ಜಗಳೂರು
ಶುಕ್ರದೆಸೆ ಬ್ರೇಕಿಂಗ್ ನ್ಯೂಸ್
editor by m.rajappa vyasagondanahalli|
Shukradeshe news online news kannada news portal october 18 _10_2025 saturday
ಆಹಾರ ಸಾಮಾಗ್ರಿಗಳ ಕೊಠಡಿಗೆ ಸದಾ ಬೀಗ ಜಡಿದು ಮನೆಕಡೆಗೆ ನಿಲಯ ಪಾಲಕ ಪರಾರಿ ಶಿಕ್ಷಕ ರಾಜಕೀಯ ಪ್ರಭಾವ ಬಳಸಿ ಎರಡು ಕಡೆ ಪ್ರಭಾರ ವಾರ್ಡನ್ ಇವರಿಗಿಲ್ಲ ಕಡಿವಾಣ
ವಾರ್ಡನ್ ಹಾಸ್ಟೆಲ್ ಕಚೇರಿಯಲ್ಲಿ ನಿಯಮಿತವಾಗಿ ಲಭ್ಯವಿರಬೇಕು ಸರ್ಕಾರಿ ಪರ್ಮಾನು ನೀಯಮ ಉಲ್ಲಂಘನೆ ವಾರ್ಡನ್ ನಿಂಗಪ್ಪನಿಗಿಲ್ಲ ಕಡಿವಾಣ
ಜಗಳೂರು ಪಟ್ಟದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ವಸತಿಯುತ ಹಾಸ್ಟೆಲ್ ನಲ್ಲಿ ಆಹಾರ ಸಾಮಾಗ್ರಿಗಳ ಕೊಠಡಿಗೆ ಸದಾ ಬೀಗ ಜಡಿಯಲಾಗಿದೆ .ಅಡುಗೆ ಸಹಾಯಕರನ್ನ ಪ್ರಶ್ನೇಸಿದರೆ ವಾರ್ಡನ್ ಬಳಿ ಬೀಗ ಇದೆ ಬರುತ್ತಾರೆ ಎಂದು ದಿನಂಪ್ರತಿ ಸುಳ್ಳು ಹೇಳುತ್ತಾರೆ ಏಕೆಂದರೆ ರೇಷನ್ ಕೊಠಡಿಯಲ್ಲಿ ನಿತ್ಯ ಅಡುಗೆಗೆ ಬಳಸಬೇಕಾದ ಆಹಾರ ಸಾಮಾಗ್ರಿಗಳು ತರಕಾರಿ .ಎಣ್ಣೆ .ದುನಸಿ ಬ್ಯಾಳೆ.ಬೆಲ್ಲ.ಇನ್ನಿತರೆ ಸಾಮಾಗ್ರಿಗಳ ಶೇಖರಣೆ ಮಾಡಬೇಕು ಆದರೆ ಯಾವುದೇ ಆಹಾರ ಪರಿಪೂರ್ಣವಾಗಿ ಇರುವುದಿಲ್ಲ ಅದಕ್ಕೆ ಇವರ ಹೇಳುವ ಉತ್ತರ ವಾರ್ಡನ್ ರೇಷನ್ ರೂಮ್ ಬೀಗ ತೆಗೆದುಕೊಂಡು ಹೋಗಿದ್ದಾರೆ ಎಂದು ಸಬೂಬು ಹೇಳಿ ನುಣುಚಿಕೊಳ್ಳುವ ಚಾಲಾಕಿ ಅಡುಗೆ ಸಹಾಯಕ ನಿಂಗರಾಜು ಮತ್ತು ವಾರ್ಡನ್ ನಿಂಗಪ್ಪರವರ ನವರಂಗಿ ಆಟಕ್ಕೆ ಕಡಿವಾಣ ಯಾವಾಗ?
ವಸತಿ ನಿಲಯದಲ್ಲಿ ಬಯೋಮೆಟ್ರಿಕ್ ದುರ್ಬಳಕೆ
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದರು ಹೆಚ್ಚುವರಿ ಬಯೋಮೆಟ್ರಿಕ್ ತಂಬು ತೋರಿಸಿ ನಕಲಿ ಬಿಲ್ ಸೃಷ್ಟಿಸಿ ಪ್ರತಿ ತಿಂಗಳು ಲಕ್ಷ ಲಕ್ಷ ತನ್ನ ಜೆಬಿಗಿಳಿಸಿಕೊಳ್ಳುವ ವಾರ್ಡನ್ ನಿಂಗಪ್ಪನ ಭ್ರಷ್ಟಚಾರಕ್ಕೆ ಕಡಿವಾಣ ಯಾವಾಗ ?.
ನಾವು ಆಕಸ್ಮಾತಾಗಿ ವರದಿಗಾರಿಕೆಗಾಗಿ ಹಾಸ್ಟೆಲ್ ಗೆ ಪ್ರವೇಶಿಸಿದಾಗ ಇವರ ನಿಜ ಬಣ್ಣ ಬಯಲಾಗಿದೆ ಒಬ್ಬರ ಮೇಲೊಬ್ಬರು ಹೇಳುವ ಐನಾತಿ ಬುದ್ದಿ ಕಲಿತಿರುವ ಚಾಲಾಕಿ ವಾರ್ಡನ್ ನಿಂಗಪ್ಪನನ್ನ ಹಾಗು ಅಡುಗೆ ಸಹಾಯಕ ನಿಂಗಪ್ಪನ ನಾವೇ ಸುಪ್ರೀಮ್ ಎಂದು ಬೀಗುವರು ಇವರಿಗಿಲ್ಲ ಸರ್ಕಾರದ ಪರ್ಮಾನು ಈ ಕೂಡಲೆ ಇಂತ ನವರಂಗಿ ಆಟ ಆಡುವ ವಾರ್ಡನ್ ನಿಂಗಪ್ಪನನ್ನ ಎತ್ತಂಗಡಿ ಮಾಡಿ ಯಾವಾಗ? ಎಂದು ಮಕ್ಕಳ ಪೋಷಕರು ಮೇಲಾಧಿಕಾರಿಗಳನ್ನ ಪ್ರಶ್ನೇಸಿದ್ದಾರೆ. ಏಕೆಂದರೆ ಸರ್ಕಾರದ ನೀಯಮಗಳನ್ನೆ ಗಾಳಿಗೆ ತೂರಿ ಇವರ ಕರ್ತವ್ಯಲೋಪಕ್ಕೆ ಹಿಡಿದ ಕೈಗನ್ನಡಿಯಂತೆ ಕಂಡು ಬಂದರು ದಪ್ಪ ಚರ್ಮದ ಮೇಲಾಧಿಕಾರಿ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಪ್ರತಿ ವಿದ್ಯಾರ್ಥಿಗೆ 1850 ರೂ ಗಳನ್ನು ಹಣ ಬರುತ್ತಿದ್ದು ಇದು ಪ್ರತಿ ವಿದ್ಯಾರ್ಥಿಗೆ ಸಮರ್ಪಕವಾಗಿ ಬಳಕೆಯಾಗಬೇಕು ಆದರೆ ಸರಿಯಾದ ರೀತಿ ಬಳಕೆಯಾಗದೆ ವಿದ್ಯಾರ್ಥಿಗಳ ಅನ್ನ ಕಿತ್ತುಕೊಂಡು ಹಣದಂಧೆಗೆ ನಿಂತಿರುವ ವಾರ್ಡನ್ ಲಕ್ಷ ಲಕ್ಷ ವಂಚನೆ ದುರುಪಯೋಗದ ಹಿಂದಿರುವ ಕರಾಳ ಸತ್ಯ ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿಯುವುದು ಯಾರಿಗೆ ಗೊತ್ತೆ ಇಲ್ಲ ಎಂದು ತಿಳಿದುಕೊಂಡಿದ್ದಾನೆ .
ಒಟ್ಟಾರೆ ನಿಲಯ ಪಾಲಕ ನಿತ್ಯ ಇಲ್ಲಿ ತಂಗಬೇಕು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ವಂದಿಸಬೇಕು ಎಂಬ ನೀಮಿತವೇ ಇಲ್ಲಿ ಉಲ್ಲಂಘನೆಯಾದರು ಹೇಳುವವರಿಲ್ಲ ಕೇಳುವವರಿಲ್ಲ ಇಂತ ವಾರ್ಡನ್ ಹಾಸ್ಟೆಲ್ ನಿರ್ವಹಣೆ ಮಾಡುವಲ್ಲಿ ವಿಫಲರಾಗಿ ಕಳಪೆ ಮಟ್ಟದ ಅಹಾರ ವಿತರಿಸುವ ವಾರ್ಡನ್ ಸ್ಥಳೀಯವಾಗಿಯೆ ಇರದೇ ಸರ್ಕಾರಿ ಪರ್ಮಾನು ನೀಯಮ ಉಲ್ಲಂಘನೆ ಮಾಡುವ ವಾರ್ಡನ್ ನಿಂಗಪ್ಪನಿಗೆ ಕರ್ತಲೋಪ ಕ್ರಮ ಜರುಗಿಸುವಂತೆ ಮಕ್ಕಳ ಪೋಷಕರ ಆಗ್ರಹವಾಗಿದೆ.
