ಮಾದಿಗರ ಅಸ್ತಿತ್ವಕ್ಕಾಗಿ ಮಾದಿಗ ಮಹಾಸಭಾ ಸಂಘಟನೆ ಅತ್ಯವಶ್ಯಕವಾಗಿದೆ ಎಂದು ದಾವಣಗೆರೆ ವಿವಿ ಸಿಂಡಿಕೆಟ್ ಸದಸ್ಯರಾದ ಹೆಚ್ ವಿಶ್ವನಾಥ ಕರೆ ನೀಡಿದರು.
ಜಗಳೂರು ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಒಳಮೀಸಲಾತಿ ಜಾರಿಯಾದ ಹಿನ್ನಲೆಯಲ್ಲಿ ಹೋರಾಟಗಾರರಿಗೆ ಸನ್ಮಾನಿಸಿ ಮುಂದಿನ ಹಾಗುಹೋಗುಗಳ ಬಗ್ಗೆ ಚರ್ಚಾ ಸಭೆಯಲ್ಲಿ ಮಾತನಾಡಿದರು.
ನೂತನ ಮಾದಿಗ ಮಹಾಸಭಾ ಅಥವಾ ಕರ್ನಾಟಕ ಮಾದಾರ ಮಹಾಸಭಾವು ಮಾದಿಗ ಸಮುದಾಯದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಬಲೀಕರಣಕ್ಕಾಗಿ ಸ್ಥಾಪಿತವಾದ ಒಂದು ಸಂಘಟನೆಯಾಗಿದೆ. ಇತ್ತೀಚೆಗೆ (ಅಕ್ಟೋಬರ್ 2025), ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಅವರು ನೂತನ ಅಧ್ಯಕ್ಷತೆಯಲ್ಲಿ ಸಂಘಟನೆ ಅಸ್ಥಿತ್ವಕ್ಕೆ ಬಂದಿದೆ.. ಈ ಸಂಘಟನೆಯು ಸಮುದಾಯದ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ಶ್ರಮಿಸುತ್ತಿದೆ. ನಮ್ಮ ಬಹುದಿನದ ಕೂಗು ಆಗಿರುವ ಒಳಮೀಸಲಾತಿಯನ್ನ ಸರ್ಕಾರ ಜಾರಿ ಮಾಡಿದೆ ಆದರೆ ನ್ಯೂನತೆಗಳನ್ನ ಸರಿಪಡಿಸಬೇಕೆಂದರು .
ಕಾಂಗ್ರೇಸ್ ಎಸ್ಸಿ ಘಟಕದ ಜಿಲ್ಲಾದ್ಯಕ್ಷ ವೀರಭದ್ರಪ್ಪ ಮಾತನಾಡಿ ಮಾದಿಗ ಮಹಾಸಭಾ ಎಂಬ ನೂತನ ಸಂಘಟನೆ ಮೂಲಕ ರಾಜ್ಯದಲ್ಲಿ ಮಾದಿಗರ ಒಗಟ್ಟಿಗಾಗಿ ಶ್ರಮಿಸಬೇಕು ಸಮಾಜದವರು ಪಕ್ಷ ಬೇದ ಮರೆತು ಕೈಜೋಡಿಸುವಂತೆ ತಿಳಿಸಿದರು ಸಮುದಾಯವು ಅತ್ಯಂತ ಶೋಷಿತ ಸಮುದಾಯಕ್ಕೆ ಒಳಮೀಸಲಿನ ಪಾಲು ಸರಿಯಾದ ಪ್ರಮಾಣ ಸಿಕ್ಕಿರುವುದಿಲ್ಲ ಅದರಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಸಿಗುವ ಮೀಸಲಾತಿ ಪ್ರಮಾಣವನ್ನ ನಮ್ಮ ಸಹೋದರ ಸಮುದಾಯದ ಪ್ರಾಬಲ್ಯ ಸಚಿವರ ಕೈವಾಡವಿದೆ ಈ ಮಿಸಲಾತಿಯಲ್ಲಿ ರಾಜಕೀಯ ಆರ್ಥಿಕ ಇನ್ನಿತರೆ ಮೀಸಲಾತಿ ಕೈಬಿಡಲಾಗಿದೆ ಕೇವಲ ಉದ್ಯೋಗದಲ್ಲಿ ಮಿಸಲಾತಿ ಯಾವ ಪುರಷರ್ಥಕ್ಕೆ ಎಂದರು.
ಕರ್ನಾಟಕ ದಲಿತ ಸಂಘಟನೆಗಳ ಒಕ್ಕೊಟದ ಜಿಲ್ಲಾ ಅದ್ಯಕ್ಷರಾದ ಬಸವರಾಜ ಮಾತನಾಡಿ ಮಾದಿಗ ಸಮಾಜದ ಬಾಂದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೋಡಿಸಲು ಮುಂದಾಗಬೇಕು ಶೈಕ್ಷಣಿಕ,ಹಕ್ಕು ಪಡೆಯದೇ ಹೋದರೆ ಸಮಾಜ ಅಭಿವೃದ್ದಿಯಾಗಲು ಸಾದ್ಯವಿಲ್ಲ ಎಂದರು .
ನೂತನ ಮಾದಿಗ ಮಹಾಸಭಾದ ಅದ್ಯಕ್ಷರಾಗಿ ಆಯ್ಕೆಯಾ ಜಿ.ಹೆಚ್ ಶಂಭುಲಿಂಗಪ್ಪ ಮಾತನಾಡಿದರು ಮಾಜಿ ಸಚಿವರು ಹೆಚ್ ಆಂಜನೇಯವರು ಒಳಮೀಸಲಾತಿಗೆ ಜಾರಿಯಾಗಲು ಅವರ ಅಧಿಕಾರ ಅವಧಿಯಲ್ಲಿ ಸಾಕುಷ್ಟು ಹೋರಾಟ ಮಾಡಿದ್ದುಂಟು ನಮ್ಮ ಹೋರಾಟಗಳು ಕೇವಲ ಭಾಹ್ಯವಾಗಿ ಇದ್ದರೆ ಸಾಲದು ಅಂತರಿಕವಾಗಿ ವಿಧಾನ ಸೌಧದಲ್ಲಿ ಗುಡುಗಬೇಕು ರಾಜಕೀಯ ಪ್ರಾತ್ಯನಿದ್ಯ ಪಡೆದರೆ ನಮ್ಮ ಸೌಲಭ್ಯಗಳನ್ನ ಸಮುದಾಯಕ್ಕೆ ಪರಿಣಾಮಕಾರಿಯಾಗಿ ಒದಗಿಸಲು ಸಹಕಾರಿಯಾಗಲಿದೆ ರಾಜಕೀಯ ಭವಿಷ್ಯಕ್ಕಾಗಿ ಸಮುದಾಯದ ಏಳ್ಗಿಗಾಗಿ ಸಂಘಟನೆ ಅನಿವಾರ್ಯ ಎಂದರು.
ಈ ಸಂದರ್ಭದಲ್ಲಿ ದಸಂಸ ಮುಖಂಡ ಹೆಗ್ಗೆರೆ ರಂಗಪ್ಪ. ಪಪಂ ಮಾಜಿ ಅದ್ಯಕ್ಷ ಪಿ ಮಂಜುನಾಥ .ನೂನತ ಮಾದಿಗ ಮಹಾಸಭಾದ ಉಪಾದ್ಯಕ್ಷ ಹಟ್ಟಿ ತಿಪ್ಪೆಸ್ವಾಮಿ. ವಕೀಲ ಹನುಮಂತಪ್ಪ. ಪಪಂ ಸದಸ್ಯ ದೇವರಾಜ್. ಮಲೆ ಮಾಚಿಕೆರೆ ಸತೀಶ್ ಸಮುದಾಯದ ಮುಖಂಡರುಗಳು ಯುವಕರು ಸೇರಿದಂತೆ ಹಾಜುರಿದ್ದರು

