editor by m.rajappa vyasagondanahalli

Shukradeshe news online portal |online news Kannada shukradeshe news october 18_10_2025 Saturday published on october

ಸಿಪಿಐ ಪಕ್ಷ ಜನಪರ ಆಡಳಿತ,ಹೋರಾಟ ನಡೆಸಿ ಶತಮಾನ ಪೂರೈಸಿದೆ:ಕಾಂ.ಆವರಗೆರೆ ಚಂದ್ರು
ದಾ.ನಗರವಾಣಿ ಸುದ್ದಿ,
ಜಗಳೂರು,ಅ.18:ದೇಶದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಜನಪರ ಆಡಳಿತ,ಹೋರಾಟ ನಡೆಸುತ್ತಾ ಶತಮಾನ ಪೂರೈಸಿದೆ ಎಂದು ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಂ.ಆವರಗೆರೆ ಚಂದ್ರು ಹೇಳಿದರು.

ಶನಿವಾರ ಪಟ್ಟಣದ ಪ್ರೇರಣಾ ಚರ್ಚ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಿಪಿಐ ಪಕ್ಷದ 6 ನೇ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಬಿಜೆಪಿ ಪಕ್ಷದ ಪ್ರಧಾನಿ ಮೋದಿ ಅವರ ಆಡಳಿತ ರೂಢ ಸರಕಾರ ಅಧಿಕಾರಕ್ಕೂ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ ಕಪ್ಪುಹಣ ತರುತ್ತೇವೆ,ಭ್ರಷ್ಟಾಚಾರ ರಾಷ್ಟ್ರ ನಿರ್ಮಾಣಮಾಡುತ್ತೇವೆ,ಪ್ರತಿವರ್ಷ 2ಕೋಟಿ ಉದ್ಯೋಗ ಸೃಷ್ಟಿಯ ಭರವಸೆಗಳು ಹುಸಿಯಾಗಿವೆ.ಧರ್ಮ,ಜಾತಿ ಆಧಾರಿತ,ದ್ವೇಷದ ರಾಜಕಾರಣ ನಡೆಸುವ ಮೂಲಕ ಸಂವಿಧಾನದ ಆಶಯಗಳನ್ನು ದಿಕ್ಕರಿಸುತ್ತಿದೆ ಎಂದು ಆರೋಪಿಸಿದರು.

ದೇಶದಲ್ಲಿ ಬಂಡವಾಳಶಾಹಿ ಪರ ಆರ್ಥಿಕ‌ನೀತಿಗಳನ್ನು ರೂಪಿಸುತ್ತಿದ್ದು.ದಿನನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿಸುವ ಮೂಲಕ ಬಡವರ ಬದುಕು ದುಸ್ತರವಾಗುತ್ತಿದೆ.ಶ್ರೀಮಂತ-ಬಡವರ ಮಧ್ಯೆ ಆರ್ಥಿಕಮಟ್ಟದ ಅಂತರ ಹೆಚ್ಚಳ ವಾಗುತ್ತಿದೆ.ಶ್ರೀಮಂತರು ಶೇ.70 ರಷ್ಟು ಸಂಪತ್ತು ಹೊಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಪಿಐ ಪಕ್ಷದ ಜಿಲ್ಲಾ ಸಹಕಾರ್ಯದರ್ಶಿ ಕಾಂ.ಆವರಗೆರೆ ಉಮೇಶ್ ಮಾತನಾಡಿ,ದೇಶದಲ್ಲಿ ಎಸ್ ಸಿ ಎಸ್ ಟಿ,ಅಲ್ಪಸಂಖ್ಯಾತರ ಹೆಣಬೀಳಿಸುವ ರಾಜಕಾರಣ ಬಿಜೆಪಿ ಪಕ್ಷದ್ದಾದರೆ,ಹೋರಾಟದ ಮೂಲಕ ಶೋಷಿತರ,ಬಡವರ್ಗದವರ ಆರ್ಥಿಕ ಸಬಲೀಕರಣ,ಬದುಕು ಕಟ್ಟಿಕೊಡುವ ಪಕ್ಷ ಕಮ್ಯುನಿಸ್ಟ್ ಪಕ್ಷದ್ದಾಗಿದೆ.ಕುಟುಂಬರಾಜಕಾರಣದಲ್ಲಿ ಕಾಂಗ್ರೆಸ್,ಬಿಜೆಪಿ ಸಮಪಾಲು ಹೊಂದಿವೆ ಸಂಘಪರಿವಾರದ ಕಪಿಮುಷ್ಟಿಯಲ್ಲಿರುವ ಪ್ರಧಾನಿ ಮೋದಿ ಕುರ್ಚಿಗೆ ಅಂಟಿಕುಳಿತು ದೇಶದಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿಯಾಗಿದೆ ಎಂದು ಕಿಡಿಕಾರಿದರು.

ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ,ದೌರ್ಜನ್ಯ,ಕೊಲೆಗಳು ಮಿತಿಮೀರುತ್ತಿವೆ.ಸೌಜನ್ಯ ಪ್ರಕರಣಕ್ಕೆ ನ್ಯಾಯ ಎಲ್ಲಿದೆ.ಭೇಟಿ ಪಡಾವೋ,ಭೇಟಿ ಬಚಾವೋ,ಸಬ್ ಕಾ ಸಾಥ್,ಸಬ್ ಕಾ ವಿಕಾಸ್ ಘೋಷಣೆಗಳು ನೆಪಮಾತ್ರಕ್ಕೆ ಎಂದರು.

ಅಂಗನವಾಡಿ,ಬಿಸಿಯೂಟ ಕಾರ್ಯಕರ್ತೆಯರಿಗೆ ಕನಿಷ್ಠ ರೂ.15000 ವೇತನ ಜಾರಿಗೊಳಿಸಬೇಕು.ಆರ್ಥಿಕ,ಸಾಮಾಜಿಕ ಭದ್ರತೆ ಒದಗಿಸಬೇಕು.ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರು ನೀಡಿದ 6 ನೇ ಗ್ಯಾರಂಟಿ ಯೋಜನೆ ಹುಸಿಯಾಗಿದೆ.ಬಡವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪರ ಆಡಳಿತಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ನೂತನವಾಗಿ ಆಯ್ಕೆಗೊಂಡ ಸಿಪಿಐ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್,ಸಂವಿಧಾನದಡಿಯಲ್ಲಿ ಸಾಗುತ್ತಿರುವ ಪಕ್ಷಕ್ಕೆ ಅಧಿಕ ಸಂಖ್ಯೆಯಲ್ಲಿ ಬೆಂಬಲಿಸಿ ಸಮಾಜದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಬೇಕು.ಫ್ಯಾಸಿಸಂ ಹಿಮ್ಮೆಟ್ಟಿಸಿ ಬಂಡವಾಳಶಾಹಿ ವ್ಯವಸ್ಥೆಗೆ ಮುಕ್ತಿನೀಡಬೇಕಿದೆ.ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲು,ಕಾರ್ಮಿಕರ ಹಿತಕ್ಕಾಗಿ ಸಂಘಟಿತ ಹೋರಾಟ ಅನಿವಾರ್ಯ ಎಂದು ಕರೆ ನೀಡಿದರು.


ಸಮ್ಮೇಳನದ ತೀರ್ಮಾನಗಳು:
*ಜಗಳೂರಿನಲ್ಲಿ ಕೈಗಾರಿಕೆ ಸ್ಥಾಪನೆಯಾಗಬೇಕು.
*ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗೊಳಿಸಬೇಕು.
*ಸರ್ಕಾರಿ ಶಾಲೆ,ಸರ್ಕಾರಿ ಆಸ್ಪತ್ರೆ ಉನ್ನತೀಕರಿಸಬೇಕು.
*ತಾಲ್ಲೂಕಿನಲ್ಲಿ ಸಮಗ್ರ ನೀರಾವರಿ ಜಾರಿಯಾಗಬೇಕು.

ಇದೇ ವೇಳೆ ಸಮ್ಮೇಳನದ ಮೆರವಣಿಗೆ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟು,ಪ್ರಮುಖ ಬೀದಿಗಳ ಮೂಲಕ ಅಂಬೇಡ್ಕರ್ ವೃತ್ತ ತಲುಪಿ ಬಹಿರಂಗ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಫಾದರ್ ರೊನಾಲ್ಡ್ ಫುಟರ್ಡೋ,ನಿರ್ಮಲ ನರ್ಸಿಂಗ್ ಹೋಂ ನ ನಿಂಗಪ್ಪ,ಕಟ್ಟಡ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಲಕ್ಷ್ಮಣ,ತಾಲ್ಲೂಕು ಕಾರ್ಯದರ್ಶಿ ತಿಪ್ಪೇಸ್ವಾಮಿ, ಎಐವೈಫ್ ಜಿಲ್ಲಾಧ್ಯಕ್ಷ ರಾಜುಕೆರನಹಳ್ಳಿ,ಕಾರ್ಯದರ್ಶಿ ತಿಪ್ಪೇಶ್,ಎಐಡಿಎಂ ಆರ್ ನ ರಂಗನಾಥ್,ಎನ್ ಎಫ್ ಐ ಡಬ್ಲ್ಯೂನ ಸರೋಜಮ್ಮ,ಮುಖಂಡರಾದ ಹಾಲಮ್ಮ,ಶಿಲ್ಪ,ವಿಮಲಾ, ವನಜಾಕ್ಷಿ,ಮಂಜುಳಾ ಗೌರಮ್ಮ,ಪುಷ್ಪ,ಶೃತಿ,ಗಿರಿಜಮ್ಮ,ನಾಗರತ್ನಮ್ಮ,ಬಸವಣ್ಯಮ್ಮ,ಜಯ್ಯಮ್ಮ,ಲೀಲಾವತಿ,ನಾರಮ್ಮ,ಬೊಮ್ಮಕ್ಕ,ಭಾರತಮ್ಮ,ಕರಿಬಸಮ್ಮ,ಗೀತಮ್ಮ,ಶೇಖರ್ ನಾಯ್ಕ,ಅವಿನಾಶ್ ಮಾಕುಂಟೆ,ವೆಂಕಟೇಶ್,ಐರಾಣಿ ಚಂದ್ರು,ಬಡಪ್ಪ,ಹರೀಶ್,ಯರಗುಂಟೆ ಸುರೇಶ್,ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!