ಜಗಳೂರಿನಲ್ಲಿ ಆರ್‍ಎಸ್‍.ಎಸ್ ಗಣವೇಶಧಾರಿಗಳ ಪಥ ಸಂಚಲನಕ್ಕೆ ಸಾಕ್ಷಿ..
ಜಗಳೂರು ಸುದ್ದಿ,
ಜಗಳೂರು,ಅ.19:ಪಟ್ಟಣದ ಮಾರಿಕಾಂಭ ದೇವಸ್ಥಾನದಿಂದ ಹೊರಟು,ಭುವನೇಶ್ವರಿ ವೃತ್ತ,ರಾಮಾಲಯ ರಸ್ತೆ ,ಅಂಬೇಡ್ಕರ್ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‍ಎಸ್‍ಎಸ್) ಶತಮಾನೋತ್ಸವದ ಪ್ರಯುಕ್ತ ಪಟ್ಟಣದಲ್ಲಿ ನೂರಾರು ಕಾರ್ಯಕರ್ತರು ಗಣವೇಶಧಾರಿಗಳಾಗಿ ಸಂಘದ ಶತಾಬ್ಧಿ ಪಥ ಸಂಚಲನ ಯಶಸ್ವಿಯಾಗಿ ನೆರವೇರಿ ನಂತರ ಬಯಲುರಂಗಮಂದಿರದಲ್ಲಿ ವೇದಿಕೆ ಯ ಸಮಾರೋಪ ಕಾರ್ಯಕ್ರಮ ನಡೆಸಲಾಯಿತು.

ಆರ್‍ಎಸ್‍ಎಸ್ ಸಹಕಾರ್ಯವಾಹ ಶಿವಮೊಗ್ಗದ ಮಧುಕರ್ ಜೀ ಮಾತನಾಡಿ,ದೇಶದಲ್ಲಿ ಸಂಘ ಕಟ್ಟಿ ಬೆಳೆಸಿದ ಹಿಂದುತ್ವದ ತಾತ್ವಿಕತೆಯಿಂದ ಪ್ರಭಾವಿತರಾಗಿದ್ದ ಕೇಶವ ಬಲಿರಾಮ ಹೆಡ್ಗೇವಾರ್ 1925 ಸೆ.27 ರಂದು ವಿಜಯದಶಮಿ ದಿನದಂದು ಮಹಾರಾಷ್ಟ್ರದ ನಾಗ್ಪರದಲ್ಲಿ ಆರ್‍ಎಸ್‍ಎಸ್ ಸ್ಥಾಪಿಸಿದರು.ನಮ್ಮದು ಸಾಂಸ್ಕೃತಿಕ ಸಂಘಟನೆಯಾಗಿದೆ. ಹಿಂದೂ ಸಂಸ್ಕøತಿ, ಹಿಂದೂ ಒಗ್ಗಟ್ಟು ಮತ್ತು ರಾಷ್ಟ್ರಿ ಸ್ವಾವಲಂಬನೆ ಸಾಧಿಸುವುದು ನಮ್ಮ ಆಶಯ ಎಂದು ಪ್ರತಿಪಾದಿಸಿದರು.

ಡಿ.7 ರಿಂದ 28ರವರೆಗೂ ಎಲ್ಲರ ಮನೆ ಮನಗಳನ್ನು ನಮ್ಮ ಸಂಘದ ಸ್ವಯಂ ಸೇವಕರು ತಲುಪಬೇಕು. ಜೊತೆಗೆ ಜ.18 ರಿಂದ ಫೆ.11, 2026ರಂದು ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಆರ್‍ಎಸ್‍ಎಸ್ ದೇಶದ ಬಹುತೇಕ ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಸಂಘದ ಸದಸ್ಯರಿಗೆ ನಿಗದಿತವಾಗಿ ಸಯಂ ರಕ್ಷಣೆ ಸೇರಿದಂತೆ ವಿವಿಧ ರೀತಿಯ ತರಬೇತಿ, ಸೈದ್ಧಾಂತಿಕ ಶಿಕ್ಷಣ ನೀಡಲಾಗುತ್ತಿದೆ. ದೇಶದಲ್ಲಿ ಒಟ್ಟು 83 ಸಾವಿರಕ್ಕೂ ಹೆಚ್ಚು ಶಾಖೆಗಳಿವೆ.ತಳಮಟ್ಟದಲ್ಲಿ ಸಂಘಕ್ಕೆ ಇರುವ ಸಂಪರ್ಕಗಳೇ ಬಿಜೆಪಿ ಪಕ್ಷ, ವಿಎಚ್‍ಪಿ, ಣಾರತೀಯ ಸ್ವದೇಶಿ ಜಾಗರಣ ಮಂಚ್, ಭಜರಂಗದಳ, ಭಾರತೀಯ ಕಿಸಾನ್ ಸಂಘಗಳಾಗಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದರು.

ಇದೇ ವೇಳೆ ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ,ಹೆಚ್.ಪಿ.ರಾಜೇಶ್,ಬಿಜೆಪಿ ಮಂಡಲ ಅಧ್ಯಕ್ಷ ಎ.ಎಂ ಮರುಳಾರಾಧ್ಯ,ಕೃಷ್ಣಮೂರ್ತಿ,ಬಿಸ್ತುವಳ್ಳಿ ಬಾಬು,ಸೇರಿದಂತೆ ಪಥಸಂಚಲನದ ನೇತೃತ್ವ ವಹಿಸಿದ್ದರು.

ಗಣವೇಶಧಾರಿಗಳು ಪಟ್ಟಣದ ಮಾರಮ್ಮನ ದೇವಸ್ಥಾನದ ಬಳಿ ಭಾರತ ಮಾತೆಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.ಗೋಮಾತೆಯ ಈ ಕಾರ್ಯಕ್ಕೆಸ್ವಯಂ ಸೇವಕರು ಪಾದ ಮುಟ್ಟಿ ನಮಸ್ಕರಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಪಪಂ ಸದಸ್ಯ ರೇವಣಸಿದ್ಧಪ್ಪ, ಕರಿಬಸಯ್ಯ, ಪೂರ್ವಜ್ ಎಚ್.ಪಿ.ರಾಜೇಶ್, ಸೊಕ್ಕೆ ನಾಗರಾಜ್, ಅರಿಶಿಣಗುಂಡಿ ಮರುಳಸಿದ್ದ, ಕಟ್ಟಿಗೆಹಳ್ಳಿ ಮಂಜುನಾಥ್ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!