ಜಗಳೂರು ‌ತಾಲ್ಲೂಕಿನ
ಕ್ಯಾಸೆನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌರಿಪುರ ಹೊಸೂರು ಗ್ರಾಮದಲ್ಲಿ ಸುಮಾರು 300ಕ್ಕೂ ಹೆಚ್ಚು ಮತಗಳನ್ನು ಹೊಂದಿ 100 ಕ್ಕೂ ಹೆಚ್ಚು ಕುಟುಂಬದ ಮನೆಗಳಿರುತ್ತವೆ ಇಲ್ಲಿ ವಾಸಿಸುವಂತ ನಿವಾಸಿಗಳಿಗೆ ಮನೆಗಳಿಲ್ಲದೆ ನಿರ್ಗತಿಕರು ಕೂಲಿ ಕೆಲಸ ಮಾಡಿ ಜೀವನ ನಡೆಸುವಂತಹ ಬಡ ದಲಿತ ಕುಟುಂಬಗಳು ಹೆಚ್ಚಾಗಿ ಕಂಡುಬರುತ್ತವೆ ಇಲ್ಲಿ ಸುಮಾರು 20 ವರ್ಷಗಳಿಂದ ಜೀವನ ನಡೆಸುತ್ತಾ ಬಂದಿರುವ ಮನೆಗಳಿಗೆ ಸರ್ಕಾರ ಮಾಲಿಕರ ಒಡೆತನದ ಸಂಬಂಧಿಸಿದ ಗ್ರಾಪಂ ಹಾಗೂ ತಾಪಂ ಇಲಾಖೆ ಹಕ್ಕು ಪತ್ರ ನೀಡದೆ ನಿರ್ಲಕ್ಷ್ಯ ವಹಿಸಿದೆ. ಸುಮಾರು ಬಾರಿ ತಾಪಂ ಇಓ ಚಂದ್ರಶೇಖರ್ ರವರಿಗೆ ಮನವಿ ಮಾಡಿದರು ಬೇಜವಾಬ್ದರಿತನದ ಹೇಳಿಕೆ ನೀಡುತಾ ನಮಗೆ ನಿವಾಸಿಗರಿಗೆ ಹಕ್ಕು ಪತ್ರವನ್ನು ನೀಡಿರುವುದಿಲ್ಲ
ಎಷ್ಟೋ ಬಾರಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿಗಳಿಗೆ, ತಾಲೂಕು ಆಡಳಿತಕ್ಕೆ, ಜನಪ್ರತಿನಿಧಿಗಳಿಗೆ ಸುಮಾರು ಬಾರಿ ಮನವಿ ಸಲ್ಲಿಸಿದರು ಕೂಡ ಈ ಗ್ರಾಮದ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ಅಧಿಕಾರಿಗಳು ಬಂದಿಲ್ಲ ಗೌರಿಪುರ ಹೊಸೂರು ಜಗಳೂರು ತಾಲೂಕಿನಲ್ಲಿ ಇಲ್ಲದ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡುತ್ತಿಲ್ಲ ಆದ್ದರಿಂದ ಗೌರಿಪುರ ಹೊಸೂರು ಗ್ರಾಮದ ಎಲ್ಲಾ ಜಾತಿ ಜನಾಂಗದ ಮತ್ತು ಸಮುದಾಯದ ಜನರು ಬರುವ ಮೆ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡುತಿದ್ದೇವೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಾಸವಿರುವ ಮನೆಗಳಿಗೆ ಹಕ್ಕುಪತ್ರ ನೀಡಿ ನಮ್ಮ ಸಮಸ್ಯೆಯನ್ನು ಬಗೆಯರಿಸುವವರೆ ಗೂ 2023ರ ವಿಧಾನಸಭಾ ಚುನಾವಣೆಯನ್ನು ಗೌರಿಪುರ ಹೊಸೂರಿನಲ್ಲಿ ಮತದಾನವನ್ನ ಬಹಿಷ್ಕರಿಸುತ್ತೇವೆ ಎಂದು ಗ್ರಾಮದ ವಿಧ್ಯಾರ್ಥಿ ಸಂಘಟನೆ ಮುಖಂಡ ಗೌರಿಪುರದ ಮೈಲೇಶ್ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸತೀಶ ಗೌರಿಪುರ.ಗ್ರಾಮದ ಯುವ ಮುಖಂಡರುಗಳಾದ ಹನುಮಂತ್ ರಾಜ, ನರೇಶ, ನಿರಂಜನ ಪ್ರಕಾಶ ಶ್ರೀಧರ ನಾಗರಾಜ ಹನುಮಂತಪ್ಪ ಪಾಪಮ್ಮ ಪಾಲಮ್ಮ, ಬಸವರಾಜಪ್ಪ, ಅಜ್ಜಯ್ಯ ಗಂಗಮ್ಮ ಗೌರಿಪುರ ಹೊಸೂರಿನ ಊರಿನ ಮುಖಂಡರುಗಳು ಸೇರಿದಂತೆ ಇದ್ದರು

Leave a Reply

Your email address will not be published. Required fields are marked *

You missed

error: Content is protected !!