ವಿದ್ಯಾರ್ಥಿ ದಿಸೆಯಿಂದಲೂ ಕಾಂಗ್ರೇಸ್ ಪಾಳಯದಲ್ಲಿ ವಕೀಲರಾದ ರಾಕೇಶ್ ನ ಉತ್ತಮ ಸಂಘಟನೆಗಾರನಾಗಿ ಗುರುತಿಸಿಕೊಂಡು ರಾಕಿಬಾಯಿ ಎಂದೇ ಖ್ಯಾತಿಯಾದ ರಾಕೇಶ್ ಎಂದರೆ ಎಸ್ ಎಸ್ ದೊಡ್ಡಮನೆ ಕುಟುಂಬದ ಬಗ್ಗೆ ಅಭಿಮಾನವೇ ಅಭಿಮಾನ

ಬೆಣ್ಣೆ ನಗರಿ ಯುವಕನ ಪ್ರಮಾಣಿಕ ಸೇವಾ ಕಾರ್ಯಕ್ಕೆ ಒಲಿದು ಬಂತು ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಕಾನೂನು ವಿಭಾಗದ ನೂತನ ಜಿಲ್ಲಾಧ್ಯಕ್ಷ ಸ್ಥಾನ ಪಡೆದ ವಕೀಲರಾದ ಡಿ.ಸಿ.ರಾಕೇಶ್ ರವರು ಆಯ್ಕೆಯಾದ ಹಿಂದಿನ ಪರಿಶ್ರಮದ ಪ್ರಯತ್ನವಿದೆ ಇವರು ಮೂಲತ ದಾವಣಗೆರೆ ಮೂಲದ ಸಾಮಾನ್ಯ ಕುಟುಂಬದಲ್ಲಿ‌ ಬೆಳೆದು ಬಂದ ಶ್ರೀಯುತ ರಾಕೇಶ್ ಅಪ್ಪಟ ಎಸ್ ಎಸ್ ಕುಟುಂಬದ ಅಬಿಮಾನಿಯಾಗಿ ಕಳೆದ 15 ವರ್ಷಗಳ ಹಿಂದೆಯೆ ದೊಡ್ಡಮನೆ ಎಂದರೆ ಎಲ್ಲಿಲ್ಲದ ಪ್ರೀತಿ ಅಬಿಮಾನ ಅಷ್ಟೆ ಅಲ್ಲದೆ ಕಾಂಗ್ರೇಸ್ ಪಕ್ಷ ಎಂದರೆ ಪ್ರಾಣ ದೇಶಕ್ಕೆ ತನ್ನದೆಯಾದ ಕೊಡುಗೆ ನೀಡಿದ ಕಾಂಗ್ರೇಸ್ ಪಕ್ಷದ ಬಗ್ಗೆ ಸುದೀರ್ಘ ಮಾತನಾಡಬಲ್ಲ ವಾಕ್ ಚಾತುರ್ಯ ಹೊಂದಿರುವ ಈ ಸಾಮಾನ್ಯ ನಾಯಕನಾಗಿ ಕಾಂಗ್ರೇಸ್ ಪಾಳಯದಲ್ಲಿ‌ ಗುರುತಿಸಿಕೊಂಡ ಹುಡುಗ ರಾಕೇಶ್ ಗೆ ಎಂದರೆ ಒಬ್ಬ ಸಂಘಟನೆ ಚತುರ ವಿದ್ಯಾರ್ಥಿ ದಿಸೆಯಿಂದಲೆ ನಾಯಕತ್ವ ಗುಣ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಕಾರ್ಜನ್ ರವರು ಗುರುತಿಸಿ ಇದೀಗ ಕಾನೂನಿನ ವಿಭಾಗದಲ್ಲಿ ಜವಾಬ್ದರಿ ಸ್ಥಾನವನ್ನ ನೀಡಿ ಪಕ್ಷ ಸಂಘಟನೆಗೆ ಶ್ರಮಿಸುವಂತೆ ಆದೇಶಿಸಿದರ ಪ್ರತಿಫಲವಾಗಿ ಇದೀಗ ನೂತನ ಅದ್ಯಕ್ಷರಾಗಿ ಆಯ್ಕೆ ಮಾಡಿರುವುದು ಭವಿಷ್ಯಕ್ಕೆ ಮುನ್ನುಡಿಯಾಗಿದೆ .

. ಸ್ಥಳೀಯ ಜಿಲ್ಲಾ ಉಸ್ತುವಾರಿ ಸಚಿವರು ಕೃಪಾ ಕಟಾಕ್ಷದಿಂದ ಹಾಗೂ ಸಂಸದರಾದ ಡಾ.ಪ್ರಭಾಮಲ್ಲಿಕಾರ್ಜನರವರ ಆದೇಶದ ಮೇರೆಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ಲೀಗಲ್ ಸೆಲ್ ರಾಷ್ಟ್ರೀಯ ಅಧ್ಯಕ್ಷ, ಎ.ಐ.ಸಿ.ಸಿ ಸದಸ್ಯ ರೂಪೇಶ್ ಎಸ್.ಬಡೌರಿಯಾರವರು ರಾಕೇಶನನ್ನ ಅಯ್ಕೆ ಮಾಡಿ ಆದೇಶಸಿರುವುದು ನಿಜಕ್ಕೂ ಕೂಡ ಶ್ಲಾಘನೀಯವಾಗಿದೆ…..

. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಶ್ರೀಧರ್ ಎಂ.ಎಂ ಹಾಗೂ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ ಎಚ್.ಎಸ್. ಅವರು ನೇಮಕ ಮಾಡಿ ಆದೇಶಸಿದರ ಪ್ರತಿಫಲವಾಗಿ ಉತ್ತಮ ಕಾರ್ಯವೈಕರಿಗಳ ಬಗ್ಗೆ ದಾವಣಗೆರೆ ಜಿಲ್ಲೆಯಲ್ಲಿ ಯುವ ನಾಯಕನ ಸದ್ದು ಜೋರಾಗಿದೆ..

ಒಟ್ಟಾರೆ ಆಯ್ಕೆಯಾದ ಸ್ಥಾನಕ್ಕೆ ಗೌರವ ತಂದುಕೊಡುವ ನಿಟ್ಟಿನಲ್ಲಿ ಸದಾ ಅಸನ್ಮಖಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಶ್ರೀಯುತ ರಾಕೇಶರವರು ನಮ್ಮ ಶುಕ್ರದೆಸೆ ನ್ಯೂಸ್ ಮೀಡಿಯಾದೊಂದಿಗೆ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್.ಮಲ್ಲಿಕಾರ್ಜುನ ಸಾಹೇಬರು ಮತ್ತು, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನರವರ ಸಹಕಾರದಿಂದ ಸಿಕ್ಕಿರುವ ಆವಕಾಶವನ್ನ ಸದುಪಯೋಗಪಡಿಸಿಕೊಂಡು ಕಾಂಗ್ರೇಸ್ ಪಕ್ಷದಲ್ಲಿ ಸೇವೆ ಮಾಡಲು ಸದಾ ಸಿದ್ದನಿರುವೆ ಎಂದು ಸ್ಮರಿಸಿದರು ಮತ್ತು ರಾಜ್ಯದ ಯುವಘಟಕದ ಮಾಜಿ ರಾಜ್ಯಾಧ್ಯಕ್ಷರಾದ ರಕ್ಷಾ ರಾಮಯ್ಯ, ರಾಜ್ಯ ಕಾರ್ಯದರ್ಶಿ ತಾಯಿರ್, ಮುಖಂಡರಾದ ಶ್ರೀನಿವಾಸ್ ಶಿವಗಂಗಾ, ಬುದಳ್ ಬಾಬು, ಶಂಭು ಎಸ್ ಊರೇಕೊಂಡಿ, ಸಾಗರ್ LMH, ರಾಘವೇಂದ್ರ ಗೌಡ, ಶಾಮನೂರು ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವರುಣ್ ಬೆಣ್ಣೆಹಳ್ಳಿ ಹಾಗೂ ಮುಂಚೂಣಿ ಘಟಕದ ಕಾಂಗ್ರೆಸ್ ಹಿರಿಯ ನಾಯಕರಿಗೆ ನೂತನ ಜಿಲ್ಲಾಧ್ಯಕ್ಷ ರಾಕೇಶ್ ಡಿ.ಸಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ

Leave a Reply

Your email address will not be published. Required fields are marked *

You missed

error: Content is protected !!