ಶುಕ್ರದೆಸೆ ನ್ಯೂಸ್: ಜಗಳೂರು ಕ್ಷೇತ್ರಕ್ಕೆ ಮೂರು ಮಹತ್ವದ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ನಮಗೂ ಮತ್ತು ನಮ್ಮ ಸರ್ಕಾರದ ಕೊಡುಗೆಯಿಂದ ನೀರಾವರಿ ಯೋಜನೆ ಈ ಬಾಗದ ಜನರ ಬದುಕು ಅಸನಾಗಲಿದೆ ಶಾಸಕ ಎಸ್.ವಿ. ರಾಮಚಂದ್ರ
ಜಗಳೂರು ತಾಲ್ಲೂಕಿಗೆ ಮೂರು ವಿಶೇಷ ನೀರಾವರಿ ಸೌಲಭ್ಯಗಳಿಂದ ಈ ಬಾಗದ ಜನರ ಬದುಕು ಮುಂದಿನ ದಿನಗಳಲ್ಲಿ ಬದಲಾಗಲಿದೆ. ಶನಿವಾರ ತಾಲೂಕಿನ ಗಡಿ ಗ್ರಾಮ ಮಾದಮುತ್ತೆನ ಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ಎಸ್ ವಿ ರಾಮಚಂದ್ರ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಕರ ಪತ್ರ ನೀಡಿ ಮನೆ ಮನೆಗೆ ತೆರಳಿ ಮತಯಾಚನೆಗೆ ಚಾಲನೆ ನೀಡಿ ನಂತರ ಮಾತನಾಡಿದರು.ನಾನು ಈ ಕ್ಷೇತ್ರದ ಶಾಸಕನಾಗಿ ಸಾಕಷ್ಟು ಅಭಿವೃದ್ದಿ ಕೆಲಸವನ್ನು ಮಾಡಿದ್ದೇನೆ ಅರಲ್ಲಿ ಭದ್ರ ಮೇಲ್ದಂಡೆ ನೀರಾವರಿ ಯೋಜನೆ , 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದು ಕಾಮಗಾರಿ ಪ್ರಗತಿ ಅಂತದಲ್ಲಿದೆ ಈ ಯೋಜನೆಗಳಿಂದ ಮುಂದಿನ ದಿನಗಳಲ್ಲಿ ಜಗಳೂರು ಚಿತ್ರಣ ಬದಲಾಗಿ ಬರಪೀಡಿತವೆಂಬ ಹಣೆ ಪಟ್ಟಿಯನ್ನು ಅಳಿಸಲಾಗುವುದು . ಮಾದಮುತ್ತೆನಹಳ್ಳಿ ಗ್ರಾಮಕ್ಕೆ ಸಾಕುಷ್ಟು ಅನುದಾನ ನೀಡಿದ್ದೆನೆ. ಒಂದು ಕೋಟಿಗು ಹೆಚ್ಚು ಅನುದಾನ ನೀಡಿ ಅಭಿವೃದ್ದಿಪಡಿಸಲಾಗಿದೆ ಎಂದು ಭರವಸೆ ಮೂಡಿಸಿದರು .ನಾವು ಮತ್ತು ನಮ್ಮ ಸರ್ಕಾರ ಜಾರಿಗೆ ತಂದಿದ್ದು ಮಹತ್ವದ ಯೋಜನೆಗಳಾದ ಅಪ್ಪರ್ ಭದ್ರಾ 57 ಕೆರೆ ತುಂಬಿಸುವ ಯೋಜನೆ ಜಲಜೀವನ್ ಮಿಷನ್ ಯೋಜನೆ ಬರಪೀಡಿತವೆಂಬ ಎಂಬ ಹಣೆ ಪಟ್ಟಿಯನ್ನು ಅಳಿಸಲು ಅತ್ಯಂತ ಸಹಕಾರಿಯಾಗಿದೆ.ಇಂತ ವಿಶೇಷ ಯೋಜನೆಗಳುನ್ನು ಜಾರಿಗೆ ತರುವಂತ ಕೆಲಸವನ್ನು ನಮ್ಮ ಸರ್ಕಾರ ಮತ್ತು ನಮ್ಮ ಶ್ರಮವಿದೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.
” ಗ್ರಾಮದ ಕಾಡು ಗೋಲ್ಲರ ಆರಾಧ್ಯ ದೈವ ವೀರ ಚಿಕ್ಕಣ್ಣ, ಮ್ಯಾಸ ಬೇಡರ ಹಳ್ಳಿ ಮಾರಮ್ಮ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು ಗ್ರಾಮದ ಸಂಪ್ರದಾಯದಂತೆ ಕಂಬಳಿ, ಮತ್ತು ಬಿದಿರು ಕೋಲನ್ನು ಶಾಸಕರಿಗೆ ವಿಜಯದ ಸಂಕೇತವಾಗಿ ನೀಡಲಾಯಿತು.
ನಂತರ ತಾಲೂಕಿನ ಹುಚ್ಚವ್ವನಹಳ್ಳಿ,ಕೊರಚರಹಟ್ಟಿ,ಹಿರೇ ಮಲ್ಲನ ಹೋಳೆ,ತಾಯಿಟೋಣಿ ಸೇರಿದಂತೆ ತೋರೆಸಾಲು ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೊಕ್ಕೆ ನಾಗಾರಾಜ್, ವಿಧಾನ ಸಭಾ ಉಸ್ತುವಾರಿ ಆರುಂಡಿ ನಾಗರಾಜ್ , ಸಹ ಪ್ರಭಾರಿ ಸಂಜಯ್ ಬಾಯ್ ಪಾಡೊರ. ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಗಡಿಮಾಕುಂಟೆ ಸಿದ್ದೇಶ್ .ಮಾದೆ ಮುತ್ತೆನಹಳ್ಳಿ ಗ್ರಾಮದ ಮುಖಂಡರಾದ ನಿಜಲಿಂಗಪ್ಪ. ಮುಖಂಡರಾದ ಜೆ.ವಿ. ನಾಗರಾಜ್, ಮುಖಂಡ ಬಿದರಕೆರೆ ರವಿಕುಮಾರ್ . ಬಿಸ್ತುವಳ್ಳಿ ಬಾಬು .ಕಸ್ತೂರಿಪುರ ಶಿವಣ್ಣ. ಹೊನಮರಡಿ ಬಾಲರಾಜ್ , ಕಾಂತರಾಜ್. ಮಹೇಶ. ,ಕಾನನಕಟ್ಟೆ ಕೆ ಎಸ್ ಪ್ರಭು. ತಿಪ್ಪೇ ಸ್ವಾಮಿ. ಗಡಿ ಮಾಕುಂಟೆ ಸಿದ್ದೇಶ್. ಇಂದ್ರೇಶ್. ಅರವಿಂದ್ ಪಾಟೀಲ್. ಪೂಜಾರಿ ಸಿದ್ದಪ್ಪ.ಗೌರಿಪುರ ಕುಬೇರಪ್ಪ. ಪಾತ ಲಿಂಗಪ್ಪ..ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.