ಇನ್ಫೋಸಿಸ್ – ಕರ್ನಾಟಕ ಮಾಧ್ಯಮ ಅಕಾಡೆಮಿಯ
ಅತ್ಯುನ್ನತ AI ತರಬೇತಿಗೆ ಮಾಲತೇಶ್ ಅರಸ್ ಆಯ್ಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಇನ್‍ಫೋಸಿಸ್ ಜೊತೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಕೈಗೊಂಡ ಮೊದಲ ಪತ್ರಕರ್ತರ ಸಾಫ್ಟ್ ಸ್ಕಿಲ್ ತರಬೇತಿಗೆ ಜೀ ಕನ್ನಡ ನ್ಯೂಸ್ ಹಿರಿಯ ವರದಿಗಾರರು ಹಾಗೂ ಈ ನಗರವಾಣಿ ಸಂಪಾದಕರಾದ ಚಿತ್ರದುರ್ಗದ ಮಾಲತೇಶ್ ಅರಸ್ ಆಯ್ಕೆಯಾಗಿದ್ದಾರೆ.

ಇನ್ಫೋಸಿಸ್ ಸಿಎಸ್‍ಆರ್ ಯೋಜನೆಯ “ಸ್ಪ್ರಿಂಗ್‍ಬೋರ್ಡ್” ಪ್ಲಾಟ್‍ಫಾರ್ಮ್ ಮೂಲಕ ಪತ್ರಕರ್ತರ ಡಿಜಿಟಲ್ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಸಾಮರ್ಥ್ಯ ನಿರ್ಮಾಣ ಈ ಒಡಂಬಡಿಕೆಯ ಉದ್ದೇಶವಾಗಿದೆ.

“ಇನ್‍ಫೋಸಿಸ್ ಸ್ಪ್ರಿಂಗ್‍ಬೋರ್ಡ್ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸಹಭಾಗಿತ್ವವು ಬದಲಾಗುತ್ತಿರುವ ಹೊಸ ಮಾಧ್ಯಮಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ವಿನೂತನ ಪ್ಲಾಟ್‍ಫಾರಂ ಮಾಧ್ಯಮ ವೃತ್ತಿಪರರ ಕೌಶಲ್ಯ ಉನ್ನತೀಕರಣಕ್ಕೆ, ಅದರಲ್ಲೂ ವಿಶೇಷವಾಗಿ ಪತ್ರಕರ್ತರಿಗೆ ವೇಗವಾಗಿ ಬದಲಾಗುತ್ತಿರುವ ಸನ್ನಿವೇಶಗಳಿಗೆ ಅನುಗುಣವಾಗಿ ತಾಂತ್ರಿಕ ಪರಿಣತಿ ಹಾಗೂ ಸುದ್ದಿಯನ್ನು ಪ್ರಸ್ತುತಪಡಿಸುವ ಕೌಶಲವನ್ನು ಒದಗಿಸಲಿದೆ” ಎಂಬ ಆಶಯವನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ ಅವರು ವ್ಯಕ್ತಪಡಿಸಿದ್ದಾರೆ.

“ಇನ್‍ಫೋಸಿಸ್ ಸ್ಪ್ರಿಂಗ್‍ಬೋರ್ಡ್ ಶಿಕ್ಷಣ ಕುರಿತ ಸಿಎಸ್‍ಆರ್ ಕಾರ್ಯಕ್ರಮವಾಗಿದೆ. ಸೆ. 8 ರಂದು ಇನ್‍ಫೋಸಿಸ್ ಸ್ಪ್ರಿಂಗ್‍ಬೋರ್ಡ್ ಮಾಧ್ಯಮ ಅಕಾಡೆಮಿಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಗಿತ್ತು. ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಸ್ಪ್ರಿಂಗ್‌ ಬೋರ್ಡ್‌ನ ಡಿಜಿಟಲ್ ವಿಷಯಗಳಿಗೆ ಪ್ರವೇಶ ಲಭಿಸಲಿದೆ ಮತ್ತು ಅವರು ಸಾಫ್ಟ್ ಸ್ಕಿಲ್ ಗಳು, ವ್ಯಕ್ತಿತ್ವ ವಿಕಾಸ ಹಾಗೂ ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಇತ್ತೀಚಿನ ತಂತ್ರಜ್ಞಾನಗಳ ಅವಲೋಕನ ಕುರಿತ ವಿಷಯಗಳಿಂದ ಪ್ರಯೋಜನ ಪಡೆಯಬಹುದು.

ತರಬೇತಿ ಇನ್‍ಫೋಸಿಸ್ ಸ್ಪ್ರಿಂಗ್‍ಬೋರ್ಡ್ ಕಾರ್ಯಕ್ರಮದಡಿ ಪತ್ರಕರ್ತರಿಗೆ ಮೂರು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ
ಇದರಲ್ಲಿ ಡಿಜಿಟಲ್ ಮಾಧ್ಯಮಕ್ಕೆ ಅಗತ್ಯ ಕೌಶಲ್ಯಗಳು, ಕೃತಕ ಬುದ್ಧಿಮತ್ತೆಯ ಬಳಕೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಾಗುವುದು ಎಂದು ಇನ್ಫೋಸಿಸ್ ನ ಹಿರಿಯ ಉಪಾಧ್ಯಕ್ಷ (ಇ ಟಿ ಎ) ಶ್ರೀ ಸತೀಶ ಬಿ. ನಂಜಪ್ಪ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ಫೋಸಿಸ್ ಸಂಸ್ಥೆಯು ಪ್ಲಾಟ್‍ಫಾರ್ಮ್ ಮತ್ತು ಪರಿಣತಿ ಒದಗಿಸಲಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗುಣಮಟ್ಟದ ಸುಧಾರಣೆಯ ನಿಟ್ಟಿನಲ್ಲಿ ಇದೊಂದು ಮಹತ್ವದ ಉಪಕ್ರಮವಾಗಿದೆ. ಹೆಚ್ಚು ಪತ್ರಕರ್ತರಿಗೆ ತರಬೇತಿ ನೀಡುವ ಆಶಯದೊಂದಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯು ಮುಂದಡಿಯಿಟ್ಟಿದೆ.
ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಸದಸ್ಯ ಹೆಚ್.ವಿ.ಕಿರಣ್, ಕಾರ್ಯದರ್ಶಿ ಎಂ.ಸಹನಾ, ಇನ್‍ಫೋಸಿಸ್ ಅಧಿಕಾರಿಗಳಾದ ಬಿ.ಸತೀಶ, ನಂಜಪ್ಪ, ಸಂತೋಷ್ ಅನಂತಪುರ, ಬಿಳಿಗಿರಿ ರಂಗ ಮೊದಲಾದವರು ಉಪಸ್ಥಿತರಿದ್ದರು.
🙏🌹🌺 ಗಂಡು ಮೆಟ್ಟಿನ ನೆಲ ಹರ್ತಿ ಕೋಟೆಯ ರೈತಾಪಿ, ಕುರಿಗಾರ ಕುಡಿ
ಅದ್ಬುತ ವಿಷಯದರಿತ ಬುದ್ದಿ ಜೀವಿ
ಬುಡಕಟ್ಟು ಜನರ ಬಗ್ಗೆ ಆಳ ಅಧ್ಯಯನ,
ನೆಲ, ಮೂಲ ಸಂಸ್ಕೃತಿ ಬಗ್ಗೆ ಅತೀವ ಕಾಳಜಿ
ಹೊಂದಿರುವ ನಮ್ ಸಮಾಜದ ಸಹೋದರ
ಮಾಲತೇಶ್ ಈ ಜಗತ್ತೇ ಮೆಚ್ಚುವ ಕಾರ್ಯ ದಲ್ಲಿ
ಯಶಸ್ವಿ ಯಾಗಲಿ……. 🙏👍🌹👌🌷
** ಪುರಂದರ ಲೋಕಿಕೆರೆ..
, ಕಲಾವಿದರು, ಸಾಹಿತಿ, ರಾಜ್ಯ ಇಪ್ತಾ ಸಂಚಾಲಕರು, ವಿನಯ್ ಕುಮಾರ್ ಅಭಿಮಾನಿ ಬಳಗ, ಸ್ವಾಭಿಮಾನಿ ಬಳಗ.
ಮಾ. ಈ ಟಿವಿ ಕನ್ನಡ ಅನ್ನದಾತ. ಹಿರಿಯ ಮಾಧ್ಯಮ ರತ್ನ ಪುರಸ್ಕಾರ ಪತ್ರಕರ್ತ
* ಜಿ. ಬಿ ವಿನಯ್ ಕುಮಾರ್.
ದೇಶದ ಪ್ರತಿಷ್ಠಿತ ಐ ಎ ಎಸ್. ಇನ್ಸೈಟ್ ಸಂಸ್ಥಾಪಕ.
ಅಧ್ಯಕ್ಷರು, ರಾಜ್ಯ ಸ್ವಾಭಿಮಾನಿ ಬಳಗ.

Leave a Reply

Your email address will not be published. Required fields are marked *

You missed

error: Content is protected !!