ಜಗಳೂರು ಬ್ರೇಕಿಂಗ್ ನ್ಯೂಸ್
ಚಲವಾದಿ ಸಮುದಾಯದ ಭವನ ನಿರ್ಮಿಸಲು 2 ಕೋಟಿ ರೂಗಳನ್ನ ಸರ್ಕಾರದಿಂದ ಮಂಜೂರು ಮಾಡಿಸಿ ಭವನ ನಿರ್ಮಾಣಕ್ಕೆ ಒತ್ತು ನೀಡುವೆ.
ಶಾಸಕ ಬಿ.ದೇವೇಂದ್ರಪ್ಪ ಭರವಸೆ ನೀಡಿದರು.
ಜಗಳೂರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ವೀರ ವನತೆ ಒನಕೆ ಒಬವ್ಬನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಶಿಕ್ಷಣ ಸಂಘಟನೆ ಹೋರಾಟದ ಶಕ್ತಿಯಿಂದ ಸರ್ವರು ಶಿಕ್ಷಣ ಪಡೆದು ಉನ್ನತ ಸ್ಥಾನ ಪಡೆದಿದ್ದೆವೆ ಹೊರೆತು ಭಗವದ್ ಗೀತೆಯಿಂದಲ್ಲ ದಲಿತರವಾಣಿ ಸಂವಿಧಾನದ ಪ್ರಿಯಂಬಲ್ ಅದೇ ನಮ್ಮ ಭಗವದ್ ಗೀತೆಯಾಗಿದೆ ಸರ್ಲಾರ ಮಹನೀಯರ ಜಯಂತಿ ಆಚರಣೆಗೆ ಆದೇಶ ಮಾಡದೆ ಹೋಗಿದ್ದರೆ ಮಹನೀಯರ ಚರಿತ್ರೆಗಳು ಮಾಸಿಹೋಗುತ್ತಿದ್ದವು ಎಂದರು
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅದ್ಯಕ್ಷ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾತನಾಡಿ ಚಲವಾದಿ ಸಮಾಜಕ್ಕೆ ತನ್ನದೆಯಾದ ಇತಿಹಾಸವಿದೆ ಒನಕೆ ಒಬವ್ವ ಶೌರ್ಯ ಪರಾಕ್ರಮಿಯಾಗಿದ್ದರು. ಸಮಾಜದಲ್ಲಿ ಹೆಣ್ಣಿನ ಪ್ರಾಮುಖ್ಯತೆ ಬಹುಮುಖ್ಯವಾಗಿದೆ ಅಂದಿನ ಕಾಲ ಘಟದಲ್ಲಿ ವೀರ ವನತೆ ಒನಕೆ ಒಬವ್ವನಂತೆ ಸಾಹಸಮಯ ಹೋರಾಟದ ಮಹಿಳೆಯರು ಪ್ರಸ್ತುತದಲ್ಲಿ ಸಾಧನೆಗೈದಿದ್ದಾರೆ ಎಂದರು.
ಸಮಾಜದ ಮುಖಂಡ ವೀರಸ್ವಾಮಿ ಮಾತನಾಡಿ ನಾಯಕ ಸಮಾಜಕ್ಕೂ ಚಲವಾದಿ ಸಮುದಾಯಕ್ಕೂ ಅವಿನಭಾವ ಸಂಬಂಧವಿದೆ . ಒನಕೆ ಒಬವ್ವನ ದೈರ್ಯ ಸಾಹಸದಿಂದ ಚಿತ್ರದುರ್ಗದ ಇತಿಹಾಸದಲ್ಲಿಯೇ ಅಗ್ರಗಣ್ಯವಾದ ಹೋರಾಟದ ಪ್ರತಿಫಲದಿಂದ ನಾಡು ನುಡಿ ನೆಲ ಜಲ ಕೋಟೆ ಕೊತ್ತಲಗಳ ರಕ್ಷಣೆಯಾಗಿದೆ .ಒಬವ್ವಳ ಸಾಹಸದ ಕಾರ್ಯಕ್ಕೆ ಅಂದು ವೀರ ಮದಕರಿನಾಯಕ ಬಳುವಳಿಯಾಗಿ
ಅಗಸನಕಲ್ಲು ಪ್ರದೇಶವನ್ನ ಮದಕರಿ ನಾಯಕ ಬಿಟ್ಟುಕೊಟ್ಟರು ಅದರೆ ಉಳ್ಳವರು ಇತಿಹಾಸ ತಿರುಚಿರುವುದು ವಿಷಾಧನೀಯ ಎಂದರು.
ಮಾಜಿ ಜಿಪಂ ಸದಸ್ಯ ಕೆ.ಪಿ ಪಾಲಯ್ಯ ಮಾತನಾಡಿದರು ಶೋಷಿತ ಸಮುದಾಯದಲ್ಲಿ ಜನಿಸಿದ ವೀರ ಮಹಿಳೆ ಒನಕೆ ಒಬವ್ವ ಶೌರ್ಯ ಮೆರೆದಿದ್ದಾಳೆ .ಮದಕರಿ ನಾಯಕನ ಸಂಸ್ಥಾನದಲ್ಲಿ ಕೋಟೆ ರಕ್ಷಣೆಗೆ ಶ್ರಮಿಸಿದ ಕೀರ್ತಿ ಒನಕೆ ಒಬವ್ವನಿಗೆ ಸಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ಚಲವಾದಿ ಸಮಾಜದ ಅದ್ಯಕ್ಷ ನಿಜಲಿಂಗಪ್ಪ. ಕುರುಬ ಅದ್ಯಕ್ಷ ಓಮಣ್ಣ. ಸಾಹಿತಿ ಎನ್
ಡಿ. ಎರ್ರಿಸ್ವಾಮಿ. ಚಲವಾದಿ ಸಮಾಜದ ಗೌರವಾಧ್ಯಕ್ಷ ಸಿ.ಲಕ್ಷ್ಮಣ. ವೀರಶೈವ ಸಮಾಜದ ಅದ್ಯಕ್ಷ ಎಂ.ಎಸ್ ಪಾಟೀಲ್. ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಬಿ.ಮಹೇಶ್. ದಲಿತ ಮುಖಂಡ ಜಿ ಎಚ್ ಶಂಭುಲಿಂಗಪ್ಪ. ತಿಪ್ಪೆಸ್ವಾಮಿ.ದನ್ಯಕುಮಾರ್ ಮಾದಿಹಳ್ಳಿ ಮಂಜಪ್ಪ. ಡಿ ಎಸ್ ಎಸ್ ಸಂಚಾಲಕ ಕುಬೇರಪ್ಪ.

