ದಿನಾಂಕ 11/10/2025 ರಂದು ದಾವಣಗೆರೆಯ ಅನುಭವ ಮಂಟಪ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಖೋ ಖೋ ಪಂದ್ಯವಳಿಯಲ್ಲಿ
ಸೊಕ್ಕೆ ಪ್ರಾಥಮಿಕ ಶಾಲೆಗೆ ಜಿಲ್ಲಾಮಟ್ಟದ ಖೋ ಖೋ ಪ್ರಶಸ್ತಿ
ಸೊಕ್ಕೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು, 2025-26 ನೇ ಸಾಲಿನ 14 ವರ್ಷದೊಳಗಿನ ಬಾಲಕರ ವಿಭಾಗದ ಜಿಲ್ಲಾಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಜಯಶಾಲಿಯಾಗಿ ಹೊರಹೊಮ್ಮಿದೆ.
ಪಂದ್ಯದಲ್ಲಿ ಶಾಲೆಯ ಆಟಗಾರರು ಅತ್ಯುತ್ತಮ ತಂಡಭಾವನೆಯೊಂದಿಗೆ ಆಡಿದ್ದು, ತೀವ್ರ ಸ್ಪರ್ಧೆಯಲ್ಲಿ ತಮ್ಮ ಕೌಶಲ್ಯವನ್ನು ಚಮತ್ಕಾರವಾಗಿ ಪ್ರದರ್ಶಿಸಿದರು. ಕೊನೆಯ ಪಂದ್ಯದಲ್ಲಿ ಬಲಿಷ್ಠ ಚನ್ನಗಿರಿ ತಂಡದ ವಿರುದ್ಧ ಉತ್ತಮ ರಕ್ಷಣಾ ಮತ್ತು ದಾಳಿಯಾಟದಿಂದ ಜಯ ಸಾಧಿಸಿದರು.
ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಹಾಗೂ ಊರಿನ ಹಿರಿಯ ಆಟಗಾರರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದು, ಅವರ ಸತತ ಅಭ್ಯಾಸ ಮತ್ತು ಶ್ರಮ ಫಲವತ್ತಾಗಿದೆ.
ಇದು ಶಾಲೆಯ ಹೆಮ್ಮೆಯ ಕ್ಷಣವಾಗಿದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವಂತಹ ಸಾಧನೆವಾಗಿದೆ.
ಇದೆ ತಿಂಗಳು 16.17/10/25 ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿಭಾಗ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಸಹ ಗೆದ್ದು ಸೊಕ್ಕೆ ಗ್ರಾಮಕ್ಕೆ ಹಾಗೂ ಜಗಳೂರು ತಾಲ್ಲೂಕು ಮತ್ತು ದಾವಣಗೆರೆ ಜಿಲ್ಲೆಗೆ ಕೀರ್ತಿ ತರಲಿ ಎಂದು ಸಮಸ್ತ ಸೊಕ್ಕೆ ಗ್ರಾಮ. ದಾವಣಗೆರೆ ಹಾಗೂ ಜಗಳೂರಿನ ಎಲ್ಲಾ ಕ್ರೀಡಾ ಅಭಿಮಾನಿಗಳ ಹಾರೈಕೆಯಾಗಿದೆ
